ಗುರುವಾರ , ಜನವರಿ 21, 2021
23 °C

Samsung Galaxy 2021: ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ S21 ಬಿಡುಗಡೆಗೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Samsung Galaxy Unpacked Event

ಗ್ಯಾಜೆಟ್ ಮತ್ತು ಮೊಬೈಲ್ ಲೋಕದಲ್ಲಿ ಜನಪ್ರಿಯವಾಗಿರುವ, ಜಾಗತಿಕ ಮಾರುಕಟ್ಟೆಯಲ್ಲಿಯೂ ಮನ್ನಣೆ ಗಳಿಸಿರುವ ಸ್ಯಾಮ್‌ಸಂಗ್ ಈ ಬಾರಿ ಗ್ಯಾಲಕ್ಸಿ ಸರಣಿಯಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಸ್ಯಾಮ್‌ಸಂಗ್ ಎಸ್ ಸಿರೀಸ್

ಗ್ಯಾಲಕ್ಸಿ ಫೋನ್ ಸರಣಿಯಲ್ಲಿ ಸ್ಯಾಮ್‌ಸಂಗ್ ಎಸ್, ಎ, ಜೆ, ಎಂ ಮತ್ತು ಎಫ್ ಸಿರೀಸ್ ವಿವಿಧ ಫೋನ್ ಬಿಡುಗಡೆ ಮಾಡುತ್ತಿದೆ. ಅದರಂತೆ ಈ ಬಾರಿ ಪ್ರೀಮಿಯಂ ಎಸ್ ಸಿರೀಸ್ ಹೊಸ ಫೋನ್ ಪರಿಚಯಿಸಲು ಮುಂದಾಗಿದೆ. ಹೊಸ ಗ್ಯಾಲಕ್ಸಿ ಎಸ್ ಸಿರೀಸ್ ಬಿಡುಗಡೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್ ಪ್ಯಾಕ್ಡ್ 2021 ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಜನವರಿ 14ರಂದು ಬಿಡುಗಡೆ

ಹೊಸ ಗ್ಯಾಲಕ್ಸಿ ಎಸ್21 ಸಿರೀಸ್ ಫೋನ್ ಬಿಡುಗಡೆ ಮಾಡಲು ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಈವೆಂಟ್ ಆಯೋಜಿಸಿದೆ. ಹೊಸ ಎಸ್21 ಪ್ರೀಮಿಯಂ ಸರಣಿಯಲ್ಲಿ ಮೂರು ಮಾದರಿಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದರೆ, ಎಸ್21 ಪ್ಲಸ್, ಎಸ್21 ಮತ್ತು ಎಸ್21 ಅಲ್ಟ್ರಾ ಎಂಬ ಮೂರು ಆವೃತ್ತಿ ಲಭ್ಯವಾಗಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಲೈವ್ ಸಮಾರಂಭ

ಹೊಸ ಗ್ಯಾಲಕ್ಸಿ ಎಸ್ ಸಿರೀಸ್ ಫೋನ್ ಬಿಡುಗಡೆ ಕಾರ್ಯಕ್ರಮ ಲೈವ್ ಸ್ಟ್ರೀಮ‌್ ಮೂಲಕ ನಡೆಯಲಿದೆ. Samsung.com ಮೂಲಕ ಜ. 14ರಂದು 10 ಗಂಟೆಗೆ ಹೊಸ ಫೋನ್ ಗ್ಯಾಜೆಟ್ ಲೋಕದಲ್ಲಿ ಲಭ್ಯವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು