ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದ ಟೆಕ್‌ನೊ

3000mAh ಬ್ಯಾಟರಿ ಬೆಂಬಲ ಮತ್ತು 7 ದಿನಗಳ ಬ್ಯಾಟರಿ ಬಾಳಿಕೆ

ಬೆಂಗಳೂರು: ಬಜೆಟ್ ದರದ ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಟೆಕ್‌ನೊ, ಹೊಸ ಮಾದರಿಯ 4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಬಿಡುಗಡೆ ಮಾಡಿದೆ.

ಟೆಕ್‌ನೊ 4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ TR109 ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಒಂದು ಬಾರಿಗೆ 16 ಉಪಕರಣಗಳನ್ನು ಕನೆಕ್ಟ್ ಮಾಡಬಹುದು ಎಂದು ಕಂಪನಿ ಹೇಳಿದೆ.

3000mAh ಬ್ಯಾಟರಿ ಬೆಂಬಲ ಮತ್ತು 7 ದಿನಗಳ ಬ್ಯಾಟರಿ ಬಾಳಿಕೆ ಹೊಸ ವೈ–ಫೈ ಹಾಟ್‌ಸ್ಪಾಟ್‌ನಲ್ಲಿ ಇದೆ ಎಂದು ಟೆಕ್‌ನೊ ತಿಳಿಸಿದೆ.

2.4GHz 300Mbps ವೈಫೈ ಫ್ರಿಕ್ವೆನ್ಸಿ ವ್ಯಾಪ್ತಿಯನ್ನು ಹೊಸ ಟೆಕ್‌ನೊ 4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಅಮೆಜಾನ್ ಮೂಲಕ ಹೊಸ ಟೆಕ್‌ನೊ 4G ಪೋರ್ಟಬಲ್ Wi-Fi ಹಾಟ್‌ಸ್ಪಾಟ್ ಲಭ್ಯವಿದ್ದು, ₹2,499 ದರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT