ನವದೆಹಲಿ: ಮುಂಚೂಣಿಯ ಮೊಬೈಲ್ ತಯಾರಕಾ ಸಂಸ್ಥೆ ವಿವೊ, ಭಾರತದಲ್ಲಿ ಅತಿ ನೂತನ 'Vivo Y18i' ಸ್ಮಾರ್ಟ್‌ಫೋನ್ ಬಿಡುಗಡೊಳಿಸಿದೆ.
ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದು ಉತ್ತಮ ಆಯ್ಕೆಯಾಗಿರಲಿದೆ. ದೇಶದ ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಒದಗಿಸುವ ಗುರಿಯನ್ನು ವಿವೊ ಹೊಂದಿದೆ.
UNISOC T612 ಚಿಪ್‌ಸೆಟ್ ಉತ್ತಮ ನಿರ್ವಹಣೆಯನ್ನು ಒದಗಿಸಲಿದೆ. ಪ್ರಭಾವಿ ಡಿಸ್‌ಪ್ಲೇ, ಅತ್ಯುತ್ತಮ ಕ್ಯಾಮೆರಾ ಹಾಗೂ ವರ್ಧಿತ ಬ್ಯಾಟರಿ ಬಾಳ್ವಿಕೆ ಹೊಂದಿರಲಿದೆ.
ಜಾಗತಿಕ ಬೇಡಿಕೆಗೆ ಅನುಗುಣವಾಗಿ 5ಜಿ ತಂತ್ರಜ್ಞಾನವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಒದಗಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದೆ.
ವೈಶಿಷ್ಟ್ಯತೆಗಳು:
UNISOC T612 ಚಿಪ್‌ಸೆಟ್,
ಒಕ್ಟಾಕೋರ್ ಸೆಟಪ್,
6.56 ಇಂಚಿನ ಸನ್‌ಲೈಟ್ ಡಿಸ್‌ಪ್ಲೇ,
90Hz ರಿಫ್ರೆಶ್ ರೇಟ್,
15W ಫಾಸ್ಟ್ ಚಾರ್ಜಿಂಗ್,
5000mAh ಬ್ಯಾಟರಿ,
13MP ಕ್ಯಾಮೆರಾ, 5MP ಫ್ರಂಟ್ ಕ್ಯಾಮೆರಾ,
IP5 ರೇಟಿಂಗ್ (ವಾಟರ್ ರೆಸಿಸ್ಟನ್ಸ್)