ಒತ್ತಾಯದಿಂದ ಬಳಕೆದಾರರ ಅನುಮತಿ ಪಡೆದುಕೊಳ್ಳುತ್ತಿರುವ ವಾಟ್ಸ್ಆ್ಯಪ್: ಕೇಂದ್ರ

ಬೆಂಗಳೂರು: ಮೆಸೇಜಿಂಗ್ ಸೇವೆ ಒದಗಿಸುವ ವಾಟ್ಸ್ಆ್ಯಪ್ ಹೊಸ ಪಾಲಿಸಿ ಜಾರಿಗೆ ಒತ್ತಾಯದಿಂದ ಬಳಕೆದಾರರ ಅನುಮತಿ ಪಡೆದುಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಸಂಬಂಧ ದೆಹಲಿ ಹೈಕೋರ್ಟ್ನಲ್ಲಿ ಕೇಂದ್ರ ಹೊಸ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ಹೊಸ ಖಾಸಗಿತನ ನೀತಿಗೆ ಬಳಕೆದಾರರ ಒಪ್ಪಿಗೆ ಪಡೆದುಕೊಳ್ಳಲು ವಾಟ್ಸ್ಆ್ಯಪ್ ಟ್ರಿಕ್ಸ್ ಬಳಸುತ್ತಿದೆ ಎಂದು ತಿಳಿಸಿದೆ.
ಕೇಂದ್ರ ಮತ್ತು ವಾಟ್ಸ್ಆ್ಯಪ್ ನಡುವಣ ಜಟಾಪಟಿ ಮೇ 26ರಿಂದ ಆರಂಭವಾಗಿದ್ದು, ಕೇಂದ್ರ ಸರ್ಕಾರದ ನೂತನ ಸಾಮಾಜಿಕ ತಾಣ ನೀತಿಗೆ ವಿರೋಧ ವ್ಯಕ್ತಪಡಿಸಿ, ವಾಟ್ಸ್ಆ್ಯಪ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಹೊಸ ಐಟಿ ನಿಯಮಗಳ ಅನುಸರಣೆಗೆ ವಿವರ ಹಂಚಿದ ಗೂಗಲ್, ಫೇಸ್ಬುಕ್, ವಾಟ್ಸ್ಆ್ಯಪ್
ಕೇಂದ್ರದ ನೂತನ ನೀತಿಯಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎಂದು ವಾಟ್ಸ್ಆ್ಯಪ್ ಹೇಳಿದ್ದು, ಕೇಂದ್ರ ಸರ್ಕಾರದ ಆದೇಶದ ಅನ್ವಯ ದೇಶದಲ್ಲಿನ ವಾಟ್ಸ್ಆ್ಯಪ್ ಕುಂದುಕೊರತೆ ಮತ್ತು ಸಂಪರ್ಕ, ಕಾರ್ಯಾಚರಣೆ ಅಧಿಕಾರಿಗಳ ವಿವರವನ್ನು ಸಲ್ಲಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.