ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

Published 9 ಏಪ್ರಿಲ್ 2024, 3:30 IST
Last Updated 9 ಏಪ್ರಿಲ್ 2024, 3:30 IST
ಅಕ್ಷರ ಗಾತ್ರ

ನಾರ್ತ್ ಹಡ್ಸನ್: ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.

ಈ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು.

2017ರ ಬಳಿಕ ಉತ್ತರ ಅಮೆರಿಕದ ಮೊದಲ ಪೂರ್ಣ ಗ್ರಹಣ ಇದಾಗಿದೆ. ನ್ಯೂಯಾರ್ಕ್‌ನಲ್ಲೂ ಸೂರ್ಯ ಗ್ರಹಣದ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು.

ಭಾರತದ ಕಾಲಮಾನ ಸೋಮವಾರ ಮಧ್ಯರಾತ್ರಿ ಸೂರ್ಯಗ್ರಹಣ ನಡೆದಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗಿಲ್ಲ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಎಲ್ಲೆಲ್ಲಿ ಗೋಚರ: ಉತ್ತರ ಅಮೆರಿಕ, ಮೆಕ್ಸಿಕೊ, ಕೆನಡಾ, ಯುಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT