ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

64MP ಕ್ಯಾಮೆರಾದ ಟೆಕ್‌ನೋ ಕ್ಯಾಮನ್ 16 ಬಿಡುಗಡೆ

Last Updated 12 ಅಕ್ಟೋಬರ್ 2020, 11:11 IST
ಅಕ್ಷರ ಗಾತ್ರ

ಮಧ್ಯಮ ಮತ್ತು ಬಜೆಟ್ ಶ್ರೇಣಿಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ಟೆಕ್‌ನೋ ಕಂಪನಿಯು, 64 ಮೆಗಾಪಿಕ್ಸೆಲ್ ಸಾಮರ್ಥ್ಯದ ನಾಲ್ಕು ಕ್ಯಾಮೆರಾ ಸೆನ್ಸರ್‌ಗಳಿರುವ ಕ್ಯಾಮನ್ 16 ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ.

ಐ ಆಟೋ ಫೋಕಸ್ ಎಂಬ ವೈಶಿಷ್ಟ್ಯವು ಫೋಟೋಗ್ರಫಿಯಲ್ಲಿ ಆಸಕ್ತಿಯಿರುವ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ. ಟೆಕ್‌ನೋ ಕ್ಯಾಮನ್ 16 ಫೋನ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಅಲ್ಟ್ರಾ ನೈಟ್ ಲೆನ್ಸ್ ಕೂಡ ಇದ್ದು, ಮಾನವನ ಕಣ್ಣನ್ನು ಪತ್ತೆ ಮಾಡಿ, ಅದಕ್ಕೆ ಅನುಗುಣವಾಗಿ ಚಿತ್ರಗಳನ್ನು ಒದಗಿಸುವ ವೈಶಿಷ್ಟ್ಯವಿದೆ.

ಹೊಸ ಫೋನ್ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಟ್ರಾನ್ಸಿಯಾನ್ ಇಂಡಿಯಾದ ಸಿಇಒ ಅರಿಜೀತ್ ತಾಲಪತ್ರ, "ಸ್ಫರ್ಧಾತ್ಮಕ ದರದಲ್ಲಿ ಎಲ್ಲರಿಗೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸುವುದು ಕ್ಯಾಮನ್ ಶ್ರೇಣಿಯ ಫೋನ್‌ಗಳ ಮೂಲ ಉದ್ದೇಶ. ಭಾರತೀಯರ ಬೇಡಿಕೆಗಳಿಗೆ ಅನುಗುಣವಾಗಿ ಇದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ" ಹೇಳಿದ್ದಾರೆ.

ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿರುವ ಕ್ಯಾಮನ್ 16, ಫ್ಲಿಪ್‌ಕಾರ್ಟ್ ಜಾಲತಾಣದ 'ಬಿಗ್ ಬಿಲಿಯನ್ ಡೇಸ್' ಮಾರಾಟ ಆರಂಭವಾಗುವ ಅ.16ರಿಂದ 10,999 ರೂ.ಗೆ ಲಭ್ಯವಿದೆ.

ಪ್ರಮುಖ ವೈಶಿಷ್ಟ್ಯಗಳು

ನಾಲ್ಕು ಸೆನ್ಸರ್‌ಗಳುಳ್ಳ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ
ನೈಟ್ ಪೋರ್ಟ್ರೇಟ್, ಮ್ಯಾಕ್ರೋ, ಬಾಡಿ ಶೇಪಿಂಗ್, 10x ಝೂಮ್, ಸ್ಲೋ ಮೋಷನ್, ವಿಡಿಯೊ ಬೊಕೆ ಮುಂತಾದ 'ಪ್ರೋ'

ವೈಶಿಷ್ಟ್ಯಗಳು

ಸೆಲ್ಫೀ ಪ್ರಿಯರಿಗಾಗಿ 16 ಮೆಗಾಪಿಕ್ಸೆಲ್ AI ಆಧಾರಿತ ಸೆಲ್ಫೀ ಕ್ಯಾಮೆರಾ, ಕಣ್ಣನ್ನು ಫೋಕಸ್ ಮಾಡುವ ತಂತ್ರಜ್ಞಾನ
6.8 ಇಂಚಿನ HD+ ಡಾಟ್-ಇನ್-ಡಿಸ್‌ಪ್ಲೇ
ಮೀಡಿಯಾಟೆಕ್ ಹೀಲಿಯೊ ಜಿ70 ಪ್ರೊಸೆಸರ್
4ಜಿಬಿ RAM ಹಾಗೂ 64 ಜಿಬಿ ಮೆಮೊರಿ
5000 mAh ಬ್ಯಾಟರಿ, 18W ವೇಗದ ಚಾರ್ಜಿಂಗ್ ಅನುಕೂಲ
ಆಂಡ್ರಾಯ್ಡ್ 10 ಆಧಾರಿತ ಹಾಯ್ ಒಎಸ್ 7.0 ಕಾರ್ಯಾಚರಣಾ ವ್ಯವಸ್ಥೆ
ಇದಲ್ಲದೆ, ಸ್ಮಾರ್ಟ್ ಸ್ಕ್ಯಾನರ್, ಕಾಲರ್ ರಿಂಗ್ ಟೋನ್, ಕೈಗೆತ್ತಿಕೊಂಡು ಕಿವಿಗೆ ಇರಿಸಿದ ತಕ್ಷಣ ಕರೆ ಸ್ವೀಕಾರ, ಫೋಟೋ ಕಂಪ್ರೆಸರ್, ಸನ್ನೆ ಆಧಾರಿತ ಫ್ಲ್ಯಾಶ್ ಲೈಟ್ - ಮುಂತಾದ ಸ್ಮಾರ್ಟ್ ವೈಶಿಷ್ಟ್ಯಗಳು ಇದರಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT