ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4Gಯಿಂದ 5Gಗೆ ಅಪ್ಡೇಟ್‌ ಮಾಡುವುದಾಗಿ ಹೇಳಿ ಒಟಿಪಿ ಕೇಳಿದರೆ ಎಚ್ಚರ: ಪೊಲೀಸರ ಸಲಹೆ 

Last Updated 9 ಅಕ್ಟೋಬರ್ 2022, 8:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಅ.1ರಂದು ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಿದರು.

ಅದರ ಬೆನ್ನಿಗೇ ಹಲವು ಟೆಲಿಕಾಂ ಕಂಪನಿಗಳು ಹಲವು ನಗರಗಳಲ್ಲಿ 5ಜಿ ಸೇವೆ ನೀಡಲಾರಂಭಿಸಿವೆ.

ಸದ್ಯ ಆಯ್ದ 13ನಗರಗಳಿಗೆ ಮಾತ್ರವೇ ಜಾರಿಯಲ್ಲಿರುವ 5ಜಿ ಸೇವೆ ಇನ್ನು ಒಂದೆರಡು ವರ್ಷಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ.

ಇನ್ನೊಂದೆಡೆ, ನಾವಿರುವ ನಗರದಲ್ಲಿ 5ಜಿ ಸೇವೆ ಲಭ್ಯವಿದ್ದರೂ, ಅದಕ್ಕೆ ಹೊಂದುವಂಥ ಮೊಬೈಲ್‌ ನಮ್ಮಲ್ಲಿದ್ದರೆ ಮಾತ್ರವೇ ವೇಗದ ಇಂಟರ್‌ನೆಟ್‌ನ ಆಹ್ಲಾದ ಅನುಭವಿಸಲು ಸಾಧ್ಯ. ಇದನ್ನು ಕಂಪನಿಗಳೂ ಗ್ರಾಹಕರಿಗೆ ಸಂದೇಶದ ಮೂಲಕ ತಿಳಿಸುತ್ತಲೇ ಬಂದಿವೆ.

ಆದರೆ, 5ಜಿ ಸೇವೆ ಆರಂಭವಾಗಿದ್ದೇ ತಡ, ಆನ್‌ಲೈನ್‌ ವಂಚಕರೂ ಎದ್ದು ನಿಂತಿದ್ದಾರೆ. 4ಜಿ ಯಿಂದ 5ಜಿಗೆ ನಿಮ್‌ ಸಿಮ್‌ ಕಾರ್ಡ್‌ ಅನ್ನು ಅಪ್ಡೇಟ್‌ ಮಾಡಿಕೊಡುವುದಾಗಿ ಹೇಳಿ ಒಟಿಪಿ ಪಡೆದು ಗ್ರಾಹಕರ ಖಾತೆಗಳ ಹಣ ದೋಚುತ್ತಿದ್ದಾರೆ.

ಈ ಬಗ್ಗೆ ಪೊಲೀಸ್‌ ಇಲಾಖೆ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, 4ಜಿ ಯಿಂದ 5ಜಿಗೆ ಅಪ್ಡೇಟ್‌ ಮಾಡಿಕೊಡುವುದಾಗಿ ಹೇಳಿ ಯಾರಾದರೂ ಕರೆ ಮಾಡಿ, ಒಟಿಪಿ ಕೇಳಿದರೆ ಕೊಡಬಾರದು ಎಂದು ಜನರಿಗೆ ಸಲಹೆ ನೀಡಿದೆ.

ಈ ಸಂಬಂಧ ಪೊಲೀಸರು ಹೊರಡಿಸಿರುವ ಪ್ರಕಟಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT