ಭಾನುವಾರ, ಮಾರ್ಚ್ 7, 2021
32 °C

TikTok Ban: ಟಿಕ್‌ಟಾಕ್ ಸೇರಿದಂತೆ ಚೀನಾ ಆ್ಯಪ್‌ಗಳ ಮೇಲಿನ ನಿರ್ಬಂಧ ಮುಂದುವರಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

TikTok Pixabay

ನವದೆಹಲಿ: ದೇಶದಲ್ಲಿ ಚೀನಾ ಮೂಲದ ಆ್ಯಪ್‌ಗಳ ಮೇಲಿನ ನಿರ್ಬಂಧ ಮುಂದುವರಿದಿದೆ. ಕಿರುಅವಧಿಯ ವಿಡಿಯೋ ರಚಿಸುವ ಆ್ಯಪ್ ಟಿಕ್‌ಟಾಕ್ ಸಹಿತ 59 ವಿವಿಧ ಆ್ಯಪ್‌ಗಳ ಮೇಲಿನ ನಿರ್ಬಂಧ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು. ಅಲ್ಲದೆ, ಜುಲೈನಲ್ಲಿ 77 ಪ್ರಶ್ನಾವಳಿಗಳನ್ನು ಕಳುಹಿಸಿಕೊಟ್ಟು ಅದಕ್ಕೆ ಉತ್ತರಿಸುವಂತೆ ನಿಷೇಧಿತ ಆ್ಯಪ್ ಕಂಪನಿಗಳಿಗೆ ಸೂಚಿಸಿತ್ತು.

ಬಳಕೆದಾರರ ಮೇಲೆ ಪ್ರಭಾವ ಬೀರುವುದು ಮತ್ತು ವಿದೇಶಿ ಸರ್ಕಾರದೊಡನೆ ಮಾಹಿತಿ ಹಂಚಿಕೊಳ್ಳುವ ಆರೋಪ ಚೀನಾ ಮೂಲದ ಆ್ಯಪ್‌ಗಳ ಮೇಲಿದೆ. ಚೀನಾ ಆ್ಯಪ್ ಮೇಲಿನ ನಿರ್ಬಂಧದ ಬಳಿಕ ಅವು ಒದಗಿಸಿದ ಉತ್ತರದ ಬಗ್ಗೆ ಸರ್ಕಾರ ಉತ್ತಮ ಅಭಿಪ್ರಾಯ ಹೊಂದಿಲ್ಲ. ಹೀಗಾಗಿ ನಿಷೇಧಿತ ಆ್ಯಪ್‌ಗಳ ಕಂಪನಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.

ಶಾಶ್ವತ ನಿಷೇಧ

ಚೀನಾ ಮೂಲದ ಆ್ಯಪ್‌ಗಳನ್ನು ದೇಶದಲ್ಲಿ ಶಾಶ್ವತವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ನಿಷೇಧದ ಆದೇಶ ಯಾವಾಗ ಹೊರಬೀಳಲಿದೆ ಎಂದು ಸ್ಪಷ್ಟವಾಗಿಲ್ಲ. ಜತೆಗೆ ಟಿಕ್‌ಟಾಕ್, ನೋಟಿಸ್ ಅನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ಉತ್ತರಿಸುವುದಾಗಿ ಹೇಳಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಪಬ್‌ಜಿ ಸಹಿತ 118 ಆ್ಯಪ್ ನಿಷೇಧಿಸಲಾಗಿತ್ತು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು