ಬುಧವಾರ, ಮಾರ್ಚ್ 3, 2021
18 °C

ಟೆಲಿಗ್ರಾಂನಲ್ಲಿ 50 ಕೋಟಿ ಫೇಸ್‌ಬುಕ್‌ ಬಳಕೆದಾರರ ಸಂಪರ್ಕ ಮಾಹಿತಿ ಸೋರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌

ಬೆಂಗಳೂರು: ಹ್ಯಾಕರ್‌ಗಳು 2020ರಲ್ಲಿ ಫೇಸ್‌ಬುಕ್‌ ಸರ್ವರ್‌ ಹ್ಯಾಕ್‌ ಮಾಡುವ ಕೋಟ್ಯಂತರ ಬಳಕೆದಾರರ ಮೊಬೈಲ್‌ ಸಂಖ್ಯೆಗಳು ಹಾಗೂ ಫೇಸ್‌ಬುಕ್‌ ಐಡಿಗಳನ್ನು ತಡಕಾಡಿ, ಟೆಲಿಗ್ರಾಂನಲ್ಲಿ ಸೋರಿಕೆ ಮಾಡಿದ್ದಾರೆ.

ಸೈಬರ್‌ಸೆಕ್ಯುರಿಟಿ ತಜ್ಞರೊಬ್ಬರು ಫೇಸ್‌ಬುಕ್‌ನ ಬಳಕೆದಾರರ ದತ್ತಾಂಶ ಹ್ಯಾಕ್‌ ಆಗಿರುವ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಸುಮಾರು 53 ಕೋಟಿ ಬಳಕೆದಾರರ ಸಂಪರ್ಕ ಸಂಖ್ಯೆಗಳು ಮಾರಾಟಕ್ಕಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಹ್ಯಾಕರ್ ಟೆಲಿಗ್ರಾಂ ಆ್ಯಪ್‌ನಲ್ಲಿ ಬೋಟ್‌ ಸೃಷಿಸುವ ಮೂಲಕ ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದು, ಪ್ರತಿ ಸಂಪರ್ಕ ಸಂಖ್ಯೆಗೆ 20 ಡಾಲರ್‌ಗೆ (₹1,458) ಮಾರಾಟ ಮಾಡಲಾಗುತ್ತಿರುವುದಾಗಿ ವರದಿಯಾಗಿದೆ.

ಅಮೆರಿಕ (3.2 ಕೋಟಿ), ಭಾರತ (60 ಲಕ್ಷಕ್ಕೂ ಹೆಚ್ಚು) ಸೇರಿದಂತೆ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿನ ಬಳಕೆದಾರರ ಮಾಹಿತಿ ಅಪಾಯದ ಹಂತದಲ್ಲಿದೆ. ಈವರೆಗೂ ಟೆಲಿಗ್ರಾಂ ಮತ್ತು ಫೇಸ್‌ಬುಕ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ತೆರಿಗೆ ಅಧಿಕಾರಿಗಳು ಅಥವಾ ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದಾಗಿ ಅನಾಮಿಕರಿಂದ ಕರೆಗಳು ಬಂದಾಗ ಬಳಕೆದಾರರು ಎಚ್ಚರವಹಿಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು