ಮಹಿಳಾ ವಿಶೇಷ: ಅಂತರಿಕ್ಷದಲ್ಲಿ ನಡೆದಾಡಲಿದ್ದಾರೆ ನಾಸಾದ ಮಹಿಳಾ ಗಗನಯಾತ್ರಿಗಳು

ಶನಿವಾರ, ಮಾರ್ಚ್ 23, 2019
33 °C

ಮಹಿಳಾ ವಿಶೇಷ: ಅಂತರಿಕ್ಷದಲ್ಲಿ ನಡೆದಾಡಲಿದ್ದಾರೆ ನಾಸಾದ ಮಹಿಳಾ ಗಗನಯಾತ್ರಿಗಳು

Published:
Updated:

ಮಾರ್ಚ್‌ 8 ಮಹಿಳಾ ದಿನ, ಇಡೀ ತಿಂಗಳು ಹತ್ತು ಹಲವು ಮಹಿಳಾ ಕಾರ್ಯಕ್ರಮಗಳಿಗೆ ಮೀಸಲು. ಇದೇ ಸಂದರ್ಭದಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಹಿಳಾ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಅಂಬಾನಿ)ದಲ್ಲಿ ಅಂತರಿಕ್ಷ ನಡಿಗೆ ಕೈಗೊಳ್ಳಲಿದ್ದಾರೆ. 


ಆನ್‌ ಮ್ಯಾಕ್ಲೆನ್‌, ಕ್ರಿಸ್ಟಿನಾ ಕೋಚ್‌

ಗಗನಯಾತ್ರಿಗಳಾದ ಆನ್‌ ಮ್ಯಾಕ್ಲೆನ್‌, ಕ್ರಿಸ್ಟಿನಾ ಕೋಚ್‌ ಹಾಗೂ ಫ್ಲೈಟ್‌ ಕಂಟ್ರೋಲರ್‌ ಜಾಕಿ ಕೇಜಿ ಮಾರ್ಚ್‌ 29ರಂದು ಅಂಬಾನಿಯಿಂದ ಆಕಾಶದಲ್ಲಿ ನಡೆದಾಡಲಿದ್ದಾರೆ. ಅಂಬಾನಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ 59ರಲ್ಲಿ ಮಹಿಳಾ ಗಗನಯಾತ್ರಿಗಳು ಮುಂದಾಳತ್ಬ ವಹಿಸಲಿದ್ದಾರೆ ಎಂದು ನಾಸಾ ಹೇಳಿದೆ. ನಾಸಾ ವೆಬ್‌ಸೈಟ್‌ ಪ್ರಕಾರ, ಗಗನಯಾತ್ರಿಗಳು ಸುಮಾರು ಏಳು ಗಂಟೆಗಳ ಆಕಾಶ ನಡಿಗೆ ನಡೆಸಲಿದ್ದಾರೆ. 

ಇದೇ ಮೊದಲ ಬಾರಿಗೆ ಅಂತರಿಕ್ಷದಲ್ಲಿ ಎಲ್ಲ ಮಹಿಳೆಯರನ್ನೇ ಒಳಗೊಂಡ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಮಾರ್ಚ್‌ 29ರಂದು ನಡೆಯಲಿರುವ ಅಂತರಿಕ್ಷ ನಡಿಗೆ ಇತಿಹಾಸ ನಿರ್ಮಿಸಲಿದೆ. ‘ಅಂತರಿಕ್ಷ ನಡಿಗೆ ಕಾರ್ಯಾಚರಣೆ ಯಾವುದೇ ಕ್ಷಣದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ’ ಎಂದು ನಾಸಾ ವಕ್ತಾರೆ ಕ್ಯಾತ್ರಿನ್‌ ಹ್ಯಾ‌ಮ್‌ಬ್ಲೆಟನ್‌ ಹೇಳಿದ್ದಾರೆ. 

ನಾಸಾದ ಜಾನ್ಸನ್‌ ಸ್ಪೇಸ್‌ ಸೆಂಟರ್‌ನ ಫ್ಲೈಟ್‌ ಕಂಟ್ರೋಲ್‌ ತಂಡವು ಆನ್‌ ಗ್ರೌಂಡ್‌ ಫ್ಲೈಟ್‌ ಡೈರೆಕ್ಟರ್‌ ಮ್ಯಾರಿ ಲಾರೆನ್ಸ್‌ ಹಾಗೂ ನಾಸಾ ಎಂಜಿನಿಯರ್‌ ಕ್ರಿಸ್ಟೆನ್‌ ಫ್ಯಾಕ್ಚಿಯೊಲ್‌ ಅವರನ್ನು ಒಳಗೊಂಡಿರಲಿದೆ. 

‘ಅಂತರಿಕ್ಷ ನಡೆಗೆ ಕೈಗೊಳ್ಳಲಿರುವ ಎಲ್ಲ ಮಹಿಳೆಯರನ್ನೇ ಒಳಗೊಂಡ ಗಗನಯಾತ್ರಿಗಳ ತಂಡಕ್ಕೆ ನಾನು ಸಹಕರಿಸಲಿದ್ದೇನೆ ಎಂದು ಈಗಷ್ಟೇ ತಿಳಿಯಿತು...’ ಎಂದು ಫ್ಯಾಕ್ಚಿಯೊಲ್‌ ಕಳೆದ ವಾರ ಟ್ವಿಟರ್‌ನಲ್ಲಿ ಉತ್ಸುಕತೆ ಹೊರಹಾಕಿದ್ದರು. 

ಶೋಧಕ ನೌಕೆ ಅಥವಾ ಉಪಗ್ರಹದಲ್ಲಿ ತೊಡಕುಂಟಾದಾಗ ಕಾರ್ಯಾಚರಣೆ ನಡೆಸಲು, ಇಲ್ಲವೇ ಹೊಸ ಉಪಕರಣಗಳನ್ನು ಪರೀಕ್ಷಿಸುವ ಸಲುವಾಗಿ ಅಂತರಿಕ್ಷದಲ್ಲಿ ನಡಿಗೆ ಕೈಗೊಳ್ಳಲಾಗುತ್ತದೆ. ಇಂಥ ನಡಿಗೆ ಬಲು ಅಪರೂಪವೂ ಹೌದು. 

ಕಾರ್ಯಾಚರಣೆ 58ರ ಭಾಗವಾಗಿ ಈಗಾಗಲೇ ಆನ್‌ ಮ್ಯಾಕ್ಲೆನ್‌ ಅಂಬಾನಿಯಲ್ಲಿದ್ದಾರೆ. ಕಾರ್ಯಾಚರಣೆ 59 ಮತ್ತು 60ರಲ್ಲಿ ಭಾಗಿಯಾಗಲು ಕ್ರಿಸ್ಟಿನಾ ಕೋಚ್‌ ಮಾರ್ಚ್‌ 14ರಂದು ಅಂತರಿಕ್ಷ ಯಾತ್ರೆ ಕೈಗೊಳ್ಳಲಿದ್ದಾರೆ. ಮ್ಯಾಕ್ಲೆನ್‌, ಕೋಚ್‌ ಹಾಗೂ ಕೇಜಿ 2013ರ ಗಗನಯಾತ್ರಿಗಳ ತಂಡಕ್ಕೆ ಸೇರಿದವರಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !