ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರ ಪಥ ನಕ್ಷತ್ರಪುಂಜದ ದೈತ್ಯ ಕುಳಿಯ ಮೊದಲ ಚಿತ್ರ ಬಿಡುಗಡೆ

Last Updated 12 ಮೇ 2022, 16:15 IST
ಅಕ್ಷರ ಗಾತ್ರ

ಪ್ಯಾರಿಸ್: ಖಗೋಳಶಾಸ್ತ್ರಜ್ಞರು ಕ್ಷೀರಪಥ ಗ್ಯಾಲಕ್ಸಿಯಲ್ಲಿರುವ ಕಪ್ಪು ಕುಳಿಯ ಮೊದಲ ಚಿತ್ರವನ್ನು ಬಹಿರಂಗಪಡಿಸಿದ್ದಾರೆ.

ಅಂತರರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವು ಗುರುವಾರ ಕ್ಷೀರ ಪಥ ನಕ್ಷತ್ರಪುಂಜದ ಮಧ್ಯಭಾಗದಲ್ಲಿರುವ ಬೃಹತ್ ಕಪ್ಪು ಕುಳಿಯ ಮೊದಲ ಚಿತ್ರವನ್ನು ಅನಾವರಣಗೊಳಿಸಿದೆ. 'ಸಾಜಿಟೇರಿಯಸ್ ಎ' ಎಂದು ಇದನ್ನು ಕರೆಯಲಾಗಿದೆ.

ಈವೆಂಟ್ ಹಾರಿಜನ್ ಟೆಲಿಸ್ಕೋಪ್ (ಇಎಚ್‌ಟಿ) ಕೊಲಾಬರೇಶನ್ ಎಂದು ಕರೆಯಲ್ಪಡುವ ಜಾಗತಿಕ ವಿಜ್ಞಾನಿಗಳ ತಂಡವು ಈ ಚಿತ್ರವನ್ನು ಸೆರೆಹಿಡಿದಿದ್ದು, ಕಪ್ಪು ಕುಳಿಯ ಮೊದಲ ನೇರ ದೃಶ್ಯ ಇದಾಗಿದೆ.

‘ಸ್ಯಾಜಿಟೇರಿಯಸ್ ಎ ಕಪ್ಪು ಕುಳಿಯ ಅತ್ಯುತ್ತಮ ಚಿತ್ರವನ್ನು ಇಂದು ನಿಮಗೆ ತೋರಿಸಲು ತುಂಬಾ ರೋಮಾಂಚನಕಾರಿಯಾಗಿದೆ’ ಎಂದು ಎಎಚ್‌ಟಿ ಯೋಜನಾ ನಿರ್ದೇಶಕ ಹುಯಿಬ್ ವ್ಯಾನ್ ಲ್ಯಾಂಗೆವೆಲ್ಡೆ ಜರ್ಮನಿಯ ಗಾರ್ಚಿಂಗ್‌ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಪ್ಪು ಕುಳಿಗಳಲ್ಲಿ ಗುರುತ್ವಾಕರ್ಷಣೆಯ ಸೆಳೆತವು ತುಂಬಾ ತೀವ್ರವಾಗಿರುತ್ತದೆ. ಬೆಳಕು ಸೇರಿದಂತೆ ಏನೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಕಗ್ಗತ್ತಲ ಕಪ್ಪುಕುಳಿಯ ಸುತ್ತ ಇರುವ ಪ್ರಜ್ವಲಿಸುವ ಅನಿಲ ಅಪರೂಪದ ವಿದ್ಯಮಾನ. ಈ ಕುಳಿಯು ಸೂರ್ಯನಿಗಿಂತ ನಾಲ್ಕು ಮಿಲಿಯನ್ ಪಟ್ಟು ಹೆಚ್ಚು ದೊಡ್ಡದಾಗಿದೆ ಎಂದು ಹೇಳಿದ್ದಾರೆ.

‘ಈ ಅಭೂತಪೂರ್ವ ಅವಲೋಕನಗಳು ನಮ್ಮ ನಕ್ಷತ್ರಪುಂಜದ ಮಧ್ಯಭಾಗದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಮತ್ತಷ್ಟು ಸುಧಾರಿಸಿದೆ’ಎಂದು ತೈವಾನ್‌ನ ಅಕಾಡೆಮಿಯ ಇಎಚ್‌ಟಿ ಪ್ರಾಜೆಕ್ಟ್ ವಿಜ್ಞಾನಿ ಜೆಫ್ರಿ ಬೋವರ್ ಹೇಳಿದರು.

ಈ ಹೊಸ ಅನ್ವೇಷಣೆಯಿಂದ ದೈತ್ಯ ಗಾತ್ರದ ಕಪ್ಪು ಕುಳಿಯ ತನ್ನ ಸುತ್ತಲಿನ ಪ್ರದೇಶದ ಜೊತೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ ಎಂದು ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ (ಸಿಎನ್‌ಆರ್‌ಎಸ್) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬೋವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT