ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಹೊಸ ಆವೃತ್ತಿ ಅಪ್‌ಡೇಟ್‌ಗೆ ಗ್ರೀನ್‌ ಸಿಗ್ನಲ್‌; ಬಗೆಹರಿದಿದೆ ಸಮಸ್ಯೆ

Last Updated 23 ಜನವರಿ 2020, 11:27 IST
ಅಕ್ಷರ ಗಾತ್ರ

ಬೆಂಗಳೂರು: ಚುಟುಕು ಸಾಮಾಜಿಕ ಮಾಧ್ಯಮವಾಗಿ ಜನಪ್ರಿಯಗೊಂಡಿರುವ ಟ್ವಿಟರ್‌, ತನ್ನ ಹೊಸ ಆವೃತ್ತಿ ಅಪ್‌ಡೇಟ್‌ ಮಾಡಿಕೊಳ್ಳಲು ಬಳಕೆದಾರರಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ಟ್ವಿಟರ್‌ ಅಪ್ಲಿಕೇಷನ್‌ ಹೊಸ ಆವೃತ್ತಿ ಅಪ್‌ಡೇಟ್‌ ಮಾಡಿಕೊಂಡಆ್ಯಂಡ್ರಾಯ್ಡ್‌ ಬಳಕೆದಾರರು ಕ್ರ್ಯಾಷ್‌ ಸಮಸ್ಯೆ ಎದುರಿಸಿ ಹೈರಾಣಾಗಿದ್ದರು. ಹರಿದು ಬಂದ ದೂರುಗಳಿಂದ ಎಚ್ಚೆತ್ತ ಟ್ವಿಟರ್‌ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ, ಸೂಚಿಸುವವರೆಗೂ ಅಪ್‌ಡೇಟ್‌ ಮಾಡಿಕೊಳ್ಳಬೇಡಿ ಎಂದು ಬುಧವಾರ ತಿಳಿಸಿತ್ತು.

ಮತ್ತೊಂದು ಟ್ವೀಟ್‌ ಮಾಡಿರುವ ಟ್ವಿಟರ್‌ ಸಪೋರ್ಟ್‌, 'ದೋಷ ಸರಿಪಡಿಸಲಾಗಿದ್ದು, ಹೊಸ ಆವೃತ್ತಿ 8.28.2 ಅಪ್‌ಡೇಟ್‌ ಮಾಡಿಕೊಂಡರೆ ಕ್ರ್ಯಾಷ್‌ ಸಮಸ್ಯೆ ಎದುರಾಗುವುದಿಲ್ಲ. ನಿಮಗೆ ಲಭ್ಯವಾದಾಗ ಅಪ್‌ಡೇಟ್‌ ಮಾಡಿಕೊಳ್ಳಲು ಅಡಚಣೆಗಳಿಲ್ಲ. ನಿಮ್ಮ ತಾಳ್ಮೆಗೆ ಧನ್ಯವಾದಗಳು' ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT