ಗುರುವಾರ , ಆಗಸ್ಟ್ 5, 2021
22 °C

ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲೇ ನೀರು ಕುಡಿಯಿರಿ ಎಂದಿದ್ದ ಅಮೃತಾ ರಾವ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Portugal's Cristiano Ronaldo during the press conference UEFA. Credit: Handout via Reuters

ಬೆಂಗಳೂರು: ಜನಪ್ರಿಯ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಪತ್ರಿಕಾಗೋಷ್ಠಿಯಲ್ಲಿ ಕೊಕಾ ಕೋಲಾ ತಂಪುಪಾನೀಯದ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿದ್ದು ದೊಡ್ಡ ಸುದ್ದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಈ ವಿಚಾರವಾಗಿ ಸಾಮಾಜಿಕ ತಾಣಗಳಲ್ಲಿ ವಿವಿಧ ರೀತಿಯ ಚರ್ಚೆ ಕೂಡ ನಡೆಯುತ್ತಿದೆ.

ಅಲ್ಲದೆ, ಕ್ರಿಸ್ಟಿಯಾನೊ ರೊನಾಲ್ಡೊ, ಕೊಕಾ ಕೋಲಾ ಸಂಗತಿ ಕುರಿತು ಹಲವು ಮೀಮ್ಸ್, ಟ್ರೋಲ್ ಕೂಡ ಸೃಷ್ಟಿಯಾಗಿದೆ. ಈ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದ್ದಂತೆ, ವಿವಿಧ ಸಿನಿಮಾಗಳ ಸನ್ನಿವೇಶಕ್ಕೆ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿಕೆಯನ್ನು ಜತೆಯಾಗಿಸಿ ಮೀಮ್ಸ್ ರಚಿಸಲಾಗುತ್ತಿದೆ.

ನಟಿ ಅಮೃತಾ ರಾವ್ ಅವರ ಜಲ್ ಲೀಜಿಯೇ ಎಂಬ ಮೀಮ್ಸ್ ಈಗ ಹೆಚ್ಚು ಸದ್ದು ಮಾಡುತ್ತಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಜತೆಗಿನ ಸನ್ನಿವೇಶಕ್ಕೆ ಹೋಲಿಸಲಾಗಿದೆ.

 

ಅಲ್ಲದೆ, ಅಮೃತಾ ರಾವ್ ಕೂಡ ಈ ಮೀಮ್ ಅನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತೊಂದೆಡೆ, ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿಕೆ ನೀಡುವುದಕ್ಕೂ ಮೊದಲೇ ಅಮೃತಾ ರಾವ್, ನೀರು ಕುಡಿಯಿರಿ ಎಂದು ಹೇಳಿದ್ದಾರೆ ಎಂದು ಜನರು ಅಮೃತಾ ರಾವ್ ಅವರನ್ನು ಹೊಗಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು