‘ಇಷ್ಟೊಂದು ವಿಷಾನಿಲಗಳನ್ನು ಸೇವಿಸುತ್ತಿರುವ ಮೊದಲ ನಾಗರಿಕತೆ ನಮ್ಮದು’ - ಎಂದು ಬಹಳ ಕಾಲದ ಹಿಂದೆಯೇ ಅಮೆರಿಕದ ಪ್ರಸಿದ್ಧ ಕಾರ್ಮಿಕರ ನಾಯಕ ವಾಲ್ಟರ್ ಯೂಟರ್ ಹೇಳಿದ್ದರು.

ಇಂದು ಮಾನವಕುಲದ ಸಂರಕ್ಷಣೆ ಆಗಬೇಕೆಂದರೆ ಮೊದಲು ಪರಿಸರದ ಸಂರಕ್ಷಣೆಯಾಗಬೇಕು. ಅದು ಕೇವಲ ಪರಿಸರ ದಿನಾಚರಣೆಯನ್ನು ಆಚರಿಸಿ ಮುಗಿಸುವುದರಲ್ಲಿಲ್ಲ. ನಮ್ಮ ಕೈಗಾರಿಕಾ ಪ್ರಕ್ರಿಯೆಗಳ ಸ್ವರೂಪವೇ ರೂಪಾಂತರಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ‘ಹಸಿರು ಉಕ್ಕು’ ಅಥವಾ ‘ಗ್ರೀನ್ ಸ್ಟೀಲ್’ ಎನ್ನುವುದು ಇತ್ತೀಚಿಗೆ ಕೈಗಾರಿಕಾ ಕ್ಷೇತ್ರದಲ್ಲಿನ ‘ಬಜ್ ವರ್ಡ್’. ಇದೊಂದು ಪರಿಸರಪ್ರೇಮಿ ತಂತ್ರಜ್ಞಾನವಾಗಿರುವುದೇ ಇದಕ್ಕೆ ಕಾರಣ. ನಮ್ಮ ಬದುಕಿನಲ್ಲಿ ಗಾಳಿಯ ಅವಶ್ಯಕತೆ ಎಷ್ಟೋ ಅಷ್ಟೇ ಉಕ್ಕಿನದೂ ಇದೆ. ಮನೆಯ ಪಾತ್ರೆಯಿಂದ ಹಿಡಿದು ಓಡಾಡುವ ವಾಹನದ ತನಕ; ಬರೆಯುವ ಲೇಖನಿಯ ಮೊನೆಯಿಂದ ಶುರುವಾಗಿ ವಿಮಾನದ ಇಂಜಿನ್ವರೆಗೂ; ಮುಟ್ಟಿದಲ್ಲೆಲ್ಲಾ ನಮಗೆ ಸಿಗುವುದು ಉಕ್ಕಿನ ಉತ್ಪನ್ನಗಳು.

ಕ್ರಿ. ಪೂ. 1800ರಲ್ಲಿಯೇ ಕಬ್ಬಿಣ ಹಾಗೂ ಉಕ್ಕಿನ ಉತ್ಪನ್ನಗಳನ್ನು ಮನುಷ್ಯರು ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಈಗ ಸಾಕ್ಷಿಗಳು ಲಭಿಸಿವೆ. ಭಾರತದಲ್ಲೂ ಕ್ರಿ. ಪೂ. 500ನೆಯ ಶತಮಾನದಲ್ಲಿಯೇ ಕಬ್ಬಿಣದ ಅನೇಕ ರೂಪಗಳನ್ನು ಉತ್ಪಾದಿಸಿ, ಮಧ್ಯಪೂರ್ವ ದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ಓದಬಹುದಾಗಿದೆ. ಆದರೆ ಆಧುನಿಕ ಯುಗದಲ್ಲಿ ಮೊತ್ತಮೊದಲ ಬಾರಿಗೆ ಉತ್ಕೃಷ್ಟ ಮಟ್ಟದ ಉಕ್ಕನ್ನು ತಯಾರಿಸಿದ್ದು ಹೆನ್ರಿ ಬೆಸ್ಸೆಮರ್, 1856ರಲ್ಲಿ. ಹೀಗಾಗಿ ಕಬ್ಬಿಣ ಹಾಗೂ ಉಕ್ಕಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದರೂ ಇಂದು ನಾವು ಬಳಸುತ್ತಿರುವ ಉಕ್ಕಿನ ಪರಿಚಯವು ನಮಗಾಗಿದ್ದು ಕೇವಲ ಎರಡು ಶತಮಾನಗಳ ಹಿಂದಷ್ಟೇ. ಬೆಂಕಿ ಮತ್ತು ಚಕ್ರದ ನಂತರ ಆದ ಆವಿಷ್ಕಾರಗಳಲ್ಲಿ ಉಕ್ಕಿನ ಅವಿಷ್ಕಾರವೂ ಪ್ರಮುಖವಾದುದು.

ಅಂದಿನಿಂದ ಇಂದಿನವರೆಗೆ ಈ ಜಗತ್ತು ಇಷ್ಟೊಂದು ಬೆಳೆಯಲು ಮುಖ್ಯ ಕಾರಣವೇ ಈ ‘ಸ್ಟೀಲ್’. ಅಂದು ಪ್ರತಿ ವರ್ಷ ಸುಮಾರು ಹತ್ತು ಲಕ್ಷ ಟನ್ ಸ್ಟೀಲ್ ಉತ್ಪಾದನೆಯಾಗುತ್ತಿದ್ದರೆ, ಇಂದು ಪ್ರತಿವರ್ಷಕ್ಕೆ ಸುಮಾರು ಇನ್ನೂರು ಕೋಟಿ ಟನ್ ಸ್ಟೀಲ್ ಉತ್ಪಾದನೆಯಾಗುತ್ತದೆ. ಇದನ್ನು ಇನ್ನೊಂದು ಬಗೆಯಲ್ಲಿ ಹೇಳಬೇಕೆಂದರೆ, ಅಂದಿಗೆ ಹೋಲಿಸಿದರೆ ಇಂದು ಉಕ್ಕಿನ ಉತ್ಪಾದನೆ 20,00,000 ಪಟ್ಟು ಹೆಚ್ಚಿದೆ. ಕೈಗಾರಿಕಾ ಕ್ರಾಂತಿಯ ನಾಲ್ಕನೆಯ ಚರಣದಲ್ಲಿರುವ ಈ ಜಗತ್ತಿನಲ್ಲಿ ಆಗುತ್ತಿರುವ ಒಟ್ಟೂ ಇಂಗಾಲದ ಡೈ–ಆಕ್ಸೈಡ್ ಹೊರಸೂಸುವಿಕೆಯ ಶೇ. 10ರಷ್ಟು ಭಾಗವು ಉಕ್ಕಿನ ಉತ್ಪಾದನೆಯಿಂದಲೇ ಬರುತ್ತಿರುವುದು ಗಮನೀಯ ಅಂಶ. ಈ ಪರಿಸ ಹಾನಿ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ( ಶೇ. 90-95) ಮಾಡಬಲ್ಲ ಸಾಮರ್ಥ್ಯವನ್ನು ಹಸಿರು ಉಕ್ಕು ಹೊಂದಿದೆ!

ಉಕ್ಕಿನ ತಯಾರಿಕೆಯಲ್ಲಿ ಅತಿ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಗೆ ಕಾರಣ ಅಲ್ಲಿ ಬಳಕೆಯಾಗುವ ‘ಬ್ಲಾಸ್ಟ್ ಫರ್ನೆಸ್’ ಅಥವಾ ಊದುಕುಲುಮೆ ಮತ್ತು ಕಲ್ಲಿದ್ದಲಿನ ಕೋಕ್. ಹಸಿರು ಉಕ್ಕಿನಲ್ಲಿ ಕಲ್ಲಿದ್ದಲ್ಲು, ಊದು ಕುಲುಮೆಗಳ ಬದಲು ಜಲಜನಕ ಅಥವಾ ವಿದ್ಯುಚ್ಛಕ್ತಿಯನ್ನು ಬಳಸಲಾಗುತ್ತದೆ.

ಹಸಿರು ಉಕ್ಕನ್ನು ನಾಲ್ಕು ಬಗೆಗಳಿಂದ ತಯಾರಿಸಬಹುದು:

1. ಜಲಜನಕದ ಬಳಕೆ

ಈ ಬಗೆಯಲ್ಲಿ ಉಕ್ಕನ್ನು ತಯಾರಿಸುವುದಕ್ಕೆ ‘ಹೈಡ್ರೋಜನ್ ಬೇಸ್ಡ್ ಡೈರೆಕ್ಟ್ ರೆಡ್ಯೂಸ್ ಐರನ್’ (H-DRI) ಎನ್ನುತ್ತಾರೆ. ಇದರಲ್ಲಿ ಅದಿರನ್ನು ಕುದಿಸಲು ಕಲ್ಲಿದ್ದಲಿನ ಬದಲು ಜಲಜನಕವನ್ನು ಇಂಧನವನ್ನಾಗಿ ಬಳಸಲಾಗುತ್ತದೆ. ಕಲ್ಲಿದ್ದಲಿನ ಉಪಯೋಗದಿಂದ ರಾಸಾಯನಿಕ ಕ್ರಿಯೆಯಲ್ಲಿ ಕಾರ್ಬನ್ ಡೈ–ಆಕ್ಸೈಡ್ ವಾತಾವರಣಕ್ಕೆ ಸೇರಿದರೆ ಜಲಜನಕದಿಂದಾಗಿ ನೀರು (H2O) ಬಿಡುಗಡೆಯಾಗುತ್ತದೆ.

2. ನವೀಕರಿಸಬಹುದಾದ ಶಕ್ತಿಮೂಲದ ವಿದ್ಯುತ್ ಬಳಕೆ

ಕಬ್ಬಿಣದ ಅದಿರನ್ನು ಕರಗಿಸಲು ಊದುಕುಲುಮೆಯಲ್ಲಿ ಇಂಧನವಾಗಿ ಕಲ್ಲಿದ್ದಲನ್ನು ಬಳಸದೆ ವಿದ್ಯುಚ್ಛಕ್ತಿಯ ಕುಲುಮೆಯನ್ನು ಬಳಸುವುದು ಹಸಿರು ಉಕ್ಕಿನ ತಯಾರಿಕೆಯ ಇನ್ನೊಂದು ಬಗೆ. ವಿಶೇಷವಾಗಿ ಇಲ್ಲಿ ಉಪಯೋಗಿಸಲ್ಪಡುವ ವಿದ್ಯುಚ್ಛಕ್ತಿಯು ನವೀಕರಿಸಬಹುದಾದ ಮೂಲದಿಂದ ಬಂದಿರುತ್ತದೆ. ಉದಾಹರಣೆಗೆ, ಜಲವಿದ್ಯುತ್ ಸ್ಥಾವರ.

3. ಇಂಗಾಲದ ಗ್ರಹಣ–ಸಂಗ್ರಹಣ

‘ಕಾರ್ಬನ್ ಕ್ಯಾಪ್ಚರ್’ ಅಥವಾ ‘ಸ್ಟೋರೇಜ್’ (ಇಂಗಾಲ ಗ್ರಹಣ–ಸಂಗ್ರಹಣ) ಪ್ರಕ್ರಿಯೆಯಲ್ಲಿ ಉಕ್ಕಿನ ಕಾರ್ಖಾನೆಗಳು ಹೊರಸೂಸುವ ಇಂಗಾಲದ ಡೈ–ಆಕ್ಸೈಡನ್ನು ವಾತಾವರಣಕ್ಕೆ ಬಿಡದೆ, ಅದನ್ನು ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನದ ಮೂಲಕ ಸಂಗ್ರಹಿಸಲಾಗುತ್ತದೆ. ಹೀಗೆ ತಯಾರಿಸುವ ಉಕ್ಕಿಗೆ ಹಸಿರುಮಾನ್ಯತೆಯನ್ನು ನೀಡಲಾಗುತ್ತದೆ.

4. ಜೈವಿಕ ಪದಾರ್ಥಗಳ ಬಳಕೆ

ಕೊನೆಯ ಬಗೆಯೆಂದರೆ ಕಲ್ಲಿದ್ದಲಿನ ಕೋಕ್ ಬದಲು ಜೈವಿಕ ಪದಾರ್ಥಗಳನ್ನು ಕುಲುಮೆಯಲ್ಲಿ ಬಳಸುವುದು. ಇದರಿಂದ ಕೂಡ ಹಸಿರು ಉಕ್ಕನ್ನು ತಯಾರಿಸಲು ಸಾಧ್ಯ.

ಜಗತ್ತಿನಾದ್ಯಂತ ಹಸಿರು ಉಕ್ಕಿನ ಉತ್ಪಾದನೆಗೆ ತುಂಬಾ ಒತ್ತು ನೀಡಲಾಗುತ್ತಿದೆ. ಭಾರತದ ಉಕ್ಕಿನ ಕಂಪನಿಗಳಾದ ಟಾಟಾ ಸ್ಟೀಲ್, ಜೆಎಸ್ಡ್ಬ್ಲ್ಯು ಸ್ಟೀಲ್; ಯುರೋಪಿನ ಅರ್ಸೆಲ್ ಮಿತ್ತಲ್ ಹಾಗೂ ಇನ್ನಿತರೆ ಉಕ್ಕಿನ ಕಂಪನಿಗಳು; ಮಧ್ಯಪೂರ್ವ ದೇಶಗಳಲ್ಲಿ ಕೂಡ ಹಸಿರು ಉಕ್ಕಿನ ಉತ್ಪಾದನೆಯು ಮುನ್ನಡೆ ಪಡೆದಿದೆ. ಚೀನಾವು ಜಗತ್ತಿನಲ್ಲಿ ಅತಿ ಹೆಚ್ಚು ಉಕ್ಕನ್ನು ತಯಾರಿಸುವ ದೇಶವಾಗಿದೆ. ಎಲ್ಲಾ ದೇಶಗಳು ಸೇರಿ ತಯಾರಿಸುವುದಕ್ಕಿಂತ ಹೆಚ್ಚು ಉಕ್ಕನ್ನು ಕೇವಲ ಚೀನಾ ಒಂದೇ ತಯಾರಿಸುತ್ತದೆ. ಅವರೂ ನಿಧನವಾಗಿ ಹಸಿರು ತಂತ್ರಜ್ಞಾನದ ಕಡೆಗೆ ವಾಲುತ್ತಿದ್ದಾರೆ. ಆದರೆ ಹಸಿರು ಉಕ್ಕಿನ ತಯಾರಿಕೆಯು ಮುಖ್ಯವಾಹಿನಿಯನ್ನು ಪಡೆಯಲು ಇನ್ನೂ ತನಕ ಸಾಧ್ಯವಾಗದಿರಲು ಮುಖ್ಯಕಾರಣಗಳೆಂದರೆ ಇದು ಸಾಧಾರಣ ಉಕ್ಕಿಗಿಂತ ಮೂರು ಪಟ್ಟು ದುಬಾರಿ, ಎಲ್ಲ ಕಡೆಯೂ ನವೀಕರಿಸಬಹುದಾದ ಶಕ್ತಿಯಿಂದ ತಯಾರಿಸಿದ ವಿದ್ಯುಚ್ಛಕ್ತಿಯ ಲಭ್ಯವಿಲ್ಲ; ಜಲಜನಕದ ಸರಬರಾಜಿಗೆ ಇನ್ನೂ ಮೂಲಭೂತ ಸೌಕರ್ಯಗಳು ಪ್ರಬುದ್ಧವಾಗಿಲ್ಲ. ಅಂತೆಯೇ ಇಂಗಾಲದ ಸೆರೆಹಿಡಿಯುವಿಕೆಯು ಇನ್ನೂ ನವಜಾತ ತಂತ್ರಜ್ಞಾನ. ಇವೆಲ್ಲ ಕಾರಣಗಳು ಹಸಿರು ಉಕ್ಕು ಪರಿಸರದ ಸುಸ್ಥಿತಿಗೆ ಅನುಕೂಲವಾಗಿದ್ದರೂ ಸಂಪೂರ್ಣವಾಗಿ ಅದರ ಮೇಲೆಯೇ ಅವಲಂಬಿತವಾಗಲು ಸಾಧ್ಯವಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.