ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tecno Camon 20 series: ಟೆಕ್ನೋ ಕ್ಯಾಮನ್ 20 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ

Published : 30 ಮೇ 2023, 13:40 IST
Last Updated : 30 ಮೇ 2023, 13:40 IST
ಫಾಲೋ ಮಾಡಿ
Comments

ಬೆಂಗಳೂರು: ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೋ‘ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.

ಟೆಕ್ನೋ ಕ್ಯಾಮನ್‌ 20 ಸರಣಿಯ ಸ್ಮಾರ್ಟ್‌ಫೋನ್‌ ಇದಾಗಿದ್ದು, ಆಕರ್ಷಕವಾದ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ನ ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ನೀಡಲಾಗಿದೆ. ಆದರೆ ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಭಿನ್ನವಾದ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅದರಂತೆ ಟೆಕ್ನೋ ಕ್ಯಾಮನ್‌ 20 ಸ್ಮಾರ್ಟ್‌ಫೋನ್‌ 6nm ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದರೆ, ಟೆಕ್ನೋ ಕ್ಯಾಮನ್‌ 20 ಪ್ರೊ 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಟೆಕ್ನೋ ಕ್ಯಾಮನ್‌ 20 ಸರಣಿಯು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರಲಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿವೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಟೆಕ್ನೋ ಕ್ಯಾಮನ್ 20 ಸ್ಮಾರ್ಟ್‌ಫೋನ್‌ ಒಂದು ವೇರಿಯೆಂಟ್​ನಲ್ಲಷ್ಟೆ ಬಿಡುಗಡೆ ಆಗಿದೆ. 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ ₹14,999 ಇದೆ. ಇನ್ನು ಕ್ಯಾಮನ್‌ 20ಪ್ರೊ 5G ಸ್ಮಾರ್ಟ್‌ಫೋನ್‌ ಎರಡು ಆಯ್ಕೆಯನ್ನು ಹೊಂದಿದೆ. ಇದರ 8GB RAM + 128GB ಆಯ್ಕೆಗೆ ₹19,999 ಮತ್ತು 8GB RAM + 256GB ಕಾನ್ಫಿಗರೇಶನ್ ಆಯ್ಕೆಗೆ ₹21,999 ನಿಗದಿ ಮಾಡಲಾಗಿದೆ. ಇದು ಸೆರಿನಿಟಿ ಬ್ಲೂ ಮತ್ತು ಡಾರ್ಕ್ ವೆಲ್ಕಿನ್ ಬಣ್ಣಗಳಲ್ಲಿ ಜೂನ್ ಎರಡನೇ ವಾರದಿಂದ ಮಾರಾಟವಾಗಲಿದೆ. ಕೊನೆಯದಾಗಿ ಕ್ಯಾಮನ್‌ 20 ಪ್ರೀಮಿಯರ್ 5G ಸ್ಮಾರ್ಟ್‌ಫೋನ್‌ ಜೂನ್ ಮೂರನೇ ವಾರದಿಂದ ಲಭ್ಯವಾಗಲಿದ್ದು, ಇದರ ಬೆಲೆ ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ಬಿಡುಗಡೆಯಾಗಿರುವ ಫೋನ್‌ಗಳು ಅಮೆಜಾನ್‌ ಹಾಗೂ ರೀಟೇಲ್ ಅಂಗಡಿಗಳಲ್ಲಿ ಫೋನ್ ಲಭ್ಯವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT