ಕೆಲವು ವರ್ಷಗಳ ಹಿಂದೆ ‘ಕೃತಕ ಬುದ್ಧಿಮತ್ತೆ’ (AI) ಇಷ್ಟೊಂದು ಸುದ್ದಿಯಲ್ಲಿರಲಿಲ್ಲ. ಮುಂಬೈನ ಸಿಗ್ನಲ್ನಲ್ಲಿ ಅಳವಡಿಸಿದ್ದ ತಂತ್ರಜ್ಞಾನ ಸಾಕಷ್ಟು ಸುದ್ದಿಯಲ್ಲಿತ್ತು. ಸಿಗ್ನಲ್ನಲ್ಲಿ ನಿಂತ ಕೆಲವರು ಅನಗತ್ಯವಾಗಿ ಹಾರ್ನ್ ಮಾಡುವುದನ್ನು ತಡೆಯುವ ಉದ್ದೇಶದಿಂದ ಮುಂಬೈ ಪೊಲೀಸರು ವಿನೂತನ ತಂತ್ರಜ್ಞಾನ ಆಧಾರಿತ ಕಡಿವಾಣಕ್ಕೆ ಮುಂದಾಗಿದ್ದರು. ಹಾರ್ನ್ ಮಾಡಿದರೆ 90 ಸೆಕೆಂಡ್ ಹೆಚ್ಚುವರಿಯಾಗಿ ಕಾಯುವ ಶಿಕ್ಷೆಯದು.

ಅಭಿವೃದ್ಧಿಯ ಪಥದಲ್ಲಿರುವ ಭಾರತದಲ್ಲಿ ಜನಸಂಖ್ಯೆ ಮಾತ್ರವಲ್ಲ, ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೊಸ ಮಾದರಿಯ ತರಹೇವಾರಿ ವಾಹನಗಳು ದಾಂಗುಡಿ ಇಡುತ್ತಲಿವೆ. ಮೆಟ್ರೊ, ಸಬ್ ಅರ್ಬನ್ ರೈಲು, ನಗರ ಸಾರಿಗೆ, ಟ್ಯಾಕ್ಸಿ, ಆಟೊ – ಹೀಗೆ ಏನೇ ಇರಲಿ. ಸ್ವಂತ ವಾಹನದ ಕನಸನ್ನು ಬೆನ್ನು ಹತ್ತುವವರೇ ಹೆಚ್ಚು. ಇರುವಷ್ಟೇ ರಸ್ತೆಯಲ್ಲಿ ಹೆಚ್ಚುವರಿ ವಾಹನಗಳ ನಿರ್ವಹಣೆಗೆ ಇದೀಗ ಕೃತಕ ಬುದ್ಧಿಮತ್ತೆಯ ಆಧಾರಿತ ಸಿಗ್ನಲ್ಗಳು ನ್ಯೂಯಾರ್ಕ್ನಿಂದ ಸಿಂಗಪುರವರೆಗೂ ಹಾಗೂ ಬೆಂಗಳೂರಿನಿಂದ ದೆಹಲಿಯಂಥ ಮಹಾನಗರಗಳಿಗೂ ಅನಿವಾರ್ಯ ಎಂಬಂತಾಗಿದೆ.

ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದ್ದು, ಎಐ ಆಧಾರಿತ ಕ್ಯಾಮೆರಾಗಳನ್ನು ಜಂಕ್ಷನ್ಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಅವರ ನೋಂದಣಿ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಚಲನ್ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಂಥದ್ದೇ ವ್ಯವಸ್ಥೆಯನ್ನು ಘಾಜಿಯಾಬಾದ್ನಲ್ಲಿ ಅಳವಡಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಸಿಗ್ನಲ್ನಿಂದಾಗಿ ಕೇರಳದಲ್ಲಿ ಶೇ 50ರಷ್ಟು ಅಪಘಾತ ಪ್ರಕರಣಗಳು ಕಡಿಮೆಯಾಗಿದೆ ಎಂದು ಅಲ್ಲಿನ ಸಂಚಾರ ವಿಭಾಗದ ಪೊಲೀಸರು ಹೇಳಿದ್ದಾರೆ.

ಮಿತಿಮೀರಿ ಬೆಳೆಯುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಪರಿಣಾಮಕಾರಿ ತಂತ್ರಜ್ಞಾನ ಎಂದೇ ಜಗತ್ತಿನ ಹಲವು ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾಫಿಕ್ ಸಿಗ್ನಲ್, ಕ್ಯಾಮೆರಾಗಳನ್ನು ಅಳವಡಿಸಿವೆ. ಬೆಂಗಳೂರು, ದೆಹಲಿ, ಕೇರಳ, ಉತ್ತರ ಪ್ರದೇಶ ರಾಜ್ಯಗಳಲ್ಲೂ ಈಗ ಇಂಥ ಸಿಗ್ನಲ್ಗಳು ಮಾನವ ಸಂಪನ್ಮೂಲ ಮೇಲಿನ ಹೊರೆಯನ್ನು ತಗ್ಗಿಸಿರುವುದರ ಜತೆಗೆ, ಅಧಿಕ ವಾಹನ ದಟ್ಟಣೆ ನಿಯಂತ್ರಿಸುವಲ್ಲೂ ಹೆಚ್ಚು ನೆರವಾಗುತ್ತಿವೆ.

ಸಂಚಾರ ವ್ಯವಸ್ಥೆಯಲ್ಲಿ AI

ಭಾರತದ ಬಹುತೇಕ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಿಗ್ನಲ್ಗಳಿದ್ದರೂ ಇಂದಿಗೂ ಸಂಚಾರ ಠಾಣೆಯ ಪೊಲೀಸರೇ ರಸ್ತೆಯಲ್ಲಿ ನಿಂತು ಟ್ರಾಫಿಕ್ಕನ್ನು ನಿಯಂತ್ರಿಸುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನವು ಟ್ರಾಫಿಕ್ ಸಿಗ್ನಲ್ಗಳ ನಿರ್ವಹಣೆಯ ಆಲೋಚನೆಗಳನ್ನೇ ಬದಲಿಸಿದೆ. ಹೀಗಾಗಿ ಬೆಂಗಳೂರಿನಂತ ಅತಿ ಹೆಚ್ಚು ವಾಹನ ಗಿಜಿಗಿಡುವ ನಗರಗಳಲ್ಲೂ ದಿನದ 24 ಗಂಟೆಗಳ ಕಾಲ ಸ್ವಯಂಚಾಲಿತವಾಗಿ ಸಿಗ್ನಲ್ಗಳ ನಿರ್ವಹಣೆ ಸಾಧ್ಯವಾಗಿದೆ.

ಅತಿ ಹೆಚ್ಚು ವಾಹನ ದಟ್ಟಣೆ ಇರುವ ಸಮಯ, ದಿಕ್ಕು ಆಧರಿಸಿ ಸಿಗ್ನಲ್ಗಳು ಸಮಯ ನಿರ್ವಹಿಸುವ ತಂತ್ರಜ್ಞಾನ ಇದಾಗಿದೆ. ಇದಕ್ಕೆ ಹಲವು ಕ್ಯಾಮೆರಾಗಳು ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ ಪೂರಕವಾಗಿ ನೆರವಾಗುತ್ತಿವೆ. ‘ಸಂಯೋಜಿತ ಸಂಚಾರಿ ಜಾರಿ ನಿರ್ವಹಣಾ ವ್ಯವಸ್ಥೆ’ ಸದ್ಯ ಟ್ರಾಫಿಕ್ ಸಿಗ್ನಲ್ಗಳಿಗೆ ನೆರವಾಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ‘ಗ್ರೀನ್ ಸಿಗ್ನಲ್’ (ಹಸಿರು ನಿಶಾನೆ) ಅನ್ನು ನೀಡುವ ‘ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್’(ಎಟಿಸಿಎಸ್)ನ ಪ್ರಾಯೋಗಿಕ ಅನುಷ್ಠಾನ ಬಹುತೇಕ ಯಶಸ್ವಿಯಾಗಿದೆ.

ಈ ಹಿಂದಿನ ವ್ಯವಸ್ಥೆಯಲ್ಲಿ ವಾಹನಗಳಿರಲಿ ಅಥವಾ ಇಲ್ಲದಿರಲಿ ಪ್ರತಿ ಸಿಗ್ನಲ್ನಲ್ಲಿ ನಿರ್ದಿಷ್ಟ ಸಮಯ ಕಾಯುವುದು ಅನಿವಾರ್ಯವಾಗಿರುತ್ತಿತ್ತು. ಆದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಂಡ ನಂತರ, ಹೆಚ್ಚು ವಾಹನ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ‘ಹಸಿರು ನಿಶಾನೆ’ಯನ್ನೂ, ಕಡಿಮೆ ಇರುವಲ್ಲಿ ಕಡಿಮೆ ಸಮಯವನ್ನೂ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ‘ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್’ (ವಿಎಸಿ) ತಂತ್ರಜ್ಞಾನ ಇದಕ್ಕೆ ನೆರವಾಗಿದೆ.

ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಲ್ಲಿ 1,500 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಸುಮಾರು ಒಂಬತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳ ನೆರವನ್ನೂ ಪಡೆದು, ಟ್ರಾಫಿಕ್ ನಿರ್ವಹಣಾ ಕೊಠಡಿಯಲ್ಲಿರುವ ಬೃಹತ್ ಗೋಡೆ ಪರದೆಯ ಮೇಲೆ ಮೂಡುವಂತೆ ಬೆಂಗಳೂರು ಸಂಚಾರ ಪೊಲೀಸರು ಸಜ್ಜುಗೊಳಿಸಿರುವುದು ಈ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಒಂದು ಸ್ಪಷ್ಟ ಉದಾಹರಣೆ.

ಈ ವ್ಯವಸ್ಥೆಯಿಂದಾಗಿ ಕಡಿಮೆ ಸಮಯದಲ್ಲಿ ಒಂದು ಜಂಕ್ಷನ್ನಿಂದ ಮತ್ತೊಂದು ಜಂಕ್ಷನ್ಗೆ ವಾಹನಗಳು ಸಂಚರಿಸಬಹುದಾಗಿದೆ. ಪ್ರತಿ ಸಿಗ್ನಲ್ನಲ್ಲಿ 10 ಸೆಕೆಂಡ್ ಸಮಯ ಉಳಿಸಿದರೂ 10 ಸಿಗ್ನಲ್ ದಾಟುವ ಹೊತ್ತಿಗೆ 100 ಸೆಕೆಂಡ್ ಸಮಯ ಉಳಿತಾಯವಾಗಲಿದೆ. ಇದು ಸಮಯ ಉಳಿತಾಯದ ಜತೆಗೆ, ಇಂಧನ ಉಳಿತಾಯಕ್ಕೂ ದಾರಿಯಾಗಲಿದೆ.

ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನಗಳ ಸಂಚಾರ ಮಾಹಿತಿ ಸಂಗ್ರಹಿಸಿ, ಇದನ್ನು ವಿಶ್ಲೇಷಿಸಿ ಭವಿಷ್ಯದ ಯೊಜನೆಗಳನ್ನು ರೂಪಿಸಲು ಸಾಧ್ಯ. ರಿಯಲ್ ಟೈಂ ಮಾಹಿತಿ ಕಲೆ ಹಾಕಲು ಸ್ಪೀಡ್ ಸೆನ್ಸರ್ಗಳು, ಕ್ಯಾಮೆರಾ, ರಾಡಾರ್ ಅಗತ್ಯ. ಈ ಎಲ್ಲಾ ಸಾಧನಗಳಿಂದ ಸಂಗ್ರಹಿಸುವ ಮಾಹಿತಿಯಿಂದ ವಾಹನ ದಟ್ಟಣೆಯ ನಿರ್ವಹಣೆ ಮಾತ್ರವಲ್ಲ, ಮಾಲಿನ್ಯ ಪ್ರಮಾಣವನ್ನೂ ತಗ್ಗಿಸಲು ಸಾಧ್ಯ ಎಂದು ಇಂಟೆಲ್ ಹೇಳಿದೆ.

ಸ್ಮಾರ್ಟ್ ರಸ್ತೆಗಳಿಂದ ಲಾಭಗಳು

ರಸ್ತೆ ಒತ್ತಡ ತಗ್ಗಲಿದೆ: ಸ್ಮಾರ್ಟ್ ಸಿಗ್ನಲ್ಗಳಿಂದ ಅನಗತ್ಯ ಜಾಮ್ ತಪ್ಪಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ. ಆರಿಝೋನಾದ ಬೆಲ್ ಹೆದ್ದಾರಿಯಲ್ಲಿ ಗ್ರಿಡ್ಸ್ಮಾರ್ಟ್ ವ್ಯವಸ್ಥೆ ಅಳವಡಿಸಲಾಗಿದೆ.

ಸುರಕ್ಷತೆ ಹೆಚ್ಚಲಿದೆ: ರಸ್ತೆಯಲ್ಲಿ ಅಪಘಾತ ಅಥವಾ ಇನ್ಯಾವುದೇ ಅಪರಾಧ ಚಟುವಟಿಕೆಗಳು ನಡೆದಲ್ಲಿ ಅವುಗಳನ್ನು ತಕ್ಷಣ ಪತ್ತೆ ಮಾಡಿ ಅಪರಾಧಿಗಳನ್ನು ಹಿಡಿಯುವ ಹಾಗೂ ಗಾಯಗೊಂಡವರನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯ.

ನಂಬರ್ ಪ್ಲೇಟ್ ಓದುವ ಕ್ಯಾಮೆರಾ: ನಗರ ಪ್ರದೇಶ ಹಾಗೂ ಹೆದ್ದಾರಿಯಲ್ಲಿ ಸಾಗುವ ವಾಹನಗಳ ನೋಂದಣಿ ಸಂಖ್ಯೆ ಇರುವ ಫಲಕದ ಮಾಹಿತಿ ಗ್ರಹಿಸುವ ಈ ಸ್ಮಾರ್ಟ್ ಕ್ಯಾಮೆರಾಗಳು, ಕೆಲವೇ ಕ್ಷಣಗಳಲ್ಲಿ ವಾಹನದ ಮಾಹಿತಿ ಕಲೆ ಹಾಕಲಿದೆ. ಇದರಿಂದ ಪೊಲೀಸ್ ಕಾರ್ಯಾಚರಣೆಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಆಗಲಿದೆ.

ಸಮಸ್ಯೆಗಳನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ: ಟ್ರಾಫಿಕ್ ನಿರ್ವಹಣಾ ಕೊಠಡಿಯಲ್ಲಿ ಕೂತಿರುವ ತಜ್ಞರಿಗೆ ರಸ್ತೆಗಳ ಸಾಕ್ಷಾತ್ ದೃಶ್ಯ ಸಹಿತ ಮಾಹಿತಿ ನೀಡುವ ಕೃತಕ ಬುದ್ಧಿ ಆಧಾರಿತ ತಂತ್ರಜ್ಞಾನದಿಂದ ಮುಂದೆ ಎದುರಾಗಬಹುದಾದ ಸವಾಲುಗಳನ್ನು ತ್ವರಿತವಾಗಿ ಗ್ರಹಿಸಲು ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯ.

ಜಗತ್ತಿನ ಪ್ರಮುಖ ನಗರಗಳಲ್ಲಿ

ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆ ಎಂದೇ ಕುಖ್ಯಾತಿ ಪಡೆದಿರುವ ಭಾರತದ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ತಿರುವುಗಳಲ್ಲಿ ಸ್ವಯಂ ಚಾಲಿತ ಹಾರ್ನ್ ಮೂಲಕ ಚಾಲಕರನ್ನು ಎಚ್ಚರಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವಾಹನಗಳ ವೇಗವನ್ನು ಗ್ರಹಿಸಿ, ಎಚ್ಚರಿಕೆ ನೀಡುವ ಉದ್ದೇಶದಿಂದ ಸ್ವಯಂ ಚಾಲಿತ ಹಾರ್ನ್ ಅಳವಡಿಸಲಾಗಿದೆ.

ಮಾಲಿನ್ಯ ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಬ್ಯಾಟರಿ ಚಾಲಿತ ವಾಹನಗಳು ಚಲನೆಯಲ್ಲಿರುವಾಗಲೇ ಬ್ಯಾಟರಿ ಚಾರ್ಜ್ ಆಗುವಂತೆ ಲೇನ್ ಅಭಿವೃದ್ಧಿಪಡಿಸಿದ ಉದಾಹರಣೆಗಳೂ ಇವೆ. ಇಸ್ರೇಲ್ನ ಟೆಲ್ ಅವೀವ್ ಹಾಗೂ ಇಟಲಿಯಲ್ಲಿ ಬಸ್ಸುಗಳಿಗಾಗಿ ಇಂಥ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ರಸ್ತೆಗಳಲ್ಲಿ ಫೈಬರ್ ಆಪ್ಟಿಕ್ ಸೆನ್ಸರ್ಗಳನ್ನು ಅಳವಡಿಸುವ ಮೂಲಕ ವಾಹನಗಳ ಸಂಚಾರ, ರಸ್ತೆಗಳ ಸ್ಥಿತಿ ಹಾಗೂ ಅಪಘಾತವನ್ನು ಗ್ರಹಿಸಿ ತುರ್ತು ಪರಿಹಾರ ಕೇಂದ್ರಕ್ಕೆ ಮಾಹಿತಿ ನೀಡುವ ವ್ಯವಸ್ಥೆಯು ಅಮೆರಿಕದ ಕನಾಸಸ್ ನಗರದಲ್ಲಿ ಅಳವಡಿಸಲಾಗಿದೆ.

ಹಾಲೆಂಡ್ನಲ್ಲಿ ಸ್ಮಾರ್ಟ್ ಹೆದ್ದಾರಿ ಯೋಜನೆಯಲ್ಲಿ ಸೌರ ತಂತ್ರಜ್ಞಾನ ಬಳಸಿ ಹೊಳೆವ ಮಾರ್ಗಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಹಗಲಿನಲ್ಲಿ ಚಾರ್ಜ್ ಆಗುವ ಈ ಫಲಕಗಳು, ರಾತ್ರಿ ವೇಳೆಯಲ್ಲಿ ಹೊಳೆಯುವ ಮೂಲಕ ಸುರಕ್ಷಿತ ಸಂಚಾರಕ್ಕೆ ಚಾಲಕರಿಗೆ ಮಾರ್ಗದರ್ಶನ ಮಾಡಲಿದೆ.

ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದರ ಜತೆಗೆ, ಇಂಧನ ಮಿತವ್ಯಯ, ಸುರಕ್ಷತೆ ಹಾಗೂ ಆರ್ಥಿಕ ಪ್ರಗತಿಗೂ ‘ಎಐ’ನ ಈ ತಂತ್ರಜ್ಞಾನ ನೆರವಾಗಲಿದೆ. ಸಾರಿಗೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಎಂಬ ತಂತ್ರಜ್ಞಾನವು ಕೇವಲ ಟ್ರಾಫಿಕ್ಗೆ ಮಾತ್ರವಲ್ಲದೆ, ಇನ್ನೂ ಹಲವು ಕ್ಷೇತ್ರಗಳಲ್ಲಿ ನೆರವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.