ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ambrane Crest Pro: ಉತ್ತಮ ಗುಣಮಟ್ಟದ ಸ್ಮಾರ್ಟ್‌ವಾಚ್‌– ಇಲ್ಲಿದೆ ವಿವರ

ಫೋನ್‌ ನಮ್ಮಿಂದ 10 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್‌ ಬಂದಾಗ ವಾಚ್‌ ಮೂಲಕವೇ ರಿಸೀವ್‌ ಮಾಡಿ ಮಾತನಾಡಬಹುದು.
Published 6 ಆಗಸ್ಟ್ 2023, 6:41 IST
Last Updated 6 ಆಗಸ್ಟ್ 2023, 6:41 IST
ಅಕ್ಷರ ಗಾತ್ರ

ಆಂಬ್ರೇನ್‌ ಇಂಡಿಯಾ ಕಂಪನಿಯು ಸಾಹಸ ಮತ್ತು ಪ್ರಯಾಣದ ಆಸಕ್ತಿ ಉಳ್ಳವರಿಗಾಗಿ ‘ಕ್ರೆಸ್ಟ್ ಪ್ರೊ’ (Ambrane crest pro) ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ವಿನ್ಯಾಸದಲ್ಲಿ ಸಾಂಪ್ರದಾಯಿಕ ವಾಚ್‌ ಅನ್ನು ಹೋಲುತ್ತದೆಯಾದರೂ ಸ್ಮಾರ್ಟ್‌ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ.

ರೌಂಡ್‌ ಡಯಲ್‌ ಹೊಂದಿದ್ದು, 1.52 ಇಂಚು ಸ್ಕ್ರೀನ್‌, 360X360 ಸ್ಕ್ರೀನ್‌ ರೆಸಲ್ಯೂಷನ್‌, 600 ನೈಟ್ಸ್‌ ಡಿಸ್‌ಪ್ಲೇ ಒಳಗೊಂಡಿದೆ. ಬ್ಲುಟೂತ್‌ ಕಾಲಿಂಗ್‌, ಸ್ಪೋರ್ಟ್ಸ್‌ ಮತ್ತು ಫಿಟ್‌ನೆಸ್‌ ಟ್ರ್ಯಾಕ್‌ಗಳಿರುವುದು ಇದರ ಹೈಲೈಟ್ಸ್ ಆಗಿದೆ. ಪವರ್‌ ಆನ್‌/ಆಫ್‌ ಮಾಡಲು, ಮೆನು ಮತ್ತು ವಾಚ್‌ ಫೇಸ್‌ಗಳನ್ನು ನಿರ್ವಹಿಸಲು ಹಾಗೂ ಸ್ಪೋರ್ಟ್ಸ್‌ ಮೋಡ್‌... ಹೀಗೆ ಒಟ್ಟು ಮೂರು ಬಟನ್‌ಗಳು ಇದರಲ್ಲಿವೆ.

ಮೇಲ್ನೋಟಕ್ಕೆ ಇದರ ಬೆಲ್ಟ್‌ ವಿನ್ಯಾಸ ಆಟಿಕೆಯ ವಾಚ್‌ನಂತೆ ಕಾಣುತ್ತದೆಯಾದರೂ ಗಟ್ಟಿಮುಟ್ಟಾಗಿದೆ. ನನ್ನ ಕೈಗೆ ಕಟ್ಟಿಕೊಂಡಿದ್ದಾಗ ತುಸು ಕಿರಿಕಿರಿ ಆಯಿತು. ಬೆಲ್ಟ್ ಕೈಗೆ ಒತ್ತುವ ಅನುಭವ ಆಯಿತು. ಬಹುಶಃ ಬೆಲ್ಟ್‌ ತುಸು ಮೃದು ಆಗಿದ್ದಿದ್ದರೆ ಆ ರೀತಿ ಆಗುತ್ತಿರಲಿಲ್ಲ. 100 ಸ್ಪೋರ್ಟ್ಸ್ ಮೋಡ್‌, 24X7 ಹೆಲ್ತ್ ಮಾನಿಟರಿಂಗ್‌, 100ಕ್ಕೂ ಹೆಚ್ಚು ವಾಚ್‌ ಫೇಸ್‌, ವಾಯ್ಸ್‌ ಅಸಿಸ್ಟನ್ಸ್‌, ಸ್ಮಾರ್ಟ್‌ ನೋಟಿಫಿಕೇಷನ್‌ ವೈಶಿಷ್ಟ್ಯಗಳು ಇದರಲ್ಲಿವೆ.

ಬ್ಲೂಟೂತ್ 5.0 ಇದ್ದು, ವಾಚ್‌ನೊಂದಿಗೆ ಸಂಪರ್ಕಿಸುವುದು ಸುಲಭ. ಆಂಬ್ರೇನ್‌ ವೇರ್‌ (Ambrane Ware) ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ಮೊಬೈಲ್‌ ಜೊತೆ ಸಂಪರ್ಕಿಸಬೇಕು. ಬ್ಲೂಟೂತ್‌ ಮೂಲಕ ಕಾಲ್‌ ಮಾಡುವ ಮತ್ತು ಸ್ವೀಕರಿಸುವ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ. ಆಡಿಯೊ ಕ್ಲಾರಿಟಿ ಉತ್ತಮವಾಗಿದೆ. ಕಾಂಟ್ಯಾಕ್ಟ್‌ ಸಿಂಕ್‌ ಮಾಡಿಕೊಳ್ಳುವುದರ ಜೊತೆಗೆ ಫೇವರಿಟ್‌ ಕಾಂಟ್ಯಾಕ್ಟ್‌ಗಳನ್ನು ವಾಚ್‌ನಲ್ಲಿ ಸೇವ್‌ ಮಾಡಿಟ್ಟುಕೊಳ್ಳಬಹುದು. ಹೊಸ ನಂಬರ್‌ ಅನ್ನು ಸಹ ವಾಚ್‌ ಮೂಲಕವೇ ಡಯಲ್‌ ಮಾಡಿ ಕಾಲ್‌ ಮಾಡಬಹುದಾಗಿದೆ.

ವಾಚ್‌ನಲ್ಲಿ ವಾಯ್ಸ್‌ ಅಸಿಸ್ಟಂಟ್‌ ಸಕ್ರಿಯಗೊಳಿಸಿದರೆ, ಕೈಯಿಂದ ನಿರ್ವಹಣೆ ಮಾಡುವುದನ್ನು ತಪ್ಪಿಸಬಹುದು. ಫೋನ್‌ ನಮ್ಮಿಂದ 10 ಮೀಟರ್‌ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್‌ ಬಂದಾಗ ವಾಚ್‌ ಮೂಲಕವೇ ರಿಸೀವ್‌ ಮಾಡಿ ಮಾತನಾಡಬಹುದು.

ನೀರಿನಿಂದ ರಕ್ಷಣೆಗೆ ಐಪಿ68 ರೇಟಿಂಗ್ಸ್‌ ಹೊಂದಿದ್ದು, ಔಟ್‌ಡೋರ್‌ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಮ್ಯೂಸಿಕ್‌ ಪ್ಲೇಯರ್‌, ಕ್ಯಾಮೆರಾ ಕಂಟ್ರೋಲ್‌ ವೈಶಿಷ್ಟ್ಯಗಳನ್ನೂ ಹೊಂದಿದೆ. ಇನ್‌ಬಿಲ್ಟ್ ಕಂಪಾಸ್‌ನಲ್ಲಿ ಸುಧಾರಿತ ಸೆನ್ಸರ್‌ ಅಳವಡಿಸಿರುವುದರಿಂದ ಪ್ರಯಾಣದ ದಿಕ್ಕನ್ನು ಹೆಚ್ಚು ನಿಖರವಾಗಿ ಗುರುತಿಸಬಲ್ಲದು. ಬೇಜಾರಾದಾಗ ಸ್ಲೈಡರ್‌, 2048 ಮಿನಿ ಗೇಮ್‌ಗಳು ಮನಸ್ಸಿಗೆ ಒಂದಿಷ್ಟು ಮುದ ನೀಡುತ್ತವೆ. ನೀರಿನಿಂದ ರಕ್ಷಣೇ ಒದಗಿಸಲು ಐಪಿ68 ರೇಟಿಂಗ್ಸ್‌ ಇದೆ. 

ಆ್ಯಪ್‌ನಲ್ಲಿ ಸ್ಮಾರ್ಟ್‌ ನೋಟಿಫಿಕೇಷನ್‌ ಸಕ್ರಿಯಗೊಳಿಸುವ ಆಯ್ಕೆ ಇದೆ. ಅಲ್ಲಿ ಮೆಸೇಜ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌... ಹೀಗೆ ಯಾವೆಲ್ಲಾ ಆ್ಯಪ್‌ಗಳ ನೋಟಿಫಿಕೇಷನ್‌ಗಳನ್ನು ನೋಡಬೇಕು ಎನ್ನುವುದನ್ನು ಆಯ್ಕೆ ಮಾಡಿದರೆ ಅವೆಲ್ಲವೂ ಸ್ಮಾರ್ಟ್‌ವಾಚ್‌ನ ಪರದೆಯಲ್ಲಿ ಕಾಣಿಸುತ್ತವೆ.

ನಿತ್ಯದ ಚಟುವಟಿಕೆಗಳು ಅಂದರೆ ಎಷ್ಟು ಹೆಜ್ಜೆ ನಡೆದಿದ್ದೇವೆ, ಎಷ್ಟು ಹೊತ್ತು ಓಡಿದ್ದೇವೆ. ಅನ್ನುವುದನ್ನು ದಾಖಲಿಸಬಹುದು. ಎಷ್ಟು ಹೊತ್ತು ನಿದ್ರೆ ಮಾಡಿದ್ದೇವೆ. ನಿದ್ರೆಯ ಗುಣಮಟ್ಟ ಹೇಗಿದೆ ಎನ್ನುವುದನ್ನು ಕಂಡುಕೊಳ್ಳಬಹದು. ಹಾರ್ಟ್‌ ರೇಟ್‌ ಮಾನಿಟರ್, ವೆದರ್, ಬ್ಲಡ್‌ ಫ್ರೆಷರ್‌, ಬಿಟಿ ಕ್ಯಾಮೆರಾ ಕಂಟ್ರೋಲ್, ‌ರಿಮೈಂಡ್‌ ಟು ಡ್ರಿಂಕ್, ರಿಮೈಂಡ್ ಟು ಮೂವ್, ಸ್ಟಾಪ್‌ವಾಚ್‌, ಮ್ಯೂಸಿಕ್‌ ಕಂಟ್ರೊಲ್‌, ಥಿಯೇಟರ್ ಮೋಡ್, ಬ್ರೈಟ್‌ನೆಸ್‌ ಅಡ್ಜೆಸ್ಟ್‌ಮೆಂಟ್‌, ಪವರ್ ಸೇವಿಂಗ್ ಮೋಡ್, ಡುನಾಟ್ ಡಿಸ್ಟರ್ಬ್‌ ಹೀಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.  
 
400 ಎಂಎಎಚ್‌ ಬ್ಯಾಟರಿ ಇದ್ದು, ಪೂರ್ತಿ ಚಾರ್ಜ್‌ ಆಗಲು 3 ಗಂಟೆಗೆ ಬೇಕು. ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ 7 ದಿನ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಬ್ಲುಟೂತ್‌ ಕಾಲಿಂಗ್‌ ಆಯ್ಕೆಯನ್ನು ಹೆಚ್ಚು ಬಳಸದೇ ಇದ್ದರೆ, ಸರಾಸರಿ 10 ರಿಂದ 15ದಿನಗಳವಗೂ ಚಾರ್ಜ್‌ ಮಾಡುವ ಅಗತ್ಯ ಬೀಳುವುದಿಲ್ಲ. ಜಾಲತಾಣದಲ್ಲಿ ಇದರ ಎಂಆರ್‌ಪಿ ₹6,999 ಇದ್ದು, ಕಂಪನಿಯು ₹2,499ಕ್ಕೆ ನೀಡುತ್ತಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ₹1,799ಕ್ಕೆ ಲಭ್ಯವಿದೆ.

ಆಂಬ್ರೇನ್‌ ಕ್ರೆಸ್ಟ್ ಪ್ರೊ
ಆಂಬ್ರೇನ್‌ ಕ್ರೆಸ್ಟ್ ಪ್ರೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT