ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2 ಉಡಾವಣೆಯನ್ನು ನೇರವಾಗಿ ನೋಡಲು ನಿಮಗಿದೆ ಅವಕಾಶ!

Last Updated 3 ಜುಲೈ 2019, 4:38 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ಮೇಲಿರುವ ಖನಿಜ, ನೀರು ಹಾಗೂ ಕಂಪನದ ಬಗ್ಗೆ ಅಧ್ಯಯನ ನಡೆಸಲಿರುವ ಬಹುನಿರೀಕ್ಷೆಯ ‘ಚಂದ್ರಯಾನ–2’ ಬಾಹ್ಯಾಕಾಶ ನೌಕೆ ಉಡಾವಣೆಗೊಳ್ಳುವುದನ್ನುನೀವೂ ಕೂಡ ನೇರವಾಗಿ ಕಣ್ತುಂಬಿಕೊಳ್ಳಬಹುದು. ಅದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಆನ್‌ಲೈನ್‌ ನೋಂದಣಿ ಆರಂಭಿಸಲಿದೆ.

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ರಂದು ಮುಂಜಾನೆ 2 ಗಂಟೆ 51 ನಿಮಿಷಕ್ಕೆ ಆರ್ಬಿಟರ್‌, ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಒಳಗೊಂಡ 3.8 ಟನ್ ತೂಕದ ‘ಚಂದ್ರಯಾನ–2’ ಉಪಕರಣಗಳನ್ನು ಹೊತ್ತ ‘ಜಿಎಸ್‌ಎಲ್‌ವಿ ಮಾರ್ಕ್‌ 3’ ರಾಕೆಟ್‌ ಉಡಾವಣೆಗೊಳ್ಳಲಿದೆ. ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತಿರುವ ಇಸ್ರೋ ಇದೇ ಜುಲೈ 4ರಂದು ಆನ್‌ಲೈನ್‌ ನೋಂದಣಿ ಪಕ್ರಿಯೆ ಆರಂಭಿಸುತ್ತಿದೆ.

ಈ ಕುರಿತು ಇಸ್ರೋ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

ಆನ್‌ಲೈನ್‌ ನೋಂದಣಿಗಾಗಿ ಯಾವುದೇ ಲಿಂಕ್‌ ಅಥವಾ ಮೈಕ್ರೋಸೈಟನ್ನಾಗಲಿ ಇಸ್ರೋ ನೀಡಿಲ್ಲ. ಅಲ್ಲದೇ, ನೋಂದಣಿ ಪ್ರಕ್ರಿಯೆ ಎಂದು ಕೊನೆಗೊಳ್ಳಲಿದೆ ಎಂಬುದನ್ನೂ ಇಸ್ರೋ ತಿಳಿಸಿಲ್ಲ. ಬಹುತೇಕ ಜುಲೈ3 ಅಥವಾ ನೋಂದಣಿಪ್ರಕ್ರಿಯೆ ಆರಂಭವಾದಾಗ ಈ ಎಲ್ಲ ಮಾಹಿತಿಗಳನ್ನೂ ಇಸ್ರೋ ನೀಡುವಸಾಧ್ಯತೆಗಳಿವೆ.

ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಸ್ಟೇಡಿಯಂ ಮಾದರಿಯ ವೀಕ್ಷಕರಗ್ಯಾಲರಿ ವ್ಯವಸ್ಥೆ ಇದೆ. 5000 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಗ್ಯಾಲರಿ ಹೊಂದಿದೆ. ಹೆಸರು ನೋಂದಣಿ ಮಾಡಿಕೊಂಡವರು ಈ ಗ್ಯಾಲರಿ ಮೂಲಕ ಉಡಾವಣೆಯನ್ನು ಕಣ್ತುಂಬಿಕೊಳ್ಳಬಹುದು.

ಜುಲೈ 15ರಂದು ಉಡಾವಣೆಗೊಲ್ಳುವ ಚಂದ್ರಯಾನ–2ನಲ್ಲಿರುವ ಲ್ಯಾಂಡರ್‌ ಸೆ‍ಪ್ಟೆಂಬರ್ 6 ಅಥವಾ 7ರಂದು ಚಂದ್ರನ ಕತ್ತಲೆಯ ಭಾಗದಲ್ಲಿ (ದಕ್ಷಿಣ ಧ್ರುವ) ಇಳಿಯಲಿದೆ. ನಂತರ ಅದರಲ್ಲಿರುವ ಪ್ರಜ್ಞಾನ್‌ ರೋವರ್‌ ಅಧ್ಯಯನ ಕಾರ್ಯ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT