ಹುಣ್ಣಿಮೆಯ ಬೆಳದಿಂಗಳಿನ ಬೆಳಕಿಗೆ ಸಾಟಿಯಿಲ್ಲ. ಅದರಲ್ಲೂ ಶರತ್ಕಾಲದ ಆಶ್ವಯುಜ ಆಕಾಶ ಭವ್ಯವಾಗಿರುತ್ತದೆ. ಬಿಳಿಯಾಗಿ ತೇಲುವ ತಿಳಿ ಮೋಡಗಳ ಮಧ್ಯೆ ಬೆಳ್ಳಂ ಬೆಳದಿಂಗಳ ಚಂದ್ರಮ ನೋಡಲು ಮತ್ತಷ್ಟು ಆಕರ್ಷಕ. ಈ ಸುಂದರ ಅನುಭವವನ್ನು ನಮಗೆ ದಕ್ಕಿಸಿಕೊಡುವ ಈ ವರ್ಷದ ‘ಸೂಪರ್ಮೂನ್’ ಸರದಿ ಈಗಾಗಲೇ ಪ್ರಾರಂಭವಾಗಿದೆ. ಇದೇ 7ರಂದು ‘ಸೂಪರ್’ ದರ್ಶನಕ್ಕೆ ಚಂದ್ರಮ ನಾಂದಿ ಹಾಡಿದ್ದಾನೆ. ಇನ್ನುಳಿದ ಸರದಿ ನವೆಂಬರ್ 5 ಹಾಗೂ ಡಿಸೆಂಬರ್ 4ರದು. ಅಂದಿನ ಹುಣ್ಣಿಮೆಗಳು ಸಹ ಸೂಪರ್ಮೂನ್ಗಳೇ ಆಗಿರುತ್ತವೆ.

ಭೂಮಿ ಹಾಗೂ ಚಂದ್ರನ ನಡುವಿನ ಸರಾಸರಿ ದೂರ 3.84 ಲಕ್ಷ ಕಿ.ಮೀ. ಸೂಪರ್ಮೂನ್ ದಿನಗಳಲ್ಲಿ ಈ ದೂರ ಸುಮಾರು 3.61 ಲಕ್ಷ ಕಿ.ಮೀ. ಆಗುತ್ತದೆ. ಅಂದರೆ, ಚಂದ್ರನು ಅಂದು ಭೂಮಿಗೆ ಸುಮಾರು 23 ಸಾವಿರ ಕಿ.ಮೀ.ನಷ್ಟು ಸಮೀಪಕ್ಕೆ ಬರುತ್ತಾನೆ. ಹೀಗಾಗಿ, ಸುಮಾರು 18 ಅಂಶಗಳಷ್ಟು ದೊಡ್ಡದಾಗಿ ಕಾಣಿಸುತ್ತಾನೆ. ಸಹಜವಾಗಿಯೇ ಅಂದು ಬೆಳದಿಂಗಳೂ ಹೆಚ್ಚು.

ಶರತ್ಕಾಲದ ಸೂಪರ್ಮೂನ್ನ ಈ ಬೆಳದಿಂಗಳನ್ನು ಖುದ್ದಾಗಿ ಅನುಭವಿಸಿಯೇ ತೀರಬೇಕು. ತೇಲುವ ಮಂಜುಗಡ್ಡೆಗಳಂತಹ ಬಿಳಿ, ಹಳದಿ ವರ್ತುಲದ ಹ್ಯಾಲೊ ಕೂಡಾ ಅಲ್ಲಲ್ಲಿ ಕಾಣಸಿಗಬಹುದು. ಪ್ರಕೃತಿಯ ಈ ವೈಭವವನ್ನು ಆರಾಧಿಸಿ, ಆಸ್ವಾದಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.