ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ31 ಬಿಡುಗಡೆ: ಆರಂಭಿಕ ಬೆಲೆ ₹14,999 

Last Updated 25 ಫೆಬ್ರುವರಿ 2020, 12:49 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್‌ಸಂಗ್‌ ಗ್ಯಾಲಕ್ಸಿ 'ಎಂ' ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಎಂ31 ಮಂಗಳವಾರಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

6ಜಿಬಿ ರ್‍ಯಾಮ್‌ + ಸಂಗ್ರಹ ಸಾಮರ್ಥ್ಯ 64 ಜಿಬಿ ಹೊಂದಿರುವ 'ಗ್ಯಾಲಕ್ಸಿ ಎಂ31' ಬೆಲೆ ₹14,999 ನಿಗದಿಯಾಗಿದೆ. 128 ಜಿಬಿ ಸಂಗ್ರಹ ಸಾಮರ್ಥ್ಯ ಮತ್ತು 6ಜಿಬಿ ರ್‍ಯಾಮ್‌ ಒಳಗೊಂಡ ಫೋನ್‌ಗೆ ₹15,999 ನಿಗದಿಯಾಗಿದ್ದು, ಮಾರ್ಚ್‌ 5ರಿಂದ ಖರೀದಿಗೆ ಸಿಗಲಿದೆ.

6.4 ಇಂಚು ಫುಲ್‌ ಎಚ್‌ಡಿ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ, ಎಕ್ಸಿನೋಸ್‌ 9611 ಪ್ರೊಸೆಸರ್‌ ಹೊಂದಿದೆ. 512ಜಿಬಿ ವರೆಗೂ ಸಂಗ್ರಹ ವಿಸ್ತರಿಸಲು ಮೈಕ್ರೊಎಸ್‌ಡಿ ಕಾರ್ಡ್‌ ಸ್ಲಾಟ್‌ ಇದೆ.

ಓಷಿಯನ್‌ ಬ್ಲೂ ಮತ್ತು ಸ್ಪೇಸ್‌ ಬ್ಲ್ಯಾಕ್‌ ಎರಡು ಬಣ್ಣಗಳಲ್ಲಿ ಸಿಗಲಿದೆ. ಹೊಸ ಫೋನ್‌ ಖರೀದಿಗೆ ಅಮೆಜಾನ್‌ ನೊ ಕಾಸ್ಟ್‌ ಇಎಂಐ ಮತ್ತು ಫೋನ್‌ ಎಕ್ಸ್‌ಚೇಂಜ್‌ ಕೊಡುಗೆ ನೀಡುತ್ತಿದೆ.

64ಎಂಪಿ ಪ್ರೈಮರಿ ಸೆನ್ಸರ್‌, 5ಎಂಪಿ ಮ್ಯಾಕ್ರೊ ಲೆನ್ಸ್‌, 8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌ ಮತ್ತು ಡೆಪ್ತ್‌ ಸೆನ್ಸರ್‌ ಸೇರಿದಂತೆ ಹಿಂಬದಿಯಲ್ಲಿ ಒಟ್ಟು ನಾಲ್ಕು ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿಗಾಗಿ 32 ಎಂಪಿ ಕ್ಯಾಮೆರಾ ಇದೆ. 4ಕೆ ವಿಡಿಯೊ ರೆಕಾರ್ಡಿಂಗ್‌, ಸ್ಲೋ ಮೋಶನ್‌ ಹಾಗೂ ಹೈಪರ್‌ ಲ್ಯಾಪ್ಸ್‌ ಆಯ್ಕೆಗಳಿವೆ.

6,000 ಎಂಎಎಚ್‌ ಬ್ಯಾಟರಿ ಈ ಫೋನ್‌ನ ಪ್ರಮುಖ ಆಕರ್ಷಣೆಗಳಲ್ಲೊಂದು. ಡಾಲ್ಬಿ ಆಟಮ್ಸ್‌ ಸಪೋರ್ಟ್‌, ಗೇಮ್‌ ಬೂಸ್ಟರ್‌ ಆಯ್ಕೆಗಳಿವೆ. ಆ್ಯಂಡ್ರಾಯ್ಡ್‌ 10 ಆಧಾರಿತ OneUI 2.0 ಕಾರ್ಯನಿರ್ವಹಣೆ ಹೊಂದಿದೆ.

ಕಳೆದ ವರ್ಷ ಸ್ಯಾಮ್‌ಸಂಗ್‌, ಗ್ಯಾಲಕ್ಸಿ ಎಂ ಸರಣಿಯ ಫೋನ್‌ಗಳನ್ನು ಭಾರತದಲ್ಲಿ ಆನ್‌ಲೈನ್‌–ಎಕ್ಸ್‌ಕ್ಲೂಸಿವ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿ ಪರಿಚಯಿಸಿತ್ತು. 2019ರಲ್ಲಿ ಹಬ್ಬಗಳ ಸಂದರ್ಭದಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಂ30ಎಸ್‌ ಹೆಚ್ಚು ಗ್ರಾಹಕರನ್ನು ಸೆಳೆಯುವ ಮೂಲಕ, ದೇಶದಲ್ಲಿ ಸ್ಯಾಮ್‌ಸಂಗ್‌ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಿತು. ಪ್ರಸ್ತುತ ಗ್ಯಾಲಕ್ಸಿ ಎಂ ಸರಣಿಯಲ್ಲಿ ಎಂ10, ಎಂ20, ಎಂ30, ಎಂ40, ಎಂ10ಎಸ್‌ ಹಾಗೂ ಎಂ30ಎಸ್‌ ಲಭ್ಯವಿದೆ.

ಗ್ಯಾಲಕ್ಸಿ ಎಂ31 ಗುಣಲಕ್ಷಣಗಳು

* ಬ್ಯಾಟರಿ: 6000 ಎಂಎಎಚ್‌

* ಡಿಸ್‌ಪ್ಲೇ: ಸೂಪರ್‌ ಅಮೋಲೆಡ್‌+ಎಫ್‌ಎಚ್‌ಡಿ

* ಕ್ಯಾಮೆರಾ: 64ಎಂಪಿ+8ಎಂಪಿ (ಅಲ್ಟ್ರಾ ವೈಡ್‌)+5ಎಂಪಿ (ಮ್ಯಾಕ್ರೊ)+5ಎಂಪಿ; ಸೆಲ್ಫಿಗಾಗಿ 32ಎಂಪಿ

* ಪ್ರೊಸೆಸರ್‌: ಎಕ್ಸಿನೋಸ್‌ 9611

* ಸಾಮರ್ಥ್ಯ: 6ಜಿಬಿ ರ್‍ಯಾಮ್‌ + 64 ಜಿಬಿ ಸಂಗ್ರಹ (ಬೆಲೆ ₹14,999) /128 ಜಿಬಿ ಸಂಗ್ರಹ+ 6ಜಿಬಿ ರ್‍ಯಾಮ್‌ (ಬೆಲೆ ₹15,999)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT