ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್‌ನೊದಿಂದ ಬಣ್ಣ ಬದಲಾಗುವ ಸ್ಮಾರ್ಟ್‌ಫೋನ್: ಕ್ಯಾಮನ್ 19 ಪ್ರೊ ಬಿಡುಗಡೆ

Last Updated 19 ಸೆಪ್ಟೆಂಬರ್ 2022, 13:37 IST
ಅಕ್ಷರ ಗಾತ್ರ

ನವದೆಹಲಿ: ಟೆಕ್‌ನೊದ ಕ್ಯಾಮನ್ ಸರಣಿಯ ನೂತನ ಸ್ಮಾರ್ಟ್‌ಫೋನ್ ‘ಕ್ಯಾಮನ್ 19 ಪ್ರೊ’ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಬೆಳಕಿನ ಪ್ರಕಾಶಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ನ ಹಿಂಬದಿಯ ಪ್ಯಾನಲ್ ಬಣ್ಣ ಬದಲಾಗಲಿದ್ದು, ಹಲವು ವರ್ಣಗಳಲ್ಲಿ ಕಾಣಿಸಲಿದೆ. ದೇಶದಲ್ಲಿ ಇಂಥ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂದು ಕಂಪನಿ ತಿಳಿಸಿದೆ.

‘ಕ್ಯಾಮನ್ 19 ಪ್ರೊ’ ಸ್ಮಾರ್ಟ್‌ಫೊನ್ ಅನ್ನು ಇದೇ 22ರಿಂದ ಅಮೆಜಾನ್ ಮೂಲಕ ಮುಂಗಡ ಬುಕಿಂಗ್ ಮಾಡಿ ಖರೀದಿಸಬಹುದಾಗಿದೆ ಎಂದು ಟೆಕ್‌ನೊ ಹೇಳಿದೆ.

ವಿಶೇಷತೆಗಳು, ಬೆಲೆ ವಿವರ

‘ಕ್ಯಾಮನ್ 19 ಪ್ರೊ’ ಸ್ಮಾರ್ಟ್‌ಫೊನ್ 13 GB RAM (ವಿಸ್ತರಿಸಬಹುದಾದ ಮೆಮೊರಿ ಫ್ಯೂಷನ್ ತಂತ್ರಜ್ಞಾನ ಒಳಗೊಂಡಿದೆ) ಮತ್ತು 128 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 50 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಇದೆ. 6.8 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, 5000mAh ಬ್ಯಾಟರಿ ಜತೆಗೆ 33W ಫ್ಲ್ಯಾಶ್ ಚಾರ್ಜರ್ ಹೊಂದಿದೆ.

‘ಕ್ಯಾಮನ್ 19 ಪ್ರೊ’ ಸ್ಮಾರ್ಟ್‌ಫೊನ್ ಬೆಲೆ ₹ 17,999 ಆಗಿದೆ. ಇದೇ 22ರಿಂದ ಅಮೆಜಾನ್ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ಎಸ್‌ಬಿಐ ಕಾರ್ಡ್‌ದಾರರಿಗೆ ಶೇ 10ರ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT