ಬೆಂಗಳೂರಿನ ರಸ್ತೆಯಲ್ಲಿ ಕಾರಿನಲ್ಲೋ ಬೈಕಿನಲ್ಲೋ ಹೋಗುವಾಗ ಹಿಂದಿನವನು/ಳು ಅರ್ಜೆಂಟಿನಲ್ಲಿ ಬಂದು ಕಿವಿತಮಟೆ ಒಡೆದು ಹೋಗುವ ಹಾಗೆ ಹಾರ್ನನ್ನು ಬಾರಿಸಿ, ‘ದಾರಿ ಕೊಡೋ’ ಎನ್ನುವುದೂ, ಅಷ್ಟಾದರೂ ದಾರಿ ಕೊಡದಿದ್ದರೆ, ಸಮೀಪ ಬಂದು ಕೆಟ್ಟ ಪದ ಬಳಸಿ ಬೈದು ‘ಸೈಡಿಗ್ಹೋಕ್ಕಾಗಲ್ವಾ?’ ಎಂದು ರೇಗುವುದೂ ಅತ್ಯಂತ ಸಾಮಾನ್ಯ.

30-40 ಕಿ.ಮೀ. ವೇಗದಲ್ಲಷ್ಟೇ ಹೋಗಬಹುದಾದ ನಗರದ ರಸ್ತೆಗಳಲ್ಲಿ ಹೀಗಾದರೆ, ಹೆದ್ದಾರಿಗಳದ್ದು ಇನ್ನೊಂದು ಸಮಸ್ಯೆ. ನೀವು ನಿಮ್ಮ ಪಾಡಿಗೆ 70-80 ಕಿ.ಮೀ. ವೇಗದಲ್ಲಿ ಒಂದು ಲೇನ್ನಲ್ಲಿ ಹೋಗುತ್ತಿರುತ್ತೀರಿ. ರಸ್ತೆ ಸ್ವಲ್ಪ ಏರುಗತಿಯಲ್ಲಿದ್ದರೆ ಮೈತುಂಬಾ ಭಾರ ಹೊತ್ತ ಲಾರಿಯೊಂದು ನಿಮಗಿಂತ ನಿಧಾನವಾಗಿ 40-50ರಲ್ಲಿ ಹೋಗುತ್ತಿರುತ್ತದೆ. ಹಗಲಿಗಾದರೆ, ಹಿಂದಿನಿಂದ ವಾಹನ ಬರುತ್ತಿದೆಯೋ ಇಲ್ಲವೋ ಎಂದು ನೋಡಿಕೊಂಡು, ಹಿಂದೆ ವಾಹನಗಳು ಬರುತ್ತಿದ್ದರೆ ಅವುಗಳ ವೇಗವನ್ನು ನೋಡಿಕೊಂಡು ಲೇನ್ ಬದಲಿಸಿಕೊಂಡು ಹೋಗುತ್ತೇವೆ. ಆದರೆ, ರಾತ್ರಿ ಸಮಯದಲ್ಲಿ ಸಮಸ್ಯೆ ಇನ್ನೂ ಸಂಕೀರ್ಣವಾಗುತ್ತದೆ. ಹಿಂದೆ ಬರುವ ವಾಹನದ ಹೆಡ್ಲೈಟ್ನಿಂದಲೇ ಅದು ಎಷ್ಟು ವೇಗದಲ್ಲಿದೆ ಅಂದಾಜು ಮಾಡುವುದು ಬಹುತೇಕ ಸಮಯದಲ್ಲಿ ಕಷ್ಟ. ಹಿಂದೆ ಬರುತ್ತಿರುವವನು ‘ನನ್ನಷ್ಟೇ ವೇಗದಲ್ಲಿ ಬರುತ್ತಿದ್ದಾನೆ’ ಎಂದುಕೊಂಡು ನೀವು ಲೇನ್ ಚೇಂಜ್ ಮಾಡುವ ಇಂಡಿಕೇಟರ್ ಹಾಕುವಷ್ಟರಲ್ಲೇ ಧುತ್ತೆಂದು ನಿಮ್ಮ ಹಿಂದೆ ಬಂದು ‘ಡಿಮ್ ಅ್ಯಂಡ್ ಡಿಪ್’ ಮಾಡಿ ಗುದ್ದೇ ಬಿಡುವ ಹಾಗೆ ಹೆದರಿಸುತ್ತಾನೆ.

ಇಂಥ ಸಂದರ್ಭದಲ್ಲಿ ನಮ್ಮ ಹಿಂದಿನ ವಾಹನದ ವೇಗ ಎಷ್ಟಿದೆ, ಅದು ಕಾರಾ? ಟ್ರಕ್ಕಾ? – ಎಂದು ಈಗಿನ ಡಿಜಿಟಲ್ ವ್ಯವಸ್ಥೆಯಲ್ಲಿ ಗೊತ್ತು ಮಾಡಿಕೊಳ್ಳುವ ಹಾಗಿದ್ದರೆ ಹೇಗಿರುತ್ತದೆ?

ಇಂಥದ್ದೊಂದು ತಂತ್ರಜ್ಞಾನವನ್ನು ವರ್ಷಾಂತ್ಯದೊಳಗೆ ಭಾರತದಲ್ಲಿ ಜಾರಿಗೆ ತರುವುದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಟಿದೆ. ಇದನ್ನು ‘ವೆಹಿಕಲ್ ಟು ವೆಹಿಕಲ್ ಕಮ್ಯೂನಿಕೇಶನ್ ಟೆಕ್ನಾಲಜಿ’ ಎಂದು ಕರೆಯಲಾಗುತ್ತದೆ. ಕೆಲವು ದೇಶಗಳಲ್ಲಿ ಈ ತಂತ್ರಜ್ಞಾನ ಈಗಲೇ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ, ಕೆಲವು ದುಬಾರಿ ಕಾರುಗಳಲ್ಲಿ ಸುಮಾರು ಇದೇ ಮಾಹಿತಿ ನೀಡುವ ತಂತ್ರಜ್ಞಾನಗಳಿವೆ. ಆದರೆ, ಅದಕ್ಕೆ ಆ ಕಾರುಗಳು ಬಳಸುವುದು ಸೆನ್ಸರ್ಗಳನ್ನು. ಅಪಘಾತವನ್ನು ತಡೆಯುವ ವಿಷಯದಲ್ಲಿ ಈ ತಂತ್ರಜ್ಞಾನ ಬಹಳ ಸಹಾಯಕಾರಿ.

ಹೇಗೆ ಕೆಲಸ ಮಾಡುತ್ತದೆ?

ಎರಡು ಮೊಬೈಲ್ಗಳು ಹೇಗೆ ಸಂಕೇತಗಳನ್ನು ಕಳುಹಿಸುವ ಮೂಲಕ ಸಂವಹನವನ್ನು ನಡೆಸುತ್ತವೆಯೋ ಹಾಗೆಯೇ ಎರಡು ವಾಹನಗಳು ಇಲ್ಲಿ ಸಂಕೇತಗಳನ್ನು ಕಳುಹಿಸುತ್ತವೆ. ಪ್ರತಿ ವಾಹನಕ್ಕೂ ಪ್ರತ್ಯೇಕ ಸಾಧನವನ್ನು ಅಳವಡಿಸಬೇಕಿರುತ್ತದೆ. ಪ್ರತಿ ವಾಹನಕ್ಕೂ ಸಿಮ್ ಕಾರ್ಡ್ನ ರೀತಿಯ ಗುರುತಿನ ಸಾಧನವೊಂದಿರುತ್ತದೆ. ಅದು ವಾಹನದ ಗುರುತನ್ನು ಹೇಳಿದರೆ, ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಯಲ್ಲಿ ಈ ವಾಹನದ ಸಂಕೇತಗಳು ಅನಿಯಂತ್ರಿತವಾಗಿ ಪ್ರಸಾರವಾಗುತ್ತಿರುತ್ತವೆ. ಅಂದರೆ, ಚಾಲಕ ತನ್ನ ವಾಹನದಿಂದ ಹೊರಡುವ ಸಂಕೇತಗಳನ್ನು ನಿಯಂತ್ರಿಸಲಾಗುವುದಿಲ್ಲ. ಈ ಸಂಕೇತಗಳಿಗೆಂದೇ ಪ್ರತ್ಯೇಕ ತರಂಗಾಂತರಗಳನ್ನು ಸರ್ಕಾರ ನಿಗದಿ ಮಾಡಲಿದ್ದು, ಇದರ ಡೇಟಾ ಎಲ್ಲವೂ ಈ ತರಂಗಾಂತರದ ಮೂಲಕವೇ ಸಾಗಲಿವೆ.

ಹೇಗೆ ಅನುಷ್ಠಾನ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವಂತೆ, 2026ರ ವರ್ಷಾಂತ್ಯದಲ್ಲಿ ಇದನ್ನು ಜಾರಿಗೆ ತರುವ ಯೋಜನೆಯಿದ್ದು, ಆಗಿನಿಂದ ಎಲ್ಲ ಹೊಸ ವಾಹನಗಳಿಗೆ ಈ ತಂತ್ರಜ್ಞಾನ ಅಳವಡಿಕೆ ಕಡ್ಡಾಯವಾಗಲಿದೆ. ಆ ನಂತರದ ಹಂತದಲ್ಲಿ ಹಳೆಯ ವಾಹನಗಳೂ ಕಡ್ಡಾಯವಾಗಿ ಇದನ್ನು ಅಳವಡಿಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ತರಲಾಗುತ್ತದೆ. ಈ ಹಿಂದೆ ‘ಫಾಸ್ಟ್ಯಾಗ್’ ಜಾರಿಗೆ ಬಂದಾಗ ಇದ್ದ ಹಾಗೆ, ಹಳೆಯ ವಾಹನಗಳಿಗೆ ವಾಹನಮಾಲೀಕರೇ ಇದರ ವೆಚ್ಚ ಭರಿಸಬೇಕಿರುತ್ತದೆ. ಈ ಸಾಧನಕ್ಕೆ ವೆಚ್ಚ ಎಷ್ಟಾಗಬಹುದು ಎಂಬ ಅಂದಾಜು ಇನ್ನೂ ಲಭ್ಯವಿಲ್ಲ.

ಹೇಗೆ ಅನುಕೂಲ?

ಈ ತಂತ್ರಜ್ಞಾನ ರಸ್ತೆ ಸುರಕ್ಷತೆಯ ವಿಷಯದಲ್ಲಿ ಅತ್ಯಂತ ಮಹತ್ವದ್ದು. ಹಲವು ಸನ್ನಿವೇಶಗಳಲ್ಲಿ ಇದು ಸಹಾಯಕ. ಮಂಜು ಕವಿದ ಸಮಯದಲ್ಲಿ ನೂರು ಮೀಟರಿಗಿಂತ ಕಡಿಮೆ ದೂರದಲ್ಲಿರುವ ವಾಹನಗಳೂ ಕಾಣಿಸುತ್ತಿರುವುದಿಲ್ಲ. ಆಗ ಈ ತಂತ್ರಜ್ಞಾನದಿಂದ ನಮ್ಮ ಮುಂದೆ ಎಷ್ಟು ದೂರದಲ್ಲಿ ವಾಹನಗಳಿವೆ ಎಂಬ ಮಾಹಿತಿ ಡಿಜಿಟಲ್ ರೂಪದಲ್ಲಿ ತಕ್ಷಣ ಒದಗಿಸುತ್ತಿರುತ್ತದೆ. ಅಲ್ಲದೆ, ಮುಂದಿನ ವಾಹನದ ವೇಗ ಎಷ್ಟು ಎಂಬುದೂ ಗೊತ್ತಾಗುವುದುರಿಂದ, ಮುಂದಿನ ವಾಹನ ಹಠಾತ್ ಬ್ರೇಕ್ ಹಾಕಿದರೆ, ತಕ್ಷಣವೇ ಅದರ ಮಾಹಿತಿ ಸಿಗುತ್ತಿರುವುದರಿಂದ ಅಪಘಾತವನ್ನು ತಪ್ಪಿಸಬಹುದು. ಹಿಂದೆ ಮತ್ತು ಮುಂದೆ ಬರುತ್ತಿರುವ ವಾಹನವಷ್ಟೇ ಅಲ್ಲ, ಅಕ್ಕ ಪಕ್ಕದ ವಾಹನಗಳ ಮಾಹಿತಿಯನ್ನೂ ಇದು ಒದಗಿಸುತ್ತದೆ.

ಯಾವ ಮಾಹಿತಿ ಲಭ್ಯ?

ನಿರ್ದಿಷ್ಟ ದೂರದಲ್ಲಿರುವ ಎಲ್ಲ ವಾಹನಗಳ ವೇಗ, ಅವು ಯಾವ ದಿಕ್ಕಿಗೆ ಸಾಗುತ್ತಿವೆ, ವಾಹನ ಚಾಲಕ ಬ್ರೇಕ್ ಒತ್ತಿದರೆ ಅದರ ಮಾಹಿತಿ, ಅವು ಎಷ್ಟು ಹತ್ತಿರದಲ್ಲಿವೆ ಎಂಬ ಮಾಹಿತಿಯೆಲ್ಲವೂ ತಕ್ಷಣವೇ ಸಿಗುತ್ತವೆ.

ಅತ್ಯಾಧುನಿಕ ADAS

ಇದು ಈಗಾಗಲೇ ಬಹುತೇಕ ದುಬಾರಿ ಕಾರುಗಳಲ್ಲಿರುವ ‘ADAS’, ಎಂದರೆ ‘ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್’ಗೆ ಹೋಲಿಸಿದರೆ ಇನ್ನಷ್ಟು ನಿಖರವಾಗಿರುತ್ತವೆ. ಅಲ್ಲದೆ, ಈ ADASಗೆ ಪೂರಕವಾಗಿಯೂ ಇವು ಕೆಲಸ ಮಾಡುತ್ತವೆ. ADASನಲ್ಲಿಯೂ ಈ ಎಲ್ಲ ಮಾಹಿತಿ ಲಭ್ಯವಿದ್ದರೂ, ಅವು ಸೆನ್ಸರ್ ಆಧರಿಸಿ ಕೆಲಸ ಮಾಡುತ್ತಿರುತ್ತವೆ. ಆದರೆ, ಈ ‘V2V’ ವ್ಯವಸ್ಥೆಯಲ್ಲಿ ರಿಯಲ್ಟೈಮ್ ಡೇಟಾ ವರ್ಗಾವಣೆ ವಿಧಾನ ಬಳಕೆಯಾಗುತ್ತದೆ. ಹೀಗಾಗಿ, V2V ಕಾರು ಇರುವವರಿಗೂ ಹೊಸ ವ್ಯವಸ್ಥೆಗೆ ಬೇಕಾದ ಸಾಧನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಲಿದೆ. ಆದರೆ, ಈ ತಂತ್ರಜ್ಞಾನ ಅಳವಡಿಕೆಯಾದ ನಂತರ ADAS ಇನ್ನಷ್ಟು ನಿಖರವಾಗಿ ಕೆಲಸ ಮಾಡಲಿದೆ.

ಸುರಕ್ಷತೆಗೆ ಆದ್ಯತೆ

ರಸ್ತೆಜಾಲ ವಿಸ್ತಾರವಾಗುತ್ತಿದ್ದ ಹಾಗೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಅಪಘಾತಗಳ ಸಂಖ್ಯೆ ಶೇ 4.18ರಷ್ಟು ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. 2023ರಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಸಾವಿರ ರಸ್ತೆ ಅಪಘಾತಗಳಾಗಿದ್ದು, 1.70 ಲಕ್ಷ ಜನರು ಈ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಡೇಟಾ ಹೇಳುತ್ತದೆ. ಈ ಹಿನ್ನೆಲೆಯಲ್ಲಿ, ನಾವು ರಸ್ತೆಸುರಕ್ಷತೆಯ ವಿಷಯದಲ್ಲಿ ಇಂತಹ ಇನ್ನಷ್ಟು ಆಧುನಿಕ ವಿಧಾನಗಳನ್ನು ಬಳಸುವುದು ಅತ್ಯಂತ ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.