ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಥಾಮ್ಸನ್‌ ಟಿವಿ ಮಾರಾಟ ಆರಂಭ

ಅಕ್ಷರ ಗಾತ್ರ

ನವದೆಹಲಿ: ಫ್ರೆಂಚ್‌ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಥಾಮ್ಸನ್‌ ಭಾರತದಲ್ಲಿ ಕಾರ್ಯಾಚರಣೆ ಪುನರಾರಂಭಿಸಿದೆ. ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಟಿವಿ ಮಾರಾಟ ಪ್ರಕ್ರಿಯೆಯನ್ನು ಫ್ಲಿಪ್‌ಕಾರ್ಟ್‌ ಮೂಲಕ ಮತ್ತೆ ಆರಂಭಿಸಿದೆ.

ಸರ್ಕಾರ ಸೂಚಿಸಿರುವ ಎಲ್ಲ ಸುರಕ್ಷತ ನಿಯಮಗಳನ್ನು ಅನುಸರಿಸುತ್ತಿದ್ದು, ಕೋವಿಡ್‌–19 ಪ್ರಕರಣಗಳ ಆಧಾರದ ಮೇಲೆ ನಿಗದಿ ಪಡಿಸಲಾಗಿರುವ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಮಾತ್ರವೇ ಥಾಮ್ಸನ್‌ ಟಿವಿ ಪೂರೈಕೆಯಾಗಲಿದೆ. ಭಾರತದಲ್ಲಿ ಸೂಪರ್‌ ಪ್ಲಾಸ್ಟ್ರೋನಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ (ಎಸ್‌ಪಿಪಿಎಲ್‌) ಮಾರಾಟ ಮತ್ತು ತಯಾರಿಕೆಗೆಥಾಮ್ಸನ್‌ ಪರವಾನಗಿ ನೀಡಿದೆ. ಶೇ 33ರಷ್ಟು ಸಿಬ್ಬಂದಿಯೊಂದಿಗೆ ಕಾರ್ಪೊರೇಟ್‌ ಕಚೇರಿ ಕಾರ್ಯಾರಂಭಿಸಿದೆ.

ಸಾಕಷ್ಟು ದಿನಗಳ ನಂತರ ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಕಾರ್ಯಾಚರಣೆ ನಡೆದಿದ್ದು, ದೇಶದಲ್ಲಿ ಗ್ರಾಹಕರಿಗೆ ಭಾರೀ ಬೇಡಿಕೆಯನ್ನು ನಿರೀಕ್ಷಿಸಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಅಗತ್ಯವಾದ ಸಂಗ್ರಹ ಮಾಡಿಕೊಂಡಿರುವುದಾಗಿ ಕಂಪನಿ ಹೇಳಿದೆ.

'ಕಳೆದ 40 ದಿನಗಳಿಂದ ಟಿವಿ ಮಾರಾಟ ನಡೆದಿರದ ಕಾರಣ, ದೇಶದ 15 ಲಕ್ಷ ಮನೆಗಳಲ್ಲಿ ಟಿವಿ ಖರೀದಿಸಲು ಸಾಧ್ಯವಾಗಿಲ್ಲ. ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಆನ್‌ಲೈನ್‌ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಅತ್ಯಗತ್ಯವಲ್ಲದ ಸರಕುಗಳ ಅಡಿಯಲ್ಲಿ ಎಲ್ಲ ವಲಯಗಳಲ್ಲಿಯೂ ಮಾರಾಟಕ್ಕೆ ಅವಕಾಶ ನೀಡುವ ಭರವಸೆ ಇದೆ' ಎಂದು ಎಸ್‌ಪಿಪಿಎಲ್‌ನ ಸಿಇಒ ಅವನೀತ್‌ ಸಿಂಗ್‌ ಮಾರ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT