ಮುಂಬೈ: ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರೊಂದಿಗಿನ ವಿಚ್ಛೇದನ ಕುರಿತು ನಟಿ, ಡಾನ್ಸರ್ ಧನಶ್ರಿ ವರ್ಮಾ ಅವರು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ವಿಚ್ಛೇಧನದ ಅಂತಿಮ ವಿಚಾರಣೆ ವೇಳೆ ಚಹಲ್ ಅವರು ಧರಿಸಿರುವ ಟಿ–ಶರ್ಟ್ನಲ್ಲಿದ್ದ ಬರಹದ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.

ಇದೇ ವರ್ಷ ಮಾರ್ಚ್ನಲ್ಲಿ ಚಾಹಲ್ ಮತ್ತು ಧನಶ್ರಿ ಅವರು ವಿಚ್ಛೇದನ ಪಡೆದುಕೊಂಡಿದ್ದರು. ಅಂತಿಮ ವಿಚಾರಣೆ ಸಂದರ್ಭ ಚಹಲ್ ಅವರು ‘Be Your Own Sugar Daddy’ ಎಂಬ ಬರಹ ಹೊಂದಿರುವ ಟಿ–ಶರ್ಟ್ ಧರಿಸಿದ್ದರು. ಇದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಧನಶ್ರಿ, 'ಜನರು ನನ್ನನ್ನು ದೂಷಿಸಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ' ಎಂದು ದೂರಿದ್ದಾರೆ.

‘ವಿಚ್ಛೇದನದ ಬಗ್ಗೆ ಮಾನಸಿಕವಾಗಿ ಸಿದ್ಧವಾಗಿದ್ದರೂ ನ್ಯಾಯಾಲಯದಲ್ಲಿ ನಿಂತಾಗ ಭಾವುಕಳಾದೆ. ತೀರ್ಪು ಏನಾಗಲಿದೆ ಎಂದು ಗೊತ್ತಿದ್ದರೂ ಅಳುತ್ತಿದ್ದೆ. ಆ ಕ್ಷಣ ನನಗೆ ಏನಾಗುತ್ತಿದೆ ಎಂಬುದೇ ಗೊತ್ತಿರಲಿಲ್ಲ. ನಾನು ಅಳುತ್ತಲೇ ಇದ್ದೆ. ಆದರೆ, ತೀರ್ಪು ಹೊರಬರುತ್ತಿದ್ದಂತೆ ಆತ(ಚಾಹಲ್ ) ಮೊದಲು ಹೊರಟು ಹೋದರು’ ಎಂದು ಹೇಳಿದ್ದಾರೆ.

ಟಿ–ಶರ್ಟ್ ಬರಹದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜನರು ನನ್ನನ್ನು ದೂಷಿಸುತ್ತಾರೆ ಎಂದು ಅವರಿಗೆ ಗೊತ್ತು. ಇದೆಲ್ಲ ನನಗೆ ತಿಳಿಯುವ ಮೊದಲೇ ಎಲ್ಲವೂ ಮುಗಿದು ಹೋಗಿತ್ತು. ಅದಾಗಲೇ ಜನರು ನನ್ನನ್ನು ದೂಷಿಸಲು ಶುರು ಮಾಡಿದ್ದರು’ ಎಂದು ಹೇಳಿದ್ದಾರೆ.

‘ಅದನ್ನು ವಾಟ್ಸಪ್ನಲ್ಲಿಯೇ ಹೇಳಬಹುದಿತ್ತು, ಟಿ–ಶರ್ಟ್ ಯಾಕೆ ಧರಿಸಬೇಕಿತ್ತು’ ಎಂದು ಲೇವಡಿ ಮಾಡಿದ್ದಾರೆ.

ವಿಚ್ಚೇಧನದ ಬಗ್ಗೆ ಚಾಹಲ್ ಅವರು ಕೂಡ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಆ ಸಂದರ್ಭ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರವನ್ನೂ ಅವರು ಬಹಿರಂಗಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.