ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಬೆಳೆಯುತ್ತಿರುವ ಈ ಹೊತ್ತಿನಲ್ಲಿ ನಮ್ಮ ಹಲವು ಕೆಲಸಗಳ ವರ್ತನೆಯಲ್ಲಿ ಬದಲಾವಣೆಯಾಗಿದೆ. ಮೊದಲು ಬಳಸುತ್ತಿದ್ದ ರೀತಿಯಲ್ಲಿ ಸರ್ಚ್ ಇಂಜಿನ್ಗಳನ್ನು ಬಳಸುತ್ತಿಲ್ಲ ನಾವು ಬಳಸುತ್ತಿಲ್ಲ. ಸರ್ಚ್ ಇಂಜಿನ್ಗಳನ್ನು ಬಳಸುವುದರ ಬದಲಿಗೆ ಎಐ ಟೂಲ್ಗಳನ್ನು ಬಳಸುತ್ತಿದ್ದೇವೆ. ಉದ್ಯಮಗಳು ಎಲ್ಲ ಆಟೋಮೇಶನ್ಗೂ ಎಐಯನ್ನು ಬಳಕೆ ಮಾಡುತ್ತಿವೆ.

ಆದರೆ, ಈ ಮಧ್ಯೆ ಎಐ ಬಂದ ಕಾಲದಿಂದಲೇ ನಡುಕ ಶುರುವಾಗಿದ್ದು ಸ್ಪ್ರೆಡ್ಶೀಟ್ಗೆ ಎಂದರೆ ನೀವು ನಂಬಬೇಕು!

‘ಸ್ಪ್ರೆಡ್ಶೀಟ್’ ಅಥವಾ ‘ಎಕ್ಸೆಲ್ ಶೀಟ್’ನ ಪರಿಕಲ್ಪನೆ ಆರಂಭವಾಗಿದ್ದೇ ಫ್ಲಾಪಿ ಡಿಸ್ಕ್ಗಳನ್ನು ನಾವು ಬಳಸುತ್ತಿದ್ದ ಕಾಲದಲ್ಲಿ. ಆದರೆ, ಅದು ಇಂದಿನವರೆಗೂ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಅಷ್ಟೇ ಅಲ್ಲ, ಅದು ತನ್ನ ಅಸ್ತಿತ್ವವನ್ನು ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಲೇ ಇತ್ತು. ಸಾವಿರಾರು ಉದ್ಯೋಗಿಗಳಿರುವ ಕಂಪನಿಗಳು ಕೂಡ ಸ್ಪ್ರೆಡ್ಶೀಟ್ಗಳನ್ನು ಅತ್ಯಂತ ಸಾಮಾನ್ಯವೆಂಬಂತೆ ಬಳಸುತ್ತಿರುತ್ತವೆ. ಹಲವು ಪ್ರೋಸೆಸ್ಗಳಿಗೆ ಸ್ಪ್ರೆಡ್ಶೀಟ್ ಒಂದು ಸುಲಭ ಮತ್ತು ಸರಳ ವಿಧಾನವಾಗಿ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಸಿಆರ್ಎಂ, ಡೇಟಾ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳಿಗೆ ಸ್ಪ್ರೆಡ್ಶೀಟ್ ಕೆಲಸ ಮಾಡುವ ವಿಧಾನದಲ್ಲಿಯೇ ಕಂಪನಿಗಳು ತಮಗೆ ಬೇಕಾದ ಹಾಗೆ ಸಣ್ಣ ಪುಟ್ಟ ಸಾಫ್ಟ್ವೇರ್ಗಳನ್ನೂ ಅಭಿವೃದ್ಧಿಪಡಿಸಿಕೊಂಡಿವೆ. ಇವೆಲ್ಲವುಗಳಿಗೂ ಸ್ಪ್ರೆಡ್ಶೀಟ್ ಒಂದು ರೀತಿಯ ತಾಯಿ ಇದ್ದ ಹಾಗೆ. ಇಡೀ ಉದ್ಯಮ ಮತ್ತು ಸರ್ವೀಸ್ ವಲಯದಲ್ಲಿ ಸ್ಪ್ರೆಡ್ಶೀಟ್ ಎಂಬುದು ಒಂದು ಆಟದ ಮೈದಾನ ಇದ್ದ ಹಾಗೆ. ಆ ಮೈದಾನದಲ್ಲಿ ತಮಗೆ ಬೇಕಾದ ಆಟಗಳನ್ನು ಬೇರೆ ಬೇರೆ ತಂಡಗಳು ಆಡುತ್ತಿದ್ದವು. ಆದರೆ, ಈಗ ಆಟ ಅದೇ ಇದ್ದರೂ, ಮೈದಾನ ಬದಲಾಗುತ್ತಿದೆ!

ಈ ಎಲ್ಲ ಕೆಲಸವನ್ನೂ ಜೆನ್ ಎಐ ಇನ್ನಷ್ಟು ಸುಲಭವಾಗಿ ಮತ್ತು ಸರಳವಾಗಿ, ಅಷ್ಟೇ ಅಲ್ಲ ಇನ್ನೂ ಪರಿಣಾಮಕಾರಿಯಾಗಿ ಮಾಡಬಲ್ಲದು ಎಂಬುದು ಈಗ ಗೊತ್ತಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಸ್ಪ್ರೆಡ್ಶೀಟೇ ಒಂದು ಸಮಸ್ಯೆಯಾಗುತ್ತಿತ್ತು. ಸಮಸ್ಯೆಯನ್ನು ನಿಖರವಾಗಿ ಪರಿಹಾರ ಮಾಡುತ್ತದೆಯಾದರೂ, ಭವಿಷ್ಯದ ಊಹೆ ಮಾಡುವುದಿಲ್ಲ. ಆ ಊಹೆಯನ್ನು ನಾವೇ ಮಾಡಬೇಕು. ವಿಶ್ಲೇಷಣೆ ಮಾಡುವುದಿಲ್ಲ. ಬದಲಿಗೆ, ವಿಶ್ಲೇಷಣೆಗೆ ಡೇಟಾ ಕೊಡುತ್ತದೆ.

ಆದರೆ, ಎಐ ಹಾಗಲ್ಲವಲ್ಲ. ನೀವು ಡೇಟಾ ಕೊಟ್ಟರೆ ಸಾಕು, ವಿಶ್ಲೇಷಣೆ ಮಾಡಿಕೊಡುತ್ತದೆ! ಎಲ್ಲಕ್ಕಿಂತ ಮುಖ್ಯವಾಗಿ ಸಮಯ ಉಳಿತಾಯವಾಗುತ್ತದೆ. ಸ್ಪ್ರೆಡ್ಶೀಟ್ನಲ್ಲಿ ನಾವು ಪಿವೋಟ್ಚಾರ್ಟ್ಗಳನ್ನು ಹಾಕಿಕೊಂಡು, ಅದರಲ್ಲಿ ಸರ್ಕಸ್ ಮಾಡಿಕೊಂಡು ವಿಶ್ಲೇಷಣೆಗೆ ಡೇಟಾ ಸಿದ್ಧಪಡಿಸಿಕೊಳ್ಳಬೇಕು. ಎಐ ಇವೆಲ್ಲವನ್ನೂ ಒಂದು ಕ್ಲಿಕ್ನಲ್ಲಿ ಮಾಡಿ ತೋರಿಸುತ್ತದೆ.

ಸೇವಾವಲಯದಲ್ಲಿ ಸಮಯ ಅತ್ಯಂತ ಮುಖ್ಯ. ಸಾವಿರಾರು ಕಾಲಂಗಳಲ್ಲಿ ಡೇಟಾ ತುಂಬಿಕೊಂಡು ಅದನ್ನು ವಿಶ್ಲೇಷಣೆ ಮಾಡುವುದಕ್ಕೆ ಅಪಾರ ಸಮಯ ಹಿಡಿಯುತ್ತದೆ. ಆದರೆ, ಎಐ ಇಂಥದ್ದನ್ನು ಕೆಲವು ಸೆಕೆಂಡುಗಳಲ್ಲಿ ಮಾಡಿ ನಮ್ಮ ಮುಂದಿಡುತ್ತದೆ.
ಕೆಲವು ತಜ್ಞರು ಊಹಿಸುವ ಪ್ರಕಾರ ಇನ್ನೆರಡು ವರ್ಷದಲ್ಲಿ ಕಂಪನಿಗಳು ಹಾಗೂ ಉದ್ಯಮಿಗಳು ಸ್ಪ್ರೆಡ್ಶೀಟ್ ಕೈಬಿಟ್ಟು ಎಐ ಅನ್ನೇ ಪರ್ಯಾಯವಾಗಿ ಬಳಸಲು ಶುರು ಮಾಡುತ್ತವೆ.

ಸದ್ಯದ ಸನ್ನಿವೇಶದಲ್ಲಿ ಡೇಟಾ ತುಂಬುವುದಕ್ಕೆ ಸ್ಪ್ರೆಡ್ಶೀಟ್ ಬಳಕೆಯಾಗುತ್ತಿದ್ದು, ಅದರ ವಿಶ್ಲೇಷಣೆಗೆ ಮಾತ್ರ ಎಐ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಡೇಟಾ ಇಟ್ಟುಕೊಳ್ಳುವುದು ಮತ್ತು ಅದರ ವಿಶ್ಲೇಷಣೆ ಮಾಡುವುದೆಲ್ಲವನ್ನೂ ಎಐ ಮಾಡುತ್ತದೆ. ಸ್ಪ್ರೆಡ್ಶೀಟ್ನ ಡೇಟಾ ವಿಶ್ಲೇಷಣೆ ಮಾಡುವುದರಲ್ಲಿ ಇರುವ ದೊಡ್ಡ ಸಮಸ್ಯೆಯೇ ಮಾನವ ಸಹಜ ತಪ್ಪುಗಳು! ಅದು ವಿಶ್ಲೇಷಣೆ ಮಾಡಬಹುದಾದ ಡೇಟಾವನ್ನು ನಮ್ಮ ಎದುರು ಇಡುತ್ತದೆ. ಆದರೆ, ನಮ್ಮ ಅನುಕೂಲಕ್ಕೆ ಬೇಕಾದ ಹಾಗೆ ವಿಶ್ಲೇಷಣೆ ಮಾಡಲು ನಾವು ಡೇಟಾವನ್ನು ನಮ್ಮ ಕೈಯಾರೆ ಪ್ರೋಸೆಸ್ ಮಾಡಿಕೊಳ್ಳಬೇಕು. ಅದರ ನಂತರವೇ ಡೇಟಾ ವಿಶ್ಲೇಷಣೆಗೆ ಸಿಗುತ್ತದೆ. ಆದರೆ, ಆ ವಿಶ್ಲೇಷಣೆಯನ್ನಾದರೂ ಮನುಷ್ಯನೇ ಮಾಡಬೇಕು.

ಉದಾಹರಣೆಗೆ, ಹತ್ತಾರು ಕಂಪನಿಗಳ ವರ್ಷಗಟ್ಟಲೆ ಇನ್ವಾಯ್ಸ್ ಡೇಟಾವನ್ನು ಒಂದು ಕಂಪನಿ ಇಟ್ಟುಕೊಂಡಿದೆ ಎಂದುಕೊಳ್ಳೋಣ. ಅದರಲ್ಲಿ ಎಷ್ಟು ಪಾವತಿಯಾಗಿದೆ ಮತ್ತು ಎಷ್ಟು ಪಾವತಿಯಾಗಿಲ್ಲ ಹಾಗೂ ಯಾವ ಕಂಪನಿ ಹೆಚ್ಚು ಬಾಕಿ ಉಳಿಸಿಕೊಂಡಿದೆ ಮತ್ತು ಅದರ ಶೇಕಡವಾರು ಎಷ್ಟು ಎಂಬುದೆಲ್ಲವನ್ನೂ ಕಂಡುಹಿಡಿಯಲು ನಾವು ‘sort’ ಹಾಗೂ ಇತರ ಫಂಕ್ಷನ್ಗಳನ್ನು ಬಳಸಿಕೊಂಡು ಡೇಟಾ ತೆಗೆದುಕೊಳ್ಳಬೇಕು. ಅದರ ನಂತರ ಅದರ ವಿಶ್ಲೇಷಣೆ ಮಾಡಬೇಕು.

ಆದರೆ, ಜೆನ್ ಎಐ ಬಳಸಿದರೆ ಇಷ್ಟೆಲ್ಲ ಸರ್ಕಸ್ ಮಾಡಬೇಕಿಲ್ಲ. ಎಐ ಏಜೆಂಟ್ ನಿರ್ಮಾಣ ಮಾಡಿಕೊಂಡು, ಅದಕ್ಕೆ ಕಾಲಕಾಲಕ್ಕೆ ಎಲ್ಲ ಡೇಟಾ ತುಂಬಿದರೆ, ಲೈವ್ ಆಗಿ ಬೇಕಾದರೂ ಸಹಿತ ನಮಗೆ ಈ ಎಲ್ಲ ಮಾಹಿತಿಯನ್ನು ತಂದಿಡುತ್ತದೆ. ಜೊತೆಗೆ, ನಮಗೆ ಬೇಕಾದ ಹಾಗೆ ಮಾಹಿತಿಯನ್ನು ಬರೆದು ಕೂಡ ಕೊಡುತ್ತದೆ.

ಅಷ್ಟೇ ಅಲ್ಲ, ಸ್ಪ್ರೆಡ್ಶೀಟ್ನ ದೊಡ್ಡ ಮಿತಿ ಏನೆಂದರೆ, ಡೇಟಾವನ್ನು ಬಳಸಿಕೊಂಡು ಈವರೆಗೆ ಏನಾಯಿತು ಎಂದು ಹೇಳಬಹುದೇ ಹೊರತು ಮುಂದೆ ಏನಾಗಲಿದೆ ಎಂಬುದನ್ನು ಹೇಳಲಾಗುವುದಿಲ್ಲ. ಉದಾಹರಣೆಗೆ, ಕಳೆದ ವರ್ಷದಲ್ಲಿ ಹಣಕಾಸಿನ ಪರಿಸ್ಥಿತಿ ಹೀಗಿತ್ತು ಎಂಬ ಡೇಟಾವನ್ನು ಅದು ಕೊಡುತ್ತದೆಯೇ ಹೊರತು, ಮುಂದಿನ ವರ್ಷದ ಹಣಕಾಸಿನ ಪರಿಸ್ಥಿತಿ ಏನಾಗಬಹುದು ಎಂಬ ಸುಳಿವನ್ನು ಕೊಡುವುದಿಲ್ಲ. ಹಿಂದಿನ ವರ್ಷದ ಡೇಟಾ ಇಟ್ಟುಕೊಂಡು ನಾವೇ ಅದನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು. ಆದರೆ, ಜೆನ್ ಎಐನ ಅನುಕೂಲವೇ ಭವಿಷ್ಯವನ್ನೂ ಅದು ನಮಗೆ ಹೇಳಬಲ್ಲದು. ವಿಭಿನ್ನ ಪರಿಸ್ಥಿತಿಯನ್ನು ಕೊಟ್ಟರೆ ಹಿಂದಿನ ಡೇಟಾ ಇಟ್ಟುಕೊಂಡು ಅದು ಊಹೆ ಮಾಡಿ, ಲೆಕ್ಕಾಚಾರ ಮಾಡಿ, ಲಾಭ ನಷ್ಟವನ್ನೂ ಊಹಿಸಬಲ್ಲದು. ಯಾವುದೇ ಉದ್ಯಮಕ್ಕೆ ಅದೊಂದು ದೊಡ್ಡ ಅನುಕೂಲ.

ಸರ್ವೀಸ್ ಸೆಕ್ಟರ್ನಲ್ಲಿ ಇಂಥ ಸಮಯ ಉಳಿತಾಯ ಅತ್ಯಂತ ಮುಖ್ಯ!

ಕೆಲವು ವರ್ಷಗಳ ಹಿಂದೆ ‘ಪೇಜರ್’ ಎಂಬ ಸಾಧನವೊಂದಿತ್ತು ಎಂದು ನಾವು ಈಗ ಹೇಳುವ ಹಾಗೆ, ಮುಂದೆ ಕೆಲವು ವರ್ಷಗಳಲ್ಲಿ ಸರ್ವೀಸ್ ಸೆಕ್ಟರ್ನಲ್ಲಿರುವ ಪರಿಣತರು ಹಿಂದೆಲ್ಲ ನಾವು ಸ್ಪ್ರೆಡ್ಶೀಟ್ನಲ್ಲಿ ಇಂಥ ಸರ್ಕಸ್ಗಳನ್ನೆಲ್ಲ ಮಾಡುತ್ತಿದ್ದೆವು. ಆದರೆ, ಈಗ ಅವೆಲ್ಲ ನೋಡಲೂ ಸಿಗುವುದಿಲ್ಲ ಎಂದು ಹೇಳಬಹುದೇನೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.