ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

GALAXY Z FLIP5, GALAXY Z FOLD5 ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ

Published 26 ಜುಲೈ 2023, 13:24 IST
Last Updated 26 ಜುಲೈ 2023, 13:24 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್, ಇಂದು ತನ್ನ ಐದನೇ ತಲೆಮಾರಿನ ಗ್ಯಾಲಕ್ಸಿ ಝಡ್ ಫ್ಲಿಪ್ಸ್ (GALAXY Z FLIP5) ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್5 (GALAXY Z FOLD5) ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೊಳಿಸಿದೆ.

ಆಕರ್ಷಕ ವಿನ್ಯಾಸಗಳು ಪ್ರತಿ ಬಳಕೆದಾರರಿಗೂ ತೆಳು ಮತ್ತು ಕಿರಿದಾದ ವಿನ್ಯಾಸಗಳು, ಕಸ್ಟಮೈಸೇಷನ್ ಆಯ್ಕೆಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯೊಂದಿಗೆ ವಿಶಿಷ್ಟ ಅನುಭವಗಳನ್ನು ನೀಡುತ್ತದೆ.

ಹೊಸ ಫ್ಲೆಕ್ಸ್ ಹಿಂಜ್ ಮಡಚಬಲ್ಲ ಅನುಭವವನ್ನು ಸಾಧ್ಯವಾಗುವಂತೆ ಮಾಡುತ್ತದೆ. ಈ ಡಿವೈಸ್ ಗಳು ಛಾಯಾಚಿತ್ರಗಳನ್ನು ಸೃಜನಶೀಲ ಕೋನಗಳಿಂದ ಸಂಗ್ರಹಿಸಲು ಅಸಾಧಾರಣ ಕ್ಯಾಮರಾ ಸಾಮರ್ಥ್ಯಗಳಾದ ಫ್ಲೆಕ್ಸಿ ಕ್ಯಾಮ್ ಮುಂತಾದವುಗಳನ್ನು ಹೊಂದಿದೆ. ಸದೃಢ ಕಾರ್ಯಕ್ಷಮತೆ ಮತ್ತು ಗರಿಷ್ಠಗೊಳಿಸಿದ ಬ್ಯಾಟರಿಯು ಅತ್ಯಾಧುನಿಕ ಸ್ನಾಪ್ ಡ್ರಾಗನ್ 8 ಜೆನ್ 2 ಮೊಬೈಲ್ ಪ್ಲಾಟ್ ಫೋನ್ ಅನ್ನು ಗ್ಯಾಲಕ್ಸಿಗೆ ಹೊಂದಿದ್ದು ಸ್ಯಾಮ್ ಸಂಗ್ ‍GALAXY ಝಡ್ ಸೀರಿಸ್ ಸ್ಮಾರ್ಟ್ ಫೋನ್ ತೆರೆದಾಗ ಅಥವಾ ಮುಚ್ಚಿದಾಗ ಸಾಧ್ಯವಿರುವುದನ್ನು ಪರಿವರ್ತಿಸಿದೆ.

ಈ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಐಪಿಎಕ್ಸ್8 ಬೆಂಬಲದಿಂದ ಹೆಚ್ಚು ಬಾಳಿಕೆ ಬರುವಂಥದ್ದಾಗಿದ್ದು, ನೀರಿನಿಂದ ರಕ್ಷಣೆ, ಆರ್ಮರ್ ಅಲ್ಯುಮಿನಿಯಂ ಫ್ರೇಮ್ಸ್ ಮತ್ತು ಹಾನಿಯಿಂದ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ.

GALAXY Z FLIP5 ಗ್ಯಾಲಕ್ಸಿ ಸ್ಮಾರ್ಟ್ ಫೋನ್‌ನಲ್ಲಿ ಅತ್ಯಂತ ವೈವಿಧ್ಯಮಯ ಕ್ಯಾಮರಾ ಅನುಭವ ನೀಡುತ್ತದೆ. ಬಳಕೆದಾರರು ರಿಯರ್ ಕ್ಯಾಮರಾದ ಉನ್ನತ ಗುಣಮಟ್ಟದ ಸೆಲ್ಫೀಗಳನ್ನು ಸೆರೆ ಹಿಡಿಯಬಹುದು ಮತ್ತು ಫ್ಲೆಕ್ಸಿಕ್ಯಾಮ್ ನಿಂದ ಅತ್ಯಾಕರ್ಷಕ ಹ್ಯಾಂಡ್ಸ್-ಫ್ರೀ ಫೋಟೋಗಳನ್ನು ಸೆರೆ ಹಿಡಿಯಬಹುದು. ಸುಧಾರಿತ ನೈಟೊಗ್ರಫಿ ಸಾಮರ್ಥ್ಯಗಳು ಫೋಟೋಗಳು ಮತ್ತು ವಿಡಿಯೋಗಳನ್ನು ಸುತ್ತಲಿನ ಬೆಳಕಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಉತ್ತಮಗೊಳಿಸುತ್ತದೆ. ದೂರದಿಂದಲೂ ಫೋಟೋಗಳು ಡಿಜಿಟಲ್ 10ಎಕ್ಸ್ ಝೂಮ್ ನಿಂದ ಅತ್ಯಂತ ಸ್ಪಷ್ಟವಾಗಿರುತ್ತವೆ.

GALAXY ಝಡ್ ಫೋಲ್ಡ್ 5 ತಲ್ಲೀನಗೊಳಿಸುವ, ದೊಡ್ಡ ಸ್ಕ್ರೀನ್ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಅತ್ಯಂತ ತೆಳು ಮತ್ತು ಹಗುರ ಮಡಚುವಿಕೆಯಲ್ಲಿ ನೀಡುತ್ತದೆ. ಗ್ಯಾಲಕ್ಸಿ ಝಡ್ ಸೀರೀಸ್ ನಲ್ಲಿ ಅತ್ಯಂತ ಶಕ್ತಿಯುತ ಕಾರ್ಯಕ್ಷಮತೆ ನೀಡುತ್ತದೆ. ಟಾಸ್ಕ್ ಬಾರ್, ಡ್ರ್ಯಾಗ್ ಅಂಡ್ ಡ್ರಾಪ್ ಮತ್ತು ಮೂರನೇ ಪಕ್ಷದ ಆಪ್ ಗಳ ಆಪ್ಟಿಮೈಸೇಷನ್ ನಂತಹ ವಿಶೇಷತೆಗಳನ್ನು ಹೊಂದಿದೆ. ಬಳಕೆದಾರರಿಗೆ ಎಲ್ಲಿಂದಲೇ ಆದರೂ ಅವರ ಪ್ರಮುಖ ಕೆಲಸಗಳನ್ನು ಪೂರೈಸಲು ಸನ್ನದ್ಧವಾಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT