ವಿಷಯ ಪರಾಂಬರಿಸದೆ ಕಾಪಿ ಪೇಸ್ಟ್ ಟ್ವೀಟ್ ಮಾಡಿ ಮುಜುಗರಕ್ಕೊಳಗಾದ ಬಿಜೆಪಿ ನಾಯಕರು

7

ವಿಷಯ ಪರಾಂಬರಿಸದೆ ಕಾಪಿ ಪೇಸ್ಟ್ ಟ್ವೀಟ್ ಮಾಡಿ ಮುಜುಗರಕ್ಕೊಳಗಾದ ಬಿಜೆಪಿ ನಾಯಕರು

Published:
Updated:

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿದೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದೆ. ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಬಿಜೆಪಿ ನೇತಾರರೂ ಅವರ ಬೆಂಬಲಿಗರು ಸಕ್ರಿಯವಾಗಿರುವುದರಿಂದ ಟ್ರೆಂಡಿಂಗ್ ಪೋಸ್ಟ್ ಗಳಲ್ಲಿಯೂ ಬಿಜೆಪಿ ಅಧಿಪತ್ಯ ಸ್ಥಾಪಿಸಿದೆ.

ಹೀಗಿರುವಾಗ ಆಲ್ಟ್ ನ್ಯೂಸ್ ನ ಸಹ ಸಂಪಾದಕ  ಪ್ರತೀಕ್ ಸಿನ್ಹಾ ಬಿಜೆಪಿ ಐಟಿ ಸೆಲ್‍ ತಮ್ಮ ಪಕ್ಷದ ರಾಜಕಾರಣವನ್ನು ಟ್ರೆಂಡಿಂಗ್ ಹೇಗೆ ಮಾಡಿಸುತ್ತದೆ ಎಂಬುದರ ಬಗ್ಗೆ ಲೈವ್ ಪ್ರಾತ್ಯಕ್ಷಿಕೆಯ ವಿಡಿಯೊ ಟ್ವೀಟಿಸಿದ್ದಾರೆ.

ಪ್ರತೀಕ್ ಸಿನ್ಹಾ ಮಾಡಿದ್ದೇನು?
ಭಾರತೀಯ ಜನತಾ ಪಾರ್ಟಿಯ ಟ್ರೆಂಡಿಂಗ್ ಡಾಕ್ಯುಮೆಂಟ್‍ನ್ನು ಹ್ಯಾಕ್ ಮಾಡಿ, ಅದರಲ್ಲಿರುವ ವಿಷಯಗಳನ್ನು ತಿದ್ದಿದ್ದಾರೆ. ಈ ಡಾಕ್ಯುಮೆಂಟ್‍ನಲ್ಲಿದ್ದ ಪಾಸಿಟಿವ್ ಅಂಶಗಳನ್ನು ತಿದ್ದಿ, ಅಲ್ಲಿ ನೆಗೆಟಿವ್ ಸಂಗತಿಗಳನ್ನು ಬರೆದಿದ್ದಾರೆ.

ಬಿಜೆಪಿ ಐಟಿ ಸೆಲ್ ಈ ಡಾಕ್ಯುಮೆಂಟ್‍ನ್ನು ತಮ್ಮ ಪಕ್ಷದ ನಾಯಕರಿಗೆ ಕಳಿಸಿಕೊಟ್ಟಿದ್ದು, ಪಕ್ಷದ ನಾಯಕರು ಅದರಲ್ಲಿ ವಿಷಯ ಏನಿದೆ ಎಂಬುದನ್ನು ನೋಡದೆ ಇದ್ದದ್ದನ್ನು ಹಾಗೆಯೇ ಕಾಪಿ ಪೇಸ್ಟ್ ಮಾಡಿ ಟ್ವೀಟಿಸಿದ್ದಾರೆ. ಬಿಜೆಪಿ ನಾಯಕರು ಯಾಕೆ ಈ ರೀತಿ ಟ್ವೀಟಿಸುತ್ತಿದ್ದಾರೆ ಎಂಬುದನ್ನು ಟ್ವೀಟಿಗರು ಗಮನಕ್ಕೆ ತಂದಾಗಷ್ಟೇ ಬಿಜೆಪಿ ನಾಯಕರಿಗೆ ತಮ್ಮ ಕಾಪಿ ಪೇಸ್ಟ್ ಟ್ವೀಟ್ ಎಡವಟ್ಟು ಗೊತ್ತಾಗಿದ್ದು!  

ಬಿಜೆಪಿ ಐಟಿ ಸೆಲ್‍ನ ಟ್ರೆಂಡಿಂಗ್ ಡಾಕ್ಯುಮೆಂಟ್‍ನ್ನು ತಿದ್ದುತ್ತಿರುವ ವಿಡಿಯೊವನ್ನು ಟ್ವೀಟಿಸಿದ ಸಿನ್ಹಾ, ಅದರ ನಂತರದ ಬೆಳವಣಿಗೆಗಳ ಬಗ್ಗೆಯೂ ಸರಣಿ ಟ್ವೀಟ್ ಮಾಡಿದ್ದಾರೆ.
 

ಬರಹ ಇಷ್ಟವಾಯಿತೆ?

 • 14

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !