ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಮಂಡಲದ ಹೊರಗೆ 5 ಸಾವಿರಕ್ಕೂ ಹೆಚ್ಚು ಗ್ರಹಗಳು ಪತ್ತೆ: ನಾಸಾ

Last Updated 26 ಮಾರ್ಚ್ 2022, 2:44 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸೌರಮಂಡಲದ ಹೊರಗೆ 5 ಸಾವಿರಕ್ಕೂ ಹೆಚ್ಚು ಗ್ರಹಗಳಿವೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನಾಸಾ, ನಮ್ಮ ಸೌರ ವ್ಯವಸ್ಥೆಯ ಹೊರಗೆ ಪ್ರತ್ಯೇಕ ಕಕ್ಷೆಗಳಲ್ಲಿ ಸಾವಿರಾರು ಗ್ರಹಗಳು ಅಸ್ತಿತ್ವದಲ್ಲಿವೆ ಎಂದು ನಾಸಾ ಹೇಳಿದೆ. ಮೂರು ದಶಕಗಳ ಸಂಶೋಧನೆಯಿಂದ ಸೌರಮಂಡಲದ ಹೊರಗಿನ ಗ್ರಹಗಳನ್ನು ಪತ್ತೆ ಮಾಡಲಾಗಿದೆ ಎಂದು ನಾಸಾ ಹೇಳಿದೆ.

ಸೌರಮಂಡಲದಲ್ಲಿರುವ ಗ್ರಹಗಳ ಮಾದರಿಯಲ್ಲೇ ಪತ್ತೆಯಾಗಿರುವ ಹೊಸ ಗ್ರಹಗಳು ಇವೆ. ಇವುಗಳಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಗ್ರಹಗಳು ಸೇರಿವೆ. ಅವುಗಳ ಮೇಲೆ ನೀರು, ಗಾಳಿ, ಅನಿಲ ಹಾಗೂ ಜೀವಿಗಳು ಇರುವ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT