ಗುರುವಾರ , ಜನವರಿ 27, 2022
27 °C

Samsung Tab A8: ಸ್ಯಾಮ್‌ಸಂಗ್ ಹೊಸ ಟ್ಯಾಬ್ಲೆಟ್ ಬಿಡುಗಡೆ, ಇಲ್ಲಿದೆ ಮಾಹಿತಿ

ಐಎಎನ್‍ಎಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬೇಸಿಕ್ ಫೀಚರ್ ಫೋನ್‌, ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಸ್ಯಾಮ್‌ಸಂಗ್, ಇದೀಗ ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ (Samsung Galaxy Tab A8) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ದೇಶದಲ್ಲಿ ಈ ಟ್ಯಾಬ್ಲೆಟ್‌ನನ ಬೆಲೆ ₹17,999 ಇರಲಿದ್ದು, ಬೂದು, ಗುಲಾಬಿ ಹಾಗೂ ಚಿನ್ನದ ಬಣ್ಣಗಳಲ್ಲಿ ಲಭ್ಯವಿರಲಿದೆ.

10.5 ಇಂಚು ಸ್ಕ್ರೀನ್ ಗಾತ್ರದ ಸ್ಯಾಮ್‌ಸಂಗ್ ಎ8 ಟ್ಯಾಬ್ಲೆಟ್‌ನ ಆರಂಭಿಕ ಬೆಲೆ 3GB RAM ಮತ್ತು 32GB ಸ್ಟೋರೇಜ್ ಆಯ್ಕೆಯ ವೈ–ಫೈ ಮಾದರಿಗೆ ₹17,999 ಆಗಿದೆ. ಈ ಟ್ಯಾಬ್ಲೆಟ್‌ನ ವೈ-ಫೈ ಮಾದರಿಯ 4GB RAM ಮತ್ತು 64GB ಆವೃತ್ತಿ ಮಾದರಿಗೆ ₹19,999 ಹಾಗೂ ವೈ-ಫೈ + 4G ಮಾದರಿಗೆ ₹23,999 ದರ ನಿಗದಿ ಮಾಡಲಾಗಿದೆ.

ಗ್ರಾಹಕರು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ಟ್ಯಾಬ್ಲೆಟ್‌ ಖರೀದಿಸಿದರೆ ₹2 ಸಾವಿರ ಕ್ಯಾಶ್ ಬ್ಯಾಕ್ ಪಡೆಯಬಹುದು ಹಾಗೂ ₹4,499 ಮೌಲ್ಯದ ಬುಕ್ ಕವರ್ ಅನ್ನು ಕೇವಲ ₹999 ಕ್ಕೆ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.

ಒಕ್ಟಾಕೋರ್ ಪ್ರೊಸೆಸರ್, 7040mAh ಸಾಮರ್ಥ್ಯದ ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್‌ ವ್ಯವಸ್ಥೆ, ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆನ್ಸರ್ ಇರುವ ಕ್ಯಾಮೆರಾ, ಮುಂಭಾಗದಲ್ಲೂ ಕ್ಯಾಮೆರಾ ಜತೆಗೆ ಹೊಸ ಸ್ಕ್ರೀನ್ ರೆಕಾರ್ಡರ್ ವ್ಯವಸ್ಥೆಯನ್ನು ಒಳಗೊಂಡಂತೆ ಸ್ಟಿರಿಯೊ ಸ್ಪೀಕರ್‌ಗಳನ್ನು ಈ ಟ್ಯಾಬ್ಲೆಟ್ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು