ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ವೈಶಿಷ್ಟ್ಯ ಮತ್ತು ಬೆಲೆಯ ದೃಷ್ಟಿಯಿಂದ ಸಮೃದ್ಧವಾಗಿದೆ. ಪ್ರತಿಯೊಬ್ಬರನ್ನೂ ಸೆಳೆಯಲು ಕೈಗೆಟುಕುವ, ಮಧ್ಯಮ, ಪ್ರೀಮಿಯಂ ಆಯ್ಕೆಗಳಿವೆ. ಒಂದೊಂದು ಕಂಪನಿಗಳು ಒಂದೊಂದು ದರ ಶ್ರೇಣಿಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿವೆ. ಈ ಹಾದಿಯಲ್ಲಿ ವಿವೊ ಕಂಪನಿಯು ₹ 20 ರಿಂದ ₹ 30 ಸಾವಿರದೊಳಗಿನ ಬೆಲೆಯಲ್ಲಿ ಗ್ರಾಹಕರಿಗೆ ಹಲವು ವೈಶಿಷ್ಟ್ಯಗಳನ್ನು ನೀಡುತ್ತಿದೆ.

ವಿವೊ ವಿ20 ಆಕರ್ಷಕ ವಿನ್ಯಾಸ ಹೊಂದಿದೆ. ತೆಳುವಾಗಿದ್ದು, ಕೈಯಲ್ಲಿ ಹಿಡಿದುಕೊಳ್ಳಲು ಹಿತ ಎನಿಸುತ್ತದೆ. ನಾನು ಬಳಸಿದ ಫೋನ್ ಮೂನ್‌ಲೈಟ್ ಸೊನಾಟಾ ಬಣ್ಣದ್ದು. ಇದಲ್ಲದೆ ಮಿಡ್‌ನೈಟ್ ಜಾಜ್ ಹಾಗೂ ಸನ್‌ಸೆಟ್ ಮೆಲೋಡಿ ಬಣ್ಣದಲ್ಲಿಯೂ ಇದೆ. 6.44 ಇಂಚು ಅಮೊಎಲ್‌ಇಡಿ ಡಿಸ್‌ಪ್ಲೇ 20:9 ಆಸ್ಪೆಕ್ಟ್ ರೇಶಿಯೊ ಹೊಂದಿದ್ದು, ಪೂರ್ಣವಾಗಿ ಹೈ ಡೆಫನೀಷನ್ ಪ್ಲಸ್ ರೆಸಲ್ಯೂಷನ್ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾ ಅಳವಡಿಸಲು ಡ್ಯೂಡ್ರಾಪ್ ನಾಚ್ ಬಳಸಲಾಗಿದೆ.

ವೈಡ್ ಆ್ಯಂಗಲ್ ಆಯ್ಕೆಯಲ್ಲಿ ತೆಗೆದಿರುವ ಚಿತ್ರದ ಗುಣಮಟ್ಟ ತುಸು ಕಡಿಮೆ ಇದೆ

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 720ಜಿ ಪ್ರೊಸೆಸರ್, 8 ಜಿಬಿ ರ್‍ಯಾಮ್ ಇದೆ. 64ಎಂಪಿ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ. ಪ್ರೈಮರಿ ಕ್ಯಾಮೆರಾಗೆ ಹೋಲಿಸಿದರೆ ವೈಡ್ ಆ್ಯಂಗಲ್‌ನಲ್ಲಿ ತೆಗೆದ ಚಿತ್ರದ ಗುಣಮಟ್ಟ ತುಸು ಕಡಿಮೆ. ಚಿತ್ರ ತೆಗೆದ ಬಳಿಕ ಝೂಮ್ ಮಾಡಿದರೆ ಚಿತ್ರದ ವಿವರಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಮನೆಯೊಳಗೆ ವಿದ್ಯುತ್ ದೀಪದ ಬೆಳಕಿನಲ್ಲಿ ಹಾಗೂ ದೀಪದ ಬೆಳಕಿನಲ್ಲಿ ತೆಗೆದ ಚಿತ್ರಗಳ ಗುಣಮಟ್ಟ ಅಷ್ಟೇನೂ ತೃಪ್ತಿ ನೀಡಿಲ್ಲ. ಬೊಕೆ ಮತ್ತು ಮ್ಯಾಕ್ರೊ ಮೋಡ್ ಆಯ್ಕೆಗಳು ಚೆನ್ನಾಗಿವೆ. ನೈಟ್ ಮೋಡ್‌ನಲ್ಲಿ ಚಿತ್ರ ತೆಗೆಯುವಾಗ ಕ್ಲಿಕ್ ಮಾಡಿ 4 ರಿಂದ 5 ಸೆಕೆಂಡ್ ಫೋನ್ ಅಲ್ಲಾಡಿಸದೇ ಹಾಗೆಯೇ ಹಿಡಿದುಕೊಂಡಿರಬೇಕು. ಇಲ್ಲವಾದರೆ ಫೋಟೊ ಒರೆಸಿದ ರೀತಿ ಕಾಣುತ್ತದೆ ಅಥವಾ ಬೇರೇನೋ ಸೆರೆಯಾಗುತ್ತದೆ. ಉತ್ತಮವಾಗಿ ಚಿತ್ರಗಳು ಸೆರೆಯಾಗುತ್ತವೆ.

ಸೂಪರ್ ಮ್ಯಾಕ್ರೊ ಮೋಡ್‌ನಲ್ಲಿ ತೆಗೆದಿರುವ ಚಿತ್ರ

ಈ ಹ್ಯಾಂಡ್‌ಸೆಟ್‌ನಲ್ಲಿ ಸೆಲ್ಫಿಗೆ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ 48 ಎಂಪಿ ಎಐ ಐ ಆಟೊ ಫೋಕಸ್ ಕ್ಯಾಮೆರಾ ನೀಡಲಾಗಿದೆ. ಪ್ರಕಾಶಮಾನವಾದ ಹಾಗೂ ಮಂದ ಬೆಳಕಿನಲ್ಲಿಯೂ ಸಹಜ ಮೈಬಣ್ಣದಲ್ಲಿ ಚಿತ್ರಗಳು ಬಹಳ ಚೆನ್ನಾಗಿ ಸೆರೆಯಾಗುತ್ತವೆ. ಮನೆಯೊಳಗೆ ಲೈಟ್ ಹಾಕಿದ್ದಾಗ ತೆಗೆದ ಸೆಲ್ಫಿಯ ಗುಣಮಟ್ಟ ಸ್ವಲ್ಪ ಕಡಿಮೆ ಅನ್ನಿಸಿತು. ಏಕಕಾಲಕ್ಕೆ ಎರಡು ಆ್ಯಪ್‌ಗಳ (ಮಲ್ಟಿಟಾಸ್ಕ್) ನಿರ್ವಹಣೆ ಉತ್ತಮವಾಗಿದೆ.

ವಿಡಿಯೊ ರೆಕಾರ್ಡ್ ಮಾಡುವಾಗ ವಿಡಿಯೊ ಮತ್ತು ಆಡಿಯೊದ ಗುಣಮಟ್ಟ ಚೆನ್ನಾಗಿದೆ. ಅಲ್ಟ್ರಾ ಸ್ಟೇಬಲ್ ಆಯ್ಕೆ ನೀಡಿರುವುದರಿಂದ ವಿಡಿಯೊ ಮಾಡುವಾಗ ಕೈಅಲುಗಾಡಿ, ವಿಡಿಯೊದ ಗುಣಮಟ್ಟ ಹಾಳಾಗುವುದನ್ನು ತಡೆಯಬಹುದು. ಇನ್–ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ರೆಕಗ್ನಿಷನ್ ಆಯ್ಕೆಗಳು ಬಹಳ ವೇಗವಾಗಿ ಕೆಲಸ ಮಾಡುತ್ತವೆ. ಇಯರ್ ಫೋನ್ ನೀಡಿದ್ದು,ಆಡಿಯೊ ಗುಣಮಟ್ಟ ಚೆನ್ನಾಗಿದೆ.

ನೈಟ್ ಮೋಡ್ ಆಯ್ಕೆ ಹಾಗೂ ಫ್ಲ್ಯಾಷ್ ಬಳಸದೇ ತೆಗೆದಿರುವ ಚಿತ್ರ

ಬ್ಯಾಟರಿ: ಬ್ಯಾಟರಿ ಬಾಳಿಕೆ ಉತ್ತಮವಾಗಿದೆ. ಒಂದು ಬಾರಿ ಪೂರ್ತಿ ಚಾರ್ಜ್ ಮಾಡಲು 50 ನಿಮಿಷ ಸಾಕು. ವೇಗವಾಗಿ ಚಾರ್ಜ್ ಮಾಡಲು 33ಡಬ್ಲ್ಯು ಫ್ಲ್ಯಾಷ್ ಚಾರ್ಜ್ ವ್ಯವಸ್ಥೆ ಇದೆ. ವಾಟ್ಸ್‌ಆ್ಯಪ್ ಚಾಟ್ ಅಲ್ಲದೆ, ದಿನಕ್ಕೆ ಸರಿಸುಮಾರು 4 ಗಂಟೆ ವಿಡಿಯೊ ನೋಡುವುದು, ಎರಡರಿಂದ ಮೂರು ಗಂಟೆ ವಾಯ್ಸ್ ಕಾಲ್ ಮಾಡಿದರೂ ಒಂದು ದಿನಕ್ಕೆ ಶೇ 65ರಷ್ಟು ಬ್ಯಾಟರಿ ಖಾಲಿ ಆಗಿದೆ. ಮಾರನೇ ದಿನ ಚಾಟ್ ಮತ್ತು ವಾಯ್ಸ್ ಕಾಲ್ ಮಾತ್ರ ಬಳಸಿದಾಗ ಅರ್ಧ ದಿನದವರೆಗೂ ಬ್ಯಾಟರಿ ಬಾಳಿಕೆ ಬಂದಿದೆ. ಬ್ರೌಸಿಂಗ್, ಚಾಟ್ ಮತ್ತು ವಾಯ್ಸ್ ಕಾಲ್ ಮಾತ್ರವೇ ಬಳಸಿದರೆ ಎರಡು ದಿನಕ್ಕಂತೂ ಕೊರತೆ ಆಗುವುದಿಲ್ಲ. ಒಟ್ಟಾರೆಯಾಗಿ ಮಧ್ಯಮ ಬೆಲೆ ಫೋನ್ ಖರೀದಿಸುವವರು ಇದನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು.

ವೈಶಿಷ್ಟ್ಯ

* ಪರದೆ; 6.44 ಇಂಚು ಅಮೊಎಲ್‌ಇಡಿ ಫುಲ್ ಎಚ್‌ಡಿ ಪ್ಲಸ್

* ಕ್ಯಾಮೆರಾ: 64 ಎಂಪಿ ಕ್ವಾಡ್ ಕ್ಯಾಮೆರಾ

* ಸೆಲ್ಫಿ;44 ಎಂಪಿ ಐಫೋಕಸ್

* ರ್‍ಯಾಮ್; 8ಜಿಬಿ, ಸ್ಟೊರೇಜ್ 128 ಜಿಬಿ. 1ಟಿಬಿವರೆಗೆ ವಿಸ್ತರಣೆ ಸಾಧ್ಯ

* ಪ್ರೊಸೆಸರ್; 2.3 ಗಿಗಾಹರ್ಟ್ಸ್ ಸ್ನ್ಯಾಪ್‌ಡ್ರ್ಯಾಗನ್ 720ಜಿ ಆಕ್ಟಾಕೋರ್

* ಒಎಸ್; ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್ ಒಎಸ್ 11

* ಬ್ಯಾಟರಿ; 4,000 ಎಂಎಎಚ್. ಫ್ಲ್ಯಾಷ್ ಚಾರ್ಜಿಂಗ್. ಯುಎಸ್‌ಬಿ ಟೈಪ್ ಸಿ ಪೋರ್ಟ್

* ಕಾರ್ಡ್ ಸ್ಲಾಟ್; 2 ನ್ಯಾನೊ ಸಿಮ್ ಕಾರ್ಡ್ + 1 ಮೈಕ್ರೊ ಎಸ್‌ಡಿ

* ಬೆಲೆ; 8+128 ಜಿಬಿಗೆ ₹ 24,499. 8+256 ಜಿಬಿಗೆ ₹ 27,990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.