ಸೋಮವಾರ, ಜೂನ್ 1, 2020
27 °C

ಕೇಸರಿ ಚಿತ್ರದ 'ತೇರಿ ಮಿಟ್ಟಿ' ಹಾಡು ಮೂಲಕ ವೈದ್ಯರಿಗೆ ಸಲಾಂ ಹೇಳಿದ ನಟ ಅಕ್ಷಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: 2019ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ಕೇಸರಿ ಚಿತ್ರದ 'ತೇರಿ ಮಿಟ್ಟಿ' ಹಾಡು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಈ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಅರ್ಪಿಸಲಾಗಿದೆ.

'ತೇರಿ ಮಿಟ್ಟಿ' ಹಾಡಿನ ಹೊಸ ಆವೃತ್ತಿಯನ್ನು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದು.  ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಹೇಳಿದ್ದಾರೆ. 

ಇಂದೋರ್‌ನಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯ ದೃಶ್ಯ, ವೈದ್ಯರ ಮೇಲೆ ಹಲ್ಲೆ ನಿಲ್ಲಿಸಿ ಎಂಬ ಪ್ಲೆಕಾರ್ಡ್ ಹಿಡಿದಿರುವುದು, ಬೆಳಗಾವಿಯ ನರ್ಸ್ ಸುನಂದಾಳ ಮಗಳು ಅಮ್ಮಾ ಬಾ ಎಂದು ಅಳುತ್ತಿರುವ ದೃಶ್ಯವೂ ಈ ವಿಡಿಯೊದಲ್ಲಿದೆ.

ಬಿಳಿವಸ್ತ್ರಧಾರಿ ಹೀರೊಗಳಿಗೆ ಈ ಹಾಡು ಅರ್ಪಣೆ ಎಂದು ಟ್ವೀಟ್ ಮಾಡಿರುವ ಅಕ್ಷಯ್ , ವೈದ್ಯರು ದೇವರ ರೂಪ ಎಂದು ಹೇಳುತ್ತಾರೆ. ಆದರೆ ಕೊರೊನಾವೈರಸ್ ವಿರುದ್ಧದ ಈ ಹೋರಾಟದ ಆ ಸಮಯದಲ್ಲಿ ದೇವರೇ ವೈದ್ಯರ ರೂಪದಲ್ಲಿ ಬಂದಿದ್ದಾರೆ ಎಂಬ ಸಂದೇಶವನ್ನು ನೀಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು