ಮಂಗಳವಾರ, ಅಕ್ಟೋಬರ್ 26, 2021
28 °C

ವಿಡಿಯೊ: ವಿಮಾನದಲ್ಲಿ ಪೈಲಟ್‌ ತಂದೆ ಕಂಡು ’ಪಪ್ಪಾ’ ಎಂದು ಕರೆದು ಖುಷಿಪಟ್ಟ ಪುಟಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನದಲ್ಲಿ ಒಂದು ಆನಂದದ ದೃಶ್ಯ...

ತನ್ನ ಪೈಲಟ್‌ ತಂದೆ ಕಂಡ ಪುಟಾಣಿ ಮಗಳಿಗೆ ಸಂಭ್ರಮವೊ ಸಂಭ್ರಮ. ಮುದ್ದಾಗಿ ’ಪಪ್ಪಾ’ ಎಂದು ಕರೆದು ಅಪ್ಪನ ಮನಸ್ಸಿಗೂ, ಸಹ ಪ್ರಯಾಣಿಕರಿಗೂ ಉಲ್ಲಾಸ ಉಂಟು ಮಾಡಿದ ದೃಶ್ಯ ಅದು.

ಬಾಲಕಿ ಶನಾಯಾ ಮೋತಿಹಾರ್‌ ತಾಯಿ ಪ್ರಿಯಾಂಕ ಜೊತೆಗೆ ದೆಹಲಿಯಲ್ಲಿ ಗೋಏರ್‌ ವಿಮಾನ ಹತ್ತಿ ಪ್ರಯಾಣಕ್ಕೆ ಸಿದ್ಧರಾಗಿದ್ದರು. ತಾನಿದ್ದ ವಿಮಾನಕ್ಕೆ ತಂದೆಯೇ ಪೈಲಟ್‌ ಎಂದು ಗೊತ್ತಾಗುತ್ತಿದ್ದಂತೆ ’ಶನಾಯಾ’ ಮುಖದಲ್ಲಿ ಮಂದಹಾಸ ಮೂಡಿತು. ಕಾಕ್‌ಪಿಟ್‌ನಲ್ಲಿ ತಂದೆಯನ್ನು ಕಂಡ ಕೂಡಲೇ  ಖುಷಿಯೋ ಖುಷಿ...ಮುದ್ದಾಗಿ ’ಪಪ್ಪಾ’ ಎಂದು ಕರೆದು ಸಂಭ್ರಮಿಸಿದ ಪರಿಯನ್ನು ಸಹ ಪ್ರಯಾಣಿಕರು ಕಣ್ತುಂಬಿಕೊಂಡರು.

ಈ ದೃಶ್ಯವನ್ನು ಬಾಲಕಿಯ ತಾಯಿ ಪ್ರಿಯಾಂ ಕ ಸೆರೆ ಹಿಡಿದಿದ್ದಾರೆ. ಮಗಳ ಹೆಸರಿನಲ್ಲಿ ಇರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಪ್ರಕಟಿಸಿದ್ದಾರೆ.

 ’ತಾವು ಹೊರಟಿರುವ ವಿಮಾನಕ್ಕೆ ನಿನ್ನ ತಂದೆಯೇ ಪೈಲೆಟ್‌ ಎಂಬುದನ್ನು ಶನಾಯಾಗೆ ಪ್ರಿಯಾಂಕ ತಿಳಿಸಿರಲಿಲ್ಲ. ವಿಮಾನದಲ್ಲೇ ಸರ್ಪ್ರೈಸ್ ನೀಡಲು ಅವರು ಬಯಸಿದ್ದರಂತೆ. ಅಪ್ಪನನ್ನು ನೋಡಿದ ಕೂಡಲೇ ಅವರು ಸಹ ನಮ್ಮೊಂದಿಗೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಶನಾಯಾ ಸಂಭ್ರಮಕ್ಕೆ ಪಾರವೇ ಇರಲಿಲ್ಲ. 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೊ ಸುಮಾರು 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 1.5 ಲಕ್ಷ ಜನರು ಲೈಕ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು