ಶನಿವಾರ, ಸೆಪ್ಟೆಂಬರ್ 24, 2022
21 °C
ವಿವೊ, ದೇಶದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

Vivo V25 Pro: ಮಾರುಕಟ್ಟೆಗೆ ಬಂತು ನೂತನ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೊ ನೂತನ V25 Pro ಬಿಡುಗಡೆ ಮಾಡಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ ಸಹಿತ ನೂತನ V25 Pro ಪರಿಚಯಿಸಲ್ಪಟ್ಟಿದ್ದು, 5G ಬೆಂಬಲ ಹೊಂದಿದೆ.

ಹೊಸ ವಿವೊ V25 Pro, ಫನ್‌ಟಚ್ ಓಎಸ್ 12 ಬೆಂಬಲ ಹೊಂದಿದ್ದು, ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದೆ.

ವಿವೊ V25 Pro ವೈಶಿಷ್ಟ್ಯಗಳು
ನೂತನ ಸ್ಮಾರ್ಟ್‌ಫೋನ್‌ನಲ್ಲಿ 6.56 ಇಂಚಿನ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ.
ಮೀಡಿಯಾಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ ಬೆಂಬಲ ಹೊಂದಿದ್ದು, 8 GB RAM ಮತ್ತು 12 GB RAM ಆಯ್ಕೆಗಳಲ್ಲಿ ದೊರೆಯಲಿದೆ.

ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8+2 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ವಿನ್ಯಾಸ ಹೊಂದಿದೆ. ಜತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆಯಾಗಿದೆ.

4,830mAh ಬ್ಯಾಟರಿ ಮತ್ತು 66W ಫಾಸ್ಟ್ ಚಾರ್ಜಿಂಗ್ ಇದ್ದು, 128 GB ಮತ್ತು 256 GB ಸ್ಟೋರೇಜ್ ಜತೆಗೆ ದೊರೆಯಲಿದೆ.

ಬೆಲೆ ವಿವರ
8 GB RAM ಮತ್ತು 128 GB ಮಾದರಿಗೆ ₹35,999 ಹಾಗೂ 12 GB RAM + 256 GB ಆವೃತ್ತಿಗೆ ₹39,999 ದರ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು