ಪಾರ್ಶ್ವವಾಯು, ಹೃದಯ ಸಂಬಂಧಿತ ಹಲವು ಕಾಯಿಲೆಗಳು, ಕೆಲವು ಬಗೆಯ ಕಾನ್ಸರ್‌ಗಳನ್ನು ಐ.ಆರ್. ವಿಧಾನದಿಂದ ಸುಲಭವಾಗಿ ಪತ್ತೆ ಮಾಡಬಹುದು. ಈ ತಂತ್ರದಲ್ಲಿ ರಕ್ತನಾಳ ಅಥವಾ ಇತರ ನಾಳದಂತಹ ಟೊಳ್ಳಾದ ರಚನೆಗೆ ಇಮೇಜಿಂಗ್ ಉಪಕರಣವೊಂದನ್ನು ಚುಚ್ಚಲಾಗುತ್ತದೆ. ಇದರಿಂದ ವಿವಿಧ ಅಂಗ, ಅಂಗಾಂಶ, ಜೀವಕೋಶ ಅಥವಾ ಜೀವಕೋಶದ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ. ಆ ಚಿತ್ರಗಳ ವಿಶ್ಲೇಷಣೆಯ ಮೂಲಕ ರೋಗವನ್ನು ಪತ್ತೆ ಮಾಡಲಾಗುತ್ತದೆ.