ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2: ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರ್ಣ

Last Updated 21 ಆಗಸ್ಟ್ 2020, 7:00 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರಯಾನ–2 ಯೋಜನೆಯಡಿ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ) ಕಳೆದ ವರ್ಷ ಉಡಾವಣೆ ಮಾಡಿದ್ದ ಆರ್ಬಿಟರ್ ಚಂದ್ರನಲ್ಲಿ ಒಂದು ವರ್ಷ ಪೂರೈಸಿದೆ.

‘ಚಂದ್ರಯಾನ–2 ಚಂದ್ರನ ಕಕ್ಷೆಯಲ್ಲಿ ಒಂದು ವರ್ಷ ಪೂರೈಸಿದೆ. 2019ರ ಆಗಸ್ಟ್ 20ರಂದು ಆರ್ಬಿಟರ್‌ ಅನ್ನು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು’ ಎಂದು ಇಸ್ರೊ ಗುರುವಾರ ಟ್ವೀಟ್ ಮಾಡಿದೆ.

2019ರ ಜುಲೈ 22ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಚಂದ್ರನಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ, ಎಂಟು ವೈಜ್ಞಾನಿಕ ಸಾಧನಗಳನ್ನು ಹೊಂದಿರುವ ಆರ್ಬಿಟರ್ ಯಶಸ್ವಿಯಾಗಿ ಕಕ್ಷೆ ಸೇರಿತ್ತು.

‘ಆರ್ಬಿಟರ್‌ನಲ್ಲಿರುವ ಎಲ್ಲ ಉಪಕರಣಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಚಂದ್ರನ ಸುತ್ತ 4400ಕ್ಕೂ ಹೆಚ್ಚುಸುತ್ತನ್ನು ಪೂರ್ಣಗೊಳಿಸಿದೆ’ ಎಂದೂ ಇಸ್ರೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT