ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tecno Pova 3 | ಹೊಸ ಸ್ಮಾರ್ಟ್‌ಫೋನ್ ಬೆಲೆ ₹2000 ಇಳಿಕೆ

ಟೆಕ್‌ನೊ ನೂತನ ಸ್ಮಾರ್ಟ್‌ಫೋನ್ ಬೆಲೆ ಇಳಿಕೆ
Published : 21 ಡಿಸೆಂಬರ್ 2022, 16:07 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಟೆಕ್‌ನೊ, ಇತ್ತೀಚೆಗೆ ಬಿಡುಗಡೆ ಮಾಡಿದ್ದ ಸ್ಮಾರ್ಟ್‌ಫೋನ್ ಒಂದರ ಬೆಲೆಯಲ್ಲಿ ಇಳಿಕೆ ಮಾಡಿದೆ.

ಟೆಕ್‌ನೊ ಪೋವಾ 3 ಸ್ಮಾರ್ಟ್‌ಫೋನ್ ಈ ಮೊದಲು ದೇಶದಲ್ಲಿ ₹11,999 ದರಕ್ಕೆ ಬಿಡುಗಡೆಯಾಗಿತ್ತು. ಈ ಬಾರಿ ಕಂಪನಿ ₹2000 ದರ ಇಳಿಕೆ ಮಾಡಿದ್ದು, ₹9,999ಕ್ಕೆ ಲಭ್ಯವಾಗುತ್ತಿದೆ.

ಟೆಕ್‌ನೊ ಪೋವಾ 3
6.9 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್ ಮತ್ತು Mali G52 GPU ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಅಲ್ಲದೆ, 7,000mAh ಬ್ಯಾಟರಿ ಇದರ ವಿಶೇಷವಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಹಿಂಬದಿಯಲ್ಲಿ 50 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮೆರಾ ಇದೆ. ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

ಎಲೆಕ್ಟ್ರಿಕ್ ಬ್ಲೂ, ಇಕೋ ಬ್ಲ್ಯಾಕ್ ಮತ್ತು ಟೆಕ್ ಸಿಲ್ವರ್ ಬಣ್ಣದಲ್ಲಿ ನೂತನ ಸ್ಮಾರ್ಟ್‌ಫೋನ್ ಲಭ್ಯವಿದೆ ಎಂದು ಟೆಕ್‌ನೊ ಹೇಳಿದೆ.

ಎರಡು ಸಾವಿರ ದರ ಇಳಿಕೆ ಬಗ್ಗೆ ಕಂಪನಿ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT