ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿ ಹೆಚ್ಚು ದಿನ ಕಳೆದ ಗಗನಯಾನಿಗಳ ಪಟ್ಟಿಯಲ್ಲಿ ಪೆಗ್ಗಿ ವಿಟ್ಸನ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಇವರು ಒಟ್ಟು 675 ದಿನ ಬಾಹ್ಯಾಕಾಶದಲ್ಲಿ ವಾಸವಿದ್ದು, ಹಲವು ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಅತಿ ಹೆಚ್ಚಿನ ದಿನ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದವರ ಪಟ್ಟಿಯಲ್ಲಿ ಭಾರತದ ಸುನಿತಾ ವಿಲಿಯಮ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು 606 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ಹಲವು ಮಿಷನ್‌ಗಳನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಸಂಶೊಧನೆಯಲ್ಲಿ ಭಾಗಿಯಾಗಿದ್ದಾರೆ.
ಚಿತ್ರ ಕೃಪೆ: ಎಕ್ಸ್
ಮೂರು ದಶಕಗಳಿಗೂ ಹೆಚ್ಚು ಕಾಲ ನಾಸಾದಲ್ಲಿದ್ದ ಜೆಫ್ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ 534 ದಿನಗಳನ್ನು ಕಳೆದಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಬಾಹ್ಯಕಾಶ ಕೇಂದ್ರದ ವಿನ್ಯಾಸ, ಸ್ಥಾಪನೆ, ಕಾರ್ಯಾಚರಣೆ ಆರಂಭಿಸುವಲ್ಲಿ ಬಹು ಮಹತ್ವದ ಪಾತ್ರವಹಿಸಿದ್ದಾರೆ.
ಚಿತ್ರ ಕೃಪೆ: ಎಕ್ಸ್
ಮಾರ್ಕ್ ವಂದೇ ಹೇ 523 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದರು. ಒಂದೇ ದಿನ ಅತಿ ಹೆಚ್ಚು ದೂರ ಬಾಹ್ಯಾಕಾಶ ಹಾರಾಟ ನಡೆಸಿದ ದಾಖಲೆ ಇವರದ್ದಾಗಿದೆ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಅಮೆರಿಕ ಮೂಲದ ಎಂಜಿನಿಯರ್ ಮತ್ತು ನಿವೃತ್ತ ಗಗನಯಾತ್ರಿ ಸ್ಕಾಟ್ ಕೆಲ್ಲಿ 520ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದರು
ಚಿತ್ರ ಕೃಪೆ: ನಾಸಾ
ಹಲವು ಮಿಷನ್‌ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಮೆರಿಕದ ಗಗನಯಾತ್ರಿ ಬೆರಿ ವಿಲ್ಮೋರ್ 462 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು.
ಚಿತ್ರ ಕೃಪೆ: ನಾಸಾ
ಎರಡು ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಮೆರಿಕದ ಗಗನಯಾತ್ರಿ ಮೈಕ್ ಬ್ಯಾರಟ್ ಅವರು 447 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು
ಚಿತ್ರ ಕೃಪೆ: ನಾಸಾ
ಅಮೆರಿಕದ ಗಗನಯಾತ್ರಿ ಶೇನ್ ಕಿಂಬ್ರೋ ಅವರು 388 ದಿನ ಬಾಹ್ಯಾಕಾಶ ಕೇಂದ್ರದಲ್ಲಿದ್ದರು
ನಾಸಾದ ಗಗನಯಾತ್ರಿ ಮೈಕೆಲ್ ಫಿನ್ಕೆ ಅವರು 382 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದರು. ಇವರು ಮಿಷನ್ ಆಪರೇಷನ್‌ಗಳ ತಜ್ಞರಾಗಿದ್ದಾರೆ.
ಚಿತ್ರ ಕೃಪೆ: ನಾಸಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.