ಮಂಗಳವಾರ, ಮಾರ್ಚ್ 9, 2021
31 °C

ಭಾರತದಲ್ಲಿ 7,000ದಷ್ಟು ರೂಪಾಂತರ ಕೊರೊನಾ ವೈರಸ್: ವಿಜ್ಞಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ 7,000ಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.

ರೂಪಾಂತರ ವೈರಸ್‌ಗಳ ಪೈಕಿ ‘ಎನ್‌440ಕೆ’ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಕೋಶ ಹಾಗೂ ಅಣು ಜೀವಶಾಸ್ತ್ರ ಕೇಂದ್ರದ (ಸಿಸಿಎಂಬಿ) ನಿರ್ದೇಶಕರಾಗಿರುವ ರಾಕೇಶ್ ಮಿಶ್ರಾ ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ವೈರಸ್‌ನ ಸುಮಾರು 5,000 ರೂಪಾಂತರಗಳ ಬಗ್ಗೆ ಸಿಸಿಎಂಬಿ ಸಮಗ್ರ ವಿಶ್ಲೇಷಣೆ ನಡೆಸಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಅವು ಹೇಗೆ ವಿಕಸನಗೊಂಡಿವೆ ಎಂಬುದನ್ನೂ ಅಧ್ಯಯನ ನಡೆಸಿದೆ.

ಓದಿ: 

ರೂಪಾಂತರ ವೈರಸ್‌ಗಳ ಬಗ್ಗೆ ಅಧ್ಯಯನ ವರದಿಯೊಂದನ್ನೂ (ಸಾರ್ಸ್‌–ಕೊವ್–2 ಜೀನೋಮಿಕ್ಸ್: ವೈರಸ್ ರೂಪಾಂತರಗಳನ್ನು ಅನುಕ್ರಮಗೊಳಿಸುವ ಭಾರತೀಯ ದೃಷ್ಟಿಕೋನ) ಸಿಸಿಎಂಬಿ ಪ್ರಕಟಿಸಿದೆ. ಈ ಅಧ್ಯಯನ ವರದಿ ಸಿದ್ಧಪಡಿಸಿದ ತಜ್ಞರಲ್ಲಿ ರಾಕೇಶ್ ಮಿಶ್ರಾ ಸಹ ಒಬ್ಬರು.

ಹೈದರಾಬಾದ್ ಮೂಲದ ಸಿಸಿಎಂಬಿ ಸಂಸ್ಥೆಯು ವೈರಸ್‌ನ ವಿಕಸನ, ರೂಪಾಂತರ ಹಾಗೂ ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ದೇಶದಲ್ಲಿ ಕೋವಿಡ್–19 ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಆ ಬಗ್ಗೆ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ.

ಹೊಸ ತಳಿ ಅಲ್ಲ

ಪ್ರತಿಯೊಂದು ರೂಪಾಂತರವೂ ಹೊಸ ತಳಿಯಾಗಿ ಪರಿವರ್ತನೆಯಾಗುವುದಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ. ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು