ಸೋಮವಾರ, ಜುಲೈ 26, 2021
26 °C

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಕುರಿತ ಆಲಿಯಾ ಸಂತಾಪಕ್ಕೆ ಆಕ್ರೋಶ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂತಾಪ ಸೂಚಿಸಿದ ನಟಿ ಆಲಿಯಾ ಭಟ್‌, ಕರಣ್‌ ಜೋಹರ್‌, ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರ ಟ್ವೀಟ್‌ಗಳಿಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಸುಶಾಂತ್‌ ಸಿಂಗ್‌ ರಜಪೂತ್‌ ಒಂದು ಕಾಲದಲ್ಲಿ ಟಿವಿ ನಟನಾಗಿದ್ದ ಎಂಬ ಕಾರಣಕ್ಕೆ ಆಲಿಯಾ ಸೇರಿದಂತೆ ಹಲವರು ಆತನನ್ನು ತುಚ್ಛವಾಗಿ ಕಂಡಿದ್ದರು. ಆದರೆ, ಆತ ಸಾವಿಗೀಡಾಗಿರುವ ಈ ಸಂದರ್ಭದಲ್ಲಿ ಅವರ ಸಂತಾಪವನ್ನು ಕಂಡರೆ ಅಸಹ್ಯವೆನಿಸುತ್ತದೆ,’ ಎಂದು ಟ್ವಿಟರಿಗರು ಕಿಡಿ ಕಾರಿದ್ದಾರೆ. 

ಇಷ್ಟೇ ಅಲ್ಲ, ಟ್ವಿಟರ್‌ನಲ್ಲಿ ಆಲಿಯಾ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, #Alia ಎಂಬ ಹ್ಯಾಷ್‌ ಟ್ಯಾಗ್‌ ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಟ್ರೆಂಡ್‌ ಕೂಡ ಆಗಿತ್ತು. 

ಆಲಿಯಾ, ಜೋಹರ್‌ ಸಂತಾಪ 

ನೆಟ್ಟಿಗರ ಆಕ್ರೋಶ

‘ಪ್ರಾಮಾಣಿಕವಾಗಿ ಹೇಳುವುದಾದರೆ, ಕರಣ್ ಜೊಹರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಸಂತಾಪವನ್ನು ಓದಿ ನನ್ನ ರಕ್ತ ಇನ್ನಿಲ್ಲದಂತೆ ಕುದಿಯುತ್ತಿದೆ. ಸುಶಾಂತ್‌ ಅವರನ್ನು ಆಲಿಯಾ ಈ ಮೊದಲು ಗೇಲಿ ಮಾಡಿದ್ದರು. ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಗೆ ಸುಶಾಂತ್‌ ಅವರನ್ನು ಕರೆದಿರಲೇ ಇಲ್ಲ,’ ಎಂದು ಕಶ್‌ಮೀರಾ ಮೂರ್ತಿ ಎಂಬುವವರು ಕಿಡಿ ಕಾರಿದ್ದಾರೆ. 

‘ನಮಗೊಬ್ಬ ಕಪಟಿ ಸಿಕ್ಕಿಬಿದ್ದಿದ್ದಾನೆ. ಆತ (ಕರಣ್‌ ಜೋಹರ್‌) ಮತ್ತು ಆಲಿಯಾ ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು  ಟಿವಿ ನಟ ಎಂದು ಅಪಹಾಸ್ಯ ಮಾಡಿದ್ದರು. ಆಲಿಯಾ ಸ್ವಜನಪಕ್ಷಪಾತದ ಸಂಕೇತ, ಕರಣ್ ಅದರ ಪ್ರಚಾರಕ.  ಬಾಲಿವುಡ್ ಸ್ವಾರ್ಥಿಗಳಿಂದ ತುಂಬಿದೆ. ಜನ ಸತ್ತ ಮೇಲೆ ಮಾತ್ರ ಅವರನ್ನು ಇಂಥವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಇಂಥವರ ಚಿತ್ರಗಳನ್ನು ನಾನು ನೋಡುವುದನ್ನೇ ಬಿಟ್ಟಿದ್ದೇನೆ,’ ಎಂದು ಅಮನ್‌ ಶ್ರೀವಾತ್ಸವ ಎಂಬುವವರು ಟ್ವೀಟ್‌ ಮಾಡಿದ್ದಾರೆ. 

ಏನು ಹೇಳಿದ್ದರು ಆಲಿಯಾ? 

ಕರಣ್‌ ಜೊಹರ್‌ ಅವರ ಜನಪ್ರಿಯಾ ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ‘ಈ ಮೂರು ಸೆಲೆಬ್ರೆಟಿಗಳಲ್ಲಿ ಅತಿ ಹೆಚ್ಚು ಮಾದಕವಾಗಿರುವವರನ್ನು ತಿಳಿಸಿ,’ ಎಂದು ಜೊಹರ್‌ ಮೂರು ಹೆಸರುಗಳನ್ನು  ಆಲಿಯಾ ಮುಂದಿಟ್ಟಿದ್ದರು. ರಣವೀರ್‌ ಸಿಂಗ್‌, ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ವರುಣ್‌ ಧವನ್‌ ಆ ಮೂರು ಹೆಸರುಗಳಾಗಿದ್ದವು. ಇದಕ್ಕೆ ಉತ್ತರಿಸಿದ್ದ ಆಲಿಯಾ, ‘ಯಾರು ಸುಶಾಂತ್‌ ಸಿಂಗ್ ರಜಪೂತ್‌’ ಎಂದು ಪ್ರಶ್ನೆ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು