ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯ ನಿರ್ವಹಿಸದ ಅಂಗಾಂಗಗಳು ಮಾಯವಾಗುತ್ತಿವೆ!

Last Updated 9 ಜೂನ್ 2019, 14:16 IST
ಅಕ್ಷರ ಗಾತ್ರ

ನಮ್ಮ ದೇಹದಲ್ಲಿರುವ ಅಂಗಾಂಗಳೆಲ್ಲವೂ ಮುಖ್ಯ. ಪ್ರತಿ ಅಂಗವೂ ಯಾವುದಾದರೂ ಒಂದು ರೂಪದಲ್ಲಿ ನಿತ್ಯದ ಕೆಲಸಗಳಗೆನೆರವಾಗುತ್ತದೆ. ಕಹಿಸತ್ಯವೇನೆಂದರೆ ನಮ್ಮ ದೇಹದಲ್ಲಿರುವ ಕೆಲವು ಅಂಗಾಂಗಳು ಇದ್ದೂ ಇಲ್ಲದಂತೆ ಇವೆ. ಅಂದರೆ ಅವುಗಳಿಂದ ಯಾವ ಉಪಯೋಗವೂ ಇಲ್ಲ ಎಂದು ಅರ್ಥ. ಆಹಾರ ಅಭ್ಯಾಸಗಳು, ಜೀವನಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.

ಈ ಬದಲಾವಣೆಯ ಪರಿಣಾಮ ದೇಹದ ಕೆಲವು ಅಂಗಾಂಗಳಿಗೆ ಯಾವುದೇ ಕೆಲಸ ಇರುವುದಿಲ್ಲ. ಈ ರೀತಿ ಕೆಲಸವಿಲ್ಲದ ಅಂಗಾಂಗಳು ಕೆಲವು ಪೀಳೆಗೆಯ ನಂತರ ದೇಹದಲ್ಲಿ ರೂಪುಗೊಳ್ಳುವುದೇ ಇಲ್ಲವಂತೆ! ಈ ವಿಷಯವನ್ನು ಜೀವವಿಕಾಸ ಸಿದ್ಧಾಂತದ ಪ್ರತಿಪಾದಕರಾದ ಚಾರ್ಲ್ಸ್ ಡಾರ್ವಿನ್ ತಿಳಿಸಿದ್ದಾರೆ. ಪ್ರಸ್ತುತ, ಯಾವುದೇ ಕೆಲಸವಿಲ್ಲದ ಅಂಗಾಂಗಳುಸಾವಿರಾರು ಅಥವಾ ಲಕ್ಷಾಂತರ ವರ್ಷಗಳ ನಂತರ ನಮ್ಮ ದೇಹದಲ್ಲಿ ಇರುವುದಿಲ್ಲ ಎಂದು ಅವರು ಹೇಳುತ್ತಾರೆ. ಈ ಕ್ರಿಯೆಯನ್ನು ಅವರು ‘ಪ್ರಕೃತಿ ಮಾಡುವ ಸಹಜ ಆಯ್ಕೆ’ ಎಂದು ಹೇಳಿದ್ದಾರೆ.

ಈ ವಿಷಯವನ್ನು ಉದಾಹರಣೆ ಸಮೇತ ತಿಳಿಸುವುದಕ್ಕಾಗಿ ನಮ್ಮ ದೇಹದಲ್ಲಿ ಈಗ ಕೆಲಸವಿಲ್ಲದೇ ಇರುವಂತಹ ಕೆಲವು ಅಂಗಾಂಗಳ ಬಗ್ಗೆ ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ.

ಜ್ಞಾನದಂತಗಳು
ಮಾನವನೂ ಸೇರಿದಂತೆ ಹಲವು ಸಸ್ಯಹಾರಿ ಪ್ರಾಣಿಗಳಿಗೆ 32 ಹಲ್ಲುಗಳಿವೆ. ಇದರಲ್ಲಿ ಆಹಾರ ಜಗಿಯುವುದಕ್ಕೆ ನೆರವಾಗುವ ದವಡೆ ಭಾಗದ ನಾಲ್ಕು ದಂತಗಳನ್ನು ‘ಜ್ಞಾನದಂತಗಳು’ ಎನ್ನುತ್ತಾರೆ. ನಮ್ಮ ಪೂರ್ವಜರು ಸೇವಿಸುತ್ತಿದ್ದ ಬಹುತೇಕ ಆಹಾರ ಪದಾರ್ಥಗಳು ಗಟ್ಟಿಯಾಗಿರುತ್ತಿದ್ದವು. ಅದನ್ನು ಅಗೆದು ತಿನ್ನಬೇಕಿತ್ತು. ಈ ಕ್ರಿಯೆಗೆ ಜ್ಞಾನದಂತಗಳು ನೆರವಾಗುತ್ತಿದ್ದವು.

ಪ್ರಸ್ತುತ ಹಲವರು ಇಷ್ಟಪಟ್ಟು ಸೇವಿಸುತ್ತಿರುವ ಆಹಾರ ಪದಾರ್ಥಗಳು ಅಥವಾ ಖಾದ್ಯಗಳನ್ನು ಜಗಿಯುವ ಅಗತ್ಯವೇ ಇಲ್ಲ. ಐಸ್‌ಕ್ರೀಂ, ಸೂಪ್‌ನಂತಹ ಪದಾರ್ಥಗಳ ಸೇವನೆಯಿಂದ ಹಲ್ಲುಗಳಿಗೆ ಕೆಲಸವೇ ಇರುವುದಿಲ್ಲ. ಅತಿಯಾಗಿ ಬೇಯಿಸಿ ತಿನ್ನುವ ಅಭ್ಯಾಸವೂ ಹೆಚ್ಚಾಗುತ್ತಿರುವುದರಿಂದ ಅಗೆಯುವ ಕೆಲಸವೇ ಇಲ್ಲ. ಹೀಗಾಗಿಯೇ ಜ್ಞಾನದಂತಗಳ ಅಗತ್ಯವೂ ಇಲ್ಲದಂತಾಗುತ್ತಿದೆ. ಪ್ರಸ್ತುತ ಜನಿಸುತ್ತಿರುವ ಹಲವು ಮಕ್ಕಳಿಗೆ ಜ್ಞಾನ ದಂತಗಳು ಸರಿಯಾಗಿ ಬೆಳೆಯುತ್ತಿಲ್ಲ. ಒಂದುವೇಳೆ ಆ ಹಲ್ಲುಗಳು ಮೂಡಿದರೂಅದಕ್ಕೆ ತಕ್ಕಂತೆ ದವಡೆಗಳು ರಚನೆಯಾಗುತ್ತಿಲ್ಲ.ಹೀಗಾಗಿ ಕೆಲವು ಬಗೆಯ ಸೋಂಕುಗಳು ತಾಕಿ ಸಮಸ್ಯೆಯಾಗಿ ಕಾಡುತ್ತಿವೆ.

ಎಪೆಂಡಿಕ್ಸ್
ಈ ಅಂಗವು,ನಮ್ಮ ದೇಹದ ಬಲಭಾಗದ ದೊಡ್ಡಕರಳನ್ನು ಅಂಟಿಕೊಂಡಿರುತ್ತದೆ. ಒಂದು ಕಾಲದಲ್ಲಿ ಮಾನವರೆಲ್ಲಾ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆಯುವ ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದರು.ಇಂತಹ ಎಲೆಗಳು ಜೀರ್ಣವಾಗುವುದಕ್ಕೆ ನೆರವಾಗುವ ಎಂಜೈಮ್‌ಗಳನ್ನು ಅಪೆಂಡಿಕ್ಸ್ ಬಿಡುಗಡೆ ಮಾಡುತ್ತದೆ.ಪ್ರಸ್ತುತ ಇಂತಹ ಎಲೆಗಳನ್ನು ಸೇವಿಸುವುದು ಕಡಿಮೆಯಾಗಿದೆ. ಹೀಗಾಗಿಯೇ ಎಪೆಂಡಿಕ್ಸ್ ಗಾತ್ರ ಕುಗ್ಗುತ್ತಿದೆ. ಈಗ ಇದರ ಉಪಯೋಗ ಅಷ್ಟೇನೂ ಇಲ್ಲ.

ಪ್ಯಾರಾನಾಸಲ್ ಸೈನಸ್
ನಮ್ಮ ಮೂಗಿನ ಮೇಲೆ ಮತ್ತು ಮೂಗಿನ ಹಿಂಭಾಗದಲ್ಲಿ ಇರುವ ಮೂಳೆಗಳ ನಡುವೆ ಗಾಳಿಯಿಂದ ತುಂಬಿದ ಬುಗ್ಗೆಗಳು ಇರುತ್ತವೆ. ಇವನ್ನು ಪ್ಯಾರಾನಾಸಲ್ ಸೈನಸ್ ಎನ್ನುತ್ತಾರೆ. ಇವು ಕಣ್ಣಿನ ಮೇಲ್ಭಾಗ, ಕೆಳಭಾಗ, ಮಧ್ಯಭಾಗ ಮತ್ತು ಹಿಂಭಾಗಗಳಲ್ಲಿ ನಾಲ್ಕು ರೀತಿಯಲ್ಲಿ ಇರುತ್ತವೆ. ಇವುಗಳಲ್ಲಿ ಆಗಾಗ್ಗೆ ಸೋಂಕುಗಳು ಉಂಟಾಗಿ ನೆಗಡಿ, ತಲೆನೋವಿನಂತಹ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತವೆ. ಇವುಗಳಿಂದ ನಮಗೆ ಯಾವುದೇ ಉಪಯೋಗ ಇಲ್ಲದಿರುವುದರಿಂದ ಕೆಲ ಕಾಲದ ನಂತರ ಇವು ಕೂಡ ದೇಹದಿಂದ ಮರೆಯಾಗಬಹುದು ಎಂಬುದು ಡಾರ್ವಿನ್ ಅಭಿಪ್ರಾಯ.

ಮೂರನೇ ಕಣ್ಣುರೆಪ್ಪೆ
ನಮ್ಮ ಕಣ್ಣಿನ ರೆಪ್ಪೆಗಳ ಬುಡದಲ್ಲಿ ಕಾಣಸಿಗುವ ತಿಳಿಗುಲಾಬಿ ಬಣ್ಣದ ಭಾಗವೇ ಮೂರನೇ ಕಣ್ಣು ರೆಪ್ಪೆ. ಹಲವು ಪ್ರಾಣಿಗಳಲ್ಲಿ ಈ ಮೂರನೇ ರೆಪ್ಪೆ ಪಾರದರ್ಶಕವಾಗಿ ಮತ್ತು ಕಣ್ಣು ಪೂರ್ತಿ ಮುಚ್ಚುವಂತೆ ಇರುತ್ತದೆ. ಕೋಳಿ ಮತ್ತು ಹಲ್ಲಿಯನ್ನು ಪರೀಕ್ಷಿಸಿ ನೋಡಿದರೆ ಈ ರೆಪ್ಪೆ ಇರುವುದು ಗೊತ್ತಾಗುತ್ತದೆ. ನಮಗೆ ಇದರ ಅವಶ್ಯಕತೆ ಇಲ್ಲದೇ ಇರುವುದರಿಂದ ಕ್ರಮೇಣ ಪುಟ್ಟದಾಗುತ್ತಿದೆ. ಮುಂದೊಂದು ದಿನ ಮಾಯವಾಗಲೂಬಹುದು.

ಪಾಲ್ಲರಿಸ್ ಲಾಂಗಸ್ ಖಂಡ
ಮುಷ್ಟಿಯನ್ನು ಬಿಗಿ ಹಿಡಿದು, ಉಂಗುರದ ಬೆರಳು ಮತ್ತು ಹೆಬ್ಬೆರಳನ್ನು ಕೂಡಿಸಿದಾಗ ಮಣಿಕಟ್ಟಿನ ಬಳಿ ಉಬ್ಬಿದಂತಹ ಮಾಂಸಖಂಡವೊಂದು ಕಾಣಿಸುತ್ತದೆ. ಮರದ ಟೊಂಗೆಗಳನ್ನು ಹಿಡಿದು ನೇತಾಡುವುದಕ್ಕೆ ಇದು ನೆರವಾಗುತ್ತದೆ. ನಮಗೆ ಮರಗಳನ್ನು ಹತ್ತುವ ಅಗತ್ಯ ಇಲ್ಲದಿರುವುದರಿಂದ, ಪ್ರಸ್ತುತ ಜನಿಸುತ್ತಿರುವ ಕೇವಲ ಶೇ 15ರಷ್ಟು ಮಕ್ಕಳಲ್ಲಿ ಮಾತ್ರ ಈ ಮಾಂಸಖಂಡ ಇದೆಯಂತೆ.

ಡಾರ್ವಿನ್ ಪಾಯಿಂಟ್
ಕೆಲವು ಪ್ರಾಣಿಗಳ ಕಿವಿಗಳ ಮೇಲೆ ಸೂಜಿಯಂತೆ ಮೊಳಕೆಯೊಡೆದಂತಹ ಪುಟ್ಟ ಅಂಗಾಂಗವನ್ನು ಗಮನಿಸಿದ್ದೀರಾ? ನಮ್ಮ ಕಿವಿಯ ಮೇಲೂ ಅಂತಹ ಭಾಗ ಇರುತ್ತದೆ. ನಮ್ಮ ದೇಶದಲ್ಲಿ ಶೇ 40ರಷ್ಟು ಜನರಲ್ಲಿ ಮಾತ್ರ ಅಂಗ ಬೆಳೆದಿರುತ್ತದೆ. ಡಾರ್ವಿನ್ ಅವರೇ ಈ ಭಾಗವನ್ನು ಮೊದಲು ಪತ್ತೆ ಮಾಡಿದರು. ಹೀಗಾಗಿ ಇದನ್ನು ‘ಡಾರ್ವಿನ್ ಪಾಯಿಂಟ್’ ಎನ್ನುತ್ತಾರೆ. ಕಿವಿ ನಿರ್ವಹಿಸುವ ಕೆಲಸಗಳ ಮೇಲೆ ಇದು ಈಗ ಯಾವ ಪರಿಣಾಮವನ್ನೂ ಬೀರುತ್ತಿಲ್ಲ. ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಕಿವಿಯ ಹೊರಭಾಗದ ಖಂಡಗಳು
ಮೊಲ, ನಾಯಿಯಂತಹ ಕೆಲವು ಪ್ರಾಣಿಗಳು ತಮ್ಮ ಕಿವಿಗಳನ್ನ ಆಗಾಗ್ಗೆ ಕದಲಿಸುವುದನ್ನು ಗಮನಿಸಿದ್ದೀರಾ? ಈ ಪ್ರಾಣಿಗಳಂತೆಯೇ, ದೂರದಿಂದ ಕೇಳುವ ಶಬ್ದಗಳನ್ನು ಗ್ರಹಿಸುವುದಕ್ಕೆನಮ್ಮ ಪೂರ್ವಜರ ಕಿವಿಗಳೂ ರಚನೆಯಾಗಿದ್ದವು. ಇದರಲ್ಲಿ ಮೂರು ಬಗೆಯ ಖಂಡಗಳು ಕಿವಿಯನ್ನು ಸ್ವತಂತ್ರ್ಯವಾಗಿ ಕದಲಿಸುವುದಕ್ಕೆ ನೆರವಾಗುತ್ತಿದ್ದವು. ಈಗ ದೂರದ ಶಬ್ದಗಳನ್ನು ಕೇಳುವ ಅಗತ್ಯವಿಲ್ಲದಾಗಿದೆ. ಹೀಗಾಗಿಯೇ ಈ ಮಾಂಸಖಂಡಗಳಿಗೆ ಕೆಲಸ ಇಲ್ಲ. ಈಗ ಇವು ಬಲಹೀನವಾಗಿದ್ದು, ಕದಲಿಸುವುದಕ್ಕೆ ನೆರವಾಗುವುದಿಲ್ಲ. ಇದರಿಂದ ಮುಂದೆ ಈ ಖಂಡಗಳು ಇಲ್ಲದ ಕಿವಿಗಳು ರಚನೆಯಾಗಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT