ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಆಧುನಿಕ ತಂತ್ರಜ್ಞಾನವೇ ಸಂಜೀವಿನಿ- ನೋಶಿರ್‌ ಕಾಕಾ

ಬೆಂಗಳೂರು ತಂತ್ರಜ್ಞಾನ ಶೃಂಗ: ಸಾರ್ವಜನಿಕರ ಒಳಿತಿಗಾಗಿ ತಂತ್ರಜ್ಞಾನ ಗೋಷ್ಠಿ
Last Updated 20 ನವೆಂಬರ್ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಆಧುನಿಕ ತಂತ್ರಜ್ಞಾನವು ಸಮಾಜದ ಒಳಿತಿಗಾಗಿ ಏನೆಲ್ಲ ಕೊಡುಗೆ ನೀಡಬಹುದು ಎನ್ನುವುದನ್ನು ಕೋವಿಡ್‌
ಬಿಕ್ಕಟ್ಟು ತೋರಿಸಿಕೊಟ್ಟಿದೆ. ಇದರೊಂದಿಗೆ ವಿಕೋಪ ಪರಿಹಾರ, ಮಾಲಿನ್ಯ ನಿಯಂತ್ರಣ, ನೀರಿನ ನಿರ್ವಹಣೆ ಸೇರಿ
ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಸರ್ವರ ಒಳಿತಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಮೆಕೆನ್ಸಿ
ಕಂಪನಿಯ ಹಿರಿಯ ಪಾಲುದಾರ ನೋಶಿರ್‌ ಕಾಕಾ ಹೇಳಿದರು.

ಮೇಳದಲ್ಲಿ ‘ಸಾರ್ವಜನಿಕರ ಒಳಿತಿಗಾಗಿ ತಂತ್ರಜ್ಞಾನ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಅಗತ್ಯ ಕೌಶಲಗಳಿರುವ ಪರಿಣತರ ಕೊರತೆ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿದ್ದು, ಈ ಕೊರತೆ ತುಂಬಿಕೊಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೌಶಲ ಹಾಗೂ ದತ್ತಾಂಶದ ದೃಷ್ಟಿಯಿಂದ ಭಾರತವು ಜಗತ್ತಿನಲ್ಲೇ ಪ್ರಭಾವಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಅರ್ಥವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೂ ತಂತ್ರಜ್ಞಾನದ ಅನುಕೂಲಗಳು ಸಿಗಬೇಕಿದೆ’ ಎಂದು ಅವರು ಶ್ಲಾಘಿಸಿದರು.

‘2025ರ ವೇಳೆಗೆ ಭಾರತದ ನಿರೀಕ್ಷಿತ ಜಿಡಿಪಿ ಹೆಚ್ಚಳದಲ್ಲಿ ತಂತ್ರಜ್ಞಾನದ ಕೊಡುಗೆ ಶೇ 10ಕ್ಕಿಂತ ಹೆಚ್ಚಿರಲಿದೆ. ಚಿಲ್ಲರೆ ವಹಿವಾಟು, ಕೃಷಿ, ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ದೂರಸಂಪರ್ಕ ಸೇರಿದಂತೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯಲ್ಲೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ’ ಎಂದರು.

ಸೋಷಿಯಲ್‌ ಆಲ್ಫಾ ಸಂಸ್ಥೆಯ ಮನೋಜ್ ಕುಮಾರ್, ‘ಭಾರತದಲ್ಲಿ ಬೆಳೆಯುತ್ತಿರುವ ನವೋದ್ಯಮ ವ್ಯವಸ್ಥೆಯು ಸಾಮಾಜಿಕ ಒಳಿತಿಗಾಗಿಯೂ ಕೆಲಸ ಮಾಡುತ್ತಿದೆ. ಸರ್ಕಾರ ಹಾಗೂ ಸಮಾಜ ಸೇವಾ ಸಂಸ್ಥೆಗಳೊಂದಿಗೆ ನವೋದ್ಯಮಗಳ ಸಹಭಾಗಿ
ತ್ವವು ನಮ್ಮ ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಹಲವು ಪರಿಹಾರಗಳನ್ನು ಒದಗಿಸಬಹುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT