ಮಂಗಳನ ಅಂಗಳದಲ್ಲಿ ರೋವರ್ ಇಳಿದ ದೃಶ್ಯ ಬಿಡುಗಡೆ ಮಾಡಿದ ನಾಸಾ

ಕೇಪ್ ಕ್ಯಾನವೆರಲ್: ಮಂಗಳನ ಅಂಗಳದಲ್ಲಿ ಇಳಿದ ತನ್ನ ಗಗನನೌಕೆ ಕಳಿಸಿರುವ ವಿಡಿಯೊವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.
You might have seen photos from Mars, but have you seen high-speed video?
🤩 We captured our @NASAPersevere rover’s final minutes of descent and landing in a way never seen before. Take a look: https://t.co/CQQtlWAzNF pic.twitter.com/uR3dtocwLF
— NASA (@NASA) February 23, 2021
ಕಿತ್ತಳೆ ಮತ್ತು ಬಿಳಿ ಬಣ್ಣದ ಪ್ಯಾರಾಚೂಟ್ ತೆರೆದುಕೊಳ್ಳುತ್ತಿರುವ ಬೆನ್ನಲ್ಲೇ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿರುವ ರಾಕೆಟ್ನಿಂದ ರೋವರ್ ಮಂಗಳನ ನೆಲದ ಮೇಲೆ ಇಳಿಯುತ್ತದೆ. ಈ ಸಂದರ್ಭದಲ್ಲಿ ಕೆಂಪು ಬಣ್ಣದ ದೂಳು ಆ ಪ್ರದೇಶದಲ್ಲಿ ಆವರಿಸುವ ದೃಶ್ಯಗಳು ಮೂರು ನಿಮಿಷಗಳ ವಿಡಿಯೊದಲ್ಲಿವೆ.
‘ಈ ವಿಡಿಯೊದಲ್ಲಿರುವ ದೃಶ್ಯಗಳನ್ನು ಪ್ರತಿಬಾರಿ ನೋಡಿದಾಗಲೂ ನಾನು ರೋಮಾಂಚನಗೊಳ್ಳುತ್ತೇನೆ’ ಎಂದು ಈ ಮಂಗಳಯಾನ ಕಾರ್ಯಕ್ರಮದಲ್ಲಿ ಕ್ಯಾಮೆರಾ ನಿರ್ವಹಣೆ ತಂಡದ ಮುಖ್ಯಸ್ಥ ಡೇವ್ ಗ್ರುಯೆಲ್ ಪ್ರತಿಕ್ರಿಯಿಸಿದ್ದಾರೆ.
‘ದೃಶ್ಯಗಳು ಅದ್ಭುತವಾಗಿವೆ. ಚಿತ್ರಗಳು ನಮ್ಮನ್ನು ಮೂಕವಿಸ್ಮತರನ್ನಾಗಿಸುತ್ತವೆ. ನಾವೇ ಮಂಗಳ ಗ್ರಹದ ಅಂಗಳದಲ್ಲಿ ಚಲಿಸುತ್ತಿದ್ದೇವೆ ಏನೋ ಎಂಬ ಅನುಭೂತಿ ನೀಡುತ್ತವೆ’ ಎಂದು ಈ ತಂಡದ ಸದಸ್ಯರು ಹೇಳಿದ್ದಾರೆ.
‘ನಮ್ಮ ಕನಸು ನನಸಾಗಿರುವುದನ್ನು ಈ ವಿಡಿಯೊ ಹಾಗೂ ಚಿತ್ರಗಳು ಸಾರುತ್ತವೆ’ ಎಂದು ರೋವರ್ನ ಲ್ಯಾಂಡಿಂಗ್ ಪ್ರಕ್ರಿಯೆಯ ಉಸ್ತುವಾರಿ ಹೊತ್ತ ತಂಡದ ಮುಖ್ಯಸ್ಥ ಅಲ್ ಚೆನ್ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.