ಬೆಂಗಳೂರು: ದೇಶದಾದ್ಯಂತ ಹೋಳಿ ಸಂಭ್ರಮ ಕಳೆಗಟ್ಟಿದೆ. ಯುವಕ–ಯುವತಿಯರು, ಮಕ್ಕಳು, ಮಹಿಳೆಯರು ಬಣ್ಣದಲ್ಲಿ ಮಿಂದೇಳುತ್ತಿದ್ದಾರೆ.

ದೇಶ ವಿದೇಶದ ಅನೇಕ ಗಣ್ಯರು ಭಾರತದ ಪುರಾತನ ಹಬ್ಬವಾದ ಹೋಳಿಗೆ ಶುಭಾಶಯ ಕೋರಿದ್ದಾರೆ.

ಜನಪ್ರಿಯ ಆ್ಯಪಲ್ ಕಂಪನಿ ಸಿಇಒ ಟಿಮ್ ಕುಕ್ ಅವರೂ ಹೋಳಿ ಹಬ್ಬಕ್ಕೆ ವಿಶೇಷ ಶುಭಾಶಯ ತಿಳಿಸಿದ್ದಾರೆ.

ಕುಶಾಗ್ರ ತಿವಾರಿ ಎನ್ನುವ ಭಾರತೀಯರೊಬ್ಬರು ಐಫೋನ್ನಲ್ಲಿ ತೆಗೆದಿರುವ ಯುವತಿಯ ಹೋಳಿ ಸಂಭ್ರಮದ ವಿಶೇಷ ಫೋಟೊವನ್ನು ಹಂಚಿಕೊಂಡು ಟಿಮ್ ಕುಕ್ ಹೋಳಿ ಶುಭಾಶಯ ಕೋರಿದ್ದಾರೆ.

ಕುಶಾಗ್ರ ತಿವಾರಿ ಐಫೋನ್ನಲ್ಲಿ ತೆಗೆದಿರುವ ಈ ಸುಂದರ ಫೋಟೊದಂತೆ ಹೋಳಿ ಹಬ್ಬ ಸುಂದರ, ಸಂತೋಷವಾಗಿರಲಿ ಎಂದು ಆಶಿಸಿದ್ದಾರೆ.
.ಹೊಸಪೇಟೆಯಲ್ಲಿ ಹೋಳಿ ಸಂಭ್ರಮ: ಬಣ್ಣ ಎರಚುತ್ತ ಕುಣಿದಾಡಿದ ಯುವಜನತೆ.ಹೋಳಿ ಬಣ್ಣಗಳ ಸಮಸ್ಯೆಯಿದ್ದರೆ ದೇಶ ಬಿಟ್ಟು ತೊಲಗಿ: ಉ.ಪ್ರದೇಶ ಸಚಿವ ನಿಷಾದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.