ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕವಾಗಿ ChatGPT ಬ್ಯಾನ್ ಮಾಡಿದ ಸ್ಯಾಮ್‌ಸಂಗ್!

ಇತ್ತೀಚಿಗೆ ಸ್ಯಾಮ್‌ಸಂಗ್ ಕಂಪನಿಯ ಸೂಕ್ಷ್ಮ ದತ್ತಾಂಶ ಚಾಟ್‌ಜಿಪಿಟಿಯಲ್ಲಿ ಸೋರಿಕೆಯಾದ ಬೆನ್ನಲ್ಲೇ ಈ ನಿರ್ಧಾರ ಹೊರ ಬಿದ್ದಿದೆ
Published 3 ಮೇ 2023, 7:00 IST
Last Updated 3 ಮೇ 2023, 7:00 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಮಾಲೀಕತ್ವದ ಆಂತರಿಕ ಡಿವೈಸ್‌ಗಳಲ್ಲಿ ಚಾಟ್ ಜಿಪಿಟಿ ತಂತ್ರಾಂಶವನ್ನು (ಜನರೇಟಿವ್ ಆರ್ಟಿಫಿಸಿಯಲ್ ಇಂಟಲಿಜೆನ್ಸ್‌) ಬಳಸದಿರಲು ಸ್ಯಾಮ್‌ಸಂಗ್ ಕಂಪನಿ ನಿರ್ಧರಿಸಿದೆ.

ಅದೇ ರೀತಿ ಕಂಪನಿಯದ್ದು ಅಲ್ಲದ ಹಾಗೂ ಆಂತರಿಕ ಕಾರ್ಯಗಳಲ್ಲಿ ಬಳಕೆಯಾಗುವ ಡಿವೈಸ್‌ಗಳಲ್ಲೂ ಚಾಟ್‌ಜಿಪಿಟಿಯನ್ನು ಬಳಸದಿರಲು ನಿರ್ಧರಿಸಲಾಗಿದೆ ಎಂದು ಟೆಕ್ ಕ್ರಂಚ್ ವೆಬ್‌ಸೈಟ್ ವರದಿ ಮಾಡಿದೆ.

ಇತ್ತೀಚಿಗೆ ಸ್ಯಾಮ್‌ಸಂಗ್ ಕಂಪನಿಯ ಸೂಕ್ಷ್ಮ ದತ್ತಾಂಶ ಚಾಟ್‌ಜಿಪಿಟಿಯಲ್ಲಿ ಸೋರಿಕೆಯಾದ ಬೆನ್ನಲ್ಲೇ ಈ ನಿರ್ಧಾರ ಹೊರ ಬಿದ್ದಿದೆ.

ಅದೇ ರೀತಿ ಕೃತಕ ಬುದ್ಧಿಮತ್ತೆಯ ತಂತ್ರಾಂಶಗಳಾಗಿರುವ ಮೈಕ್ರೋಸಾಫ್ಟ್ ಬಿಂಗ್, ಗೂಗಲ್ ಬಾರ್ಡ್ ಗಳನ್ನು ಬಳಸದಿರಲು ಸ್ಯಾಮ್‌ಸಂಗ್ ಕ್ರಮ ಕೈಗೊಂಡಿದೆ. ಕೆಲಸಗಾರರಿಗೆ ಸ್ಯಾಮ್‌ಸಂಗ್ ಹಂಚಿರುವ ಡಿವೈಸ್‌ಗಳಿಗೆ ಇದು ಅನ್ವಯ ಆಗಲಿದೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಸ್ಯಾಮ್‌ಸಂಗ್‌ನ ಅಧಿಕೃತ ವಕ್ತಾರರಿಂದ ಯಾವುದೇ ಪ್ರತಿಕ್ರಿಯೆಗಳು ಇದುವರೆಗೆ ವ್ಯಕ್ತವಾಗಿಲ್ಲ.

ಗ್ರಾಹಕರು ಸ್ಯಾಮ್‌ಸಂಗ್‌ನಿಂದ ಖರೀದಿಸುವ ಡಿವೈಸ್‌ಗಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ಟೆಕ್‌ಕ್ರಂಚ್ ಹೇಳಿದೆ.

ಏನಿದು ಚಾಟ್‌ಜಿಪಿಟಿ?

‘ಚಾಟ್‌ಜಿಪಿಟಿ’ ಎಂಬುದು ಒಂದು ಜನರೇಟಿವ್ ಎಐ. ಅಂದರೆ ಕೇಳಿದ ಪ್ರಶ್ನೆಗಳಿಗೆ ಅಂತರ್ಜಾಲದಲ್ಲಿ ಹುಡುಕಾಡಿ ನಿಖರವಾದ ಉತ್ತರವನ್ನು ಒದಗಿಸುವ ಒಂದು ಅಪ್ಲಿಕೇಶನ್‌. ಇದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಮುಕ್ತವಾಗಿರುವ ದತ್ತಾಂಶವನ್ನು ಇದು ಬಳಸಿಕೊಂಡಿದೆ. ಸರಳ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಸಾಮರ್ಥ್ಯವೇ ಇದರ ಹೆಗ್ಗಳಿಕೆ. ಇದನ್ನು ಹುಟ್ಟುಹಾಕಿದ್ದು, ಇಂಥದ್ದೊಂದು ಕನಸು ಕಂಡಿದ್ದು ಉದ್ಯಮಿ ಎಲಾನ್ ಮಸ್ಕ್‌. ಈಗ ಈ ಓಪನ್‌ಎಐ ಸಂಸ್ಥೆಯ ಮಾಲೀಕತ್ವದಲ್ಲಿ ಹೆಚ್ಚಿನ ಪಾಲನ್ನು ಮೈಕ್ರೋಸಾಫ್ಟ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT