ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಸ್ಪೇಸ್ ಎಕ್ಸ್ ಉಡ್ಡಯನ ಯಶಸ್ವಿ

Last Updated 31 ಮೇ 2020, 2:01 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಖಾಸಗಿ ರಾಕೆಟ್ ಕಂಪನಿಯಾಗಿರುವ ಸ್ಪೇಸ್ ಎಕ್ಸ್ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಯಶಸ್ವಿಯಾಗಿದೆ.

ಶನಿವಾರ ರಾತ್ರಿ ಫ್ಲೋರಿಡಾದಿಂದ ಇಬ್ಬರು ನಾಸಾ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ ಎಕ್ಸ್ ಉಡಾವಣೆಯಾಗಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಎಲಾನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ರಾಕೆಟ್ ಕಂಪನಿ ಮಾನವ ಸಹಿತ ಗಗನಯಾನ ಕೈಗೊಂಡಿರುವ ಕಾರಣ ಇದು ಐತಿಹಾಸಿವೆನಿಸಿಕೊಂಡಿದೆ.

ಏನಿದು ಸ್ಪೇಸ್ ಎಕ್ಸ್ ಡೆಮೊ 2 ಮಿಷನ್?
ಸ್ಪೇಸ್ ಎಕ್ಸ್ ಡೆಮೋ- 2 ಮಿಶನ್ ಎನ್ನುವುದು ನಾಸಾದ ವ್ಯಾವಹಾರಿಕ ಮಾನವ ಸಹಿತ ಗಗನಯಾನ ಯೋಜನೆಯಾಗಿದೆ. ರಾಬರ್ಟ್ ಬೆಹೆನ್ಕೆನ್ ಹಾಗೂ ಡೌಗ್ಲಾಸ್ ಹರ್ಲೀ ಎಂಬ ಇಬ್ಬರು ಗಗನ ಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಫಾಲ್ಕಾನ್ 9 ರಾಕೆಟ್ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ರಾತ್ರಿ 12.30- 1.00 ಗಂಟೆಗೆ ಉಡಾವಣೆಯಾಗಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT