ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ, ಹಿಂಸೆ, ಪ್ರಚೋದನೆ ವಿಷಯಗಳು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಳ

Last Updated 2 ಜೂನ್ 2022, 11:41 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ದ್ವೇಷ ಭಾಷಣದ ಪೋಸ್ಟ್‌ಗಳು ಶೇಕಡಾ 37.82ರಷ್ಟು ಹೆಚ್ಚಾಗಿರುವುದಾಗಿ ‘ಮೆಟಾ’ ತಿಳಿಸಿದೆ. ಇದೇ ವೇಳೆ ಇನ್‌ಸ್ಟಾಮ್‌ನಲ್ಲಿ ಹಿಂಸೆ ಮತ್ತು ಪ್ರಚೋದನಕಾರಿ ವಿಷಯಗಳು ಶೇ 86ರಷ್ಟು ಹೆಚ್ಚಾಗಿವೆ ಎಂದು ಸಂಸ್ಥೆ ತನ್ನ ಮಾಸಿಕ ವರದಿಯಲ್ಲಿ ಹೇಳಿದೆ.

ಇದರಲ್ಲಿ ಬಹುಪಾಲು ವಿಷಯಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು ‘ರಿಪೋರ್ಟ್‌’ ಮಾಡುವುದಕ್ಕೂ ಮೊದಲೇ ಪತ್ತೆಯಾಗಿವೆ ಎಂದೂ ಮೆಟಾ ತಿಳಿಸಿದೆ.

ಮೇ 31 ರಂದು ಬಿಡುಗಡೆಯಾದ ವರದಿಯ ಪ್ರಕಾರ, ದ್ವೇಷ ಭಾಷಣ ವಿಷಯವುಳ್ಳ 53,200 ಪೋಸ್ಟ್‌ಗಳನ್ನು ಫೇಸ್‌ಬುಕ್ ಏಪ್ರಿಲ್‌ನಲ್ಲಿ ಪತ್ತೆಹಚ್ಚಿದೆ. ಮಾರ್ಚ್‌ನಲ್ಲಿ ಈ ಸಂಖ್ಯೆ 38,600 ಇತ್ತು. ಒಂದು ತಿಂಗಳಲ್ಲಿ ಶೇ 37.82 ಹೆಚ್ಚಾಗಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನ ಮಾಲೀಕ ಸಂಸ್ಥೆ ‘ಮೆಟಾ’ ಹೇಳಿದೆ.

ಹಿಂಸೆ ಮತ್ತು ಪ್ರಚೋದನೆಗೆ ಸಂಬಂಧಿಸಿದ ವಿಷಯಗಳು ಇನ್‌ಸ್ಟಾಗ್ರಾಮ್‌ನಲ್ಲಿ ಮಾರ್ಚ್‌ನಲ್ಲಿ 41,300 ಇತ್ತು. ಅದು, ಏಪ್ರಿಲ್‌ನಲ್ಲಿ 77,000ಕ್ಕೆ ಏರಿಕೆಯಾಗಿದೆ ಎಂದೂ ‘ಮೆಟಾ’ದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ನಮ್ಮ ಮಾನದಂಡಗಳಿಗೆ ವಿರುದ್ಧವಾಗಿದ್ದ ವಿಷಯಗಳ (ಪೋಸ್ಟ್‌, ಫೋಟೊ, ವಿಡಿಯೊ, ಕಾಮೆಂಟ್‌) ವಿರುದ್ಧ ನಾವು ಕ್ರಮ ಕೈಗೊಂಡಿದ್ದೇವೆ. ಅವುಗಳ ಸಂಖ್ಯೆಯನ್ನು ಲೆಕ್ಕಹಾಕಿದ್ದೇವೆ. ಈ ಅಂಕಿ ಸಂಖ್ಯೆಗಳು ತಮ್ಮ ಕಾರ್ಯವಿಧಾನವನ್ನು ಸಾಬೀತು ಮಾಡುತ್ತಿವೆ’ ಎಂದು ಸಂಸ್ಥೆ ಹೇಳಿದೆ.

‘ ಮಾನದಂಡಗಳಿಗೆ ವಿರುದ್ಧವಾದ ವಿಷಯಗಳನ್ನು ತೆಗೆದು ಹಾಕಲಾಗಿದೆ. ನಾಗರಿಕರಿಗೆ ಅಹಿತ ಎನಿಸುವ ಫೋಟೊ, ವಿಡಿಯೊಗಳನ್ನು ಕವರ್‌ ಮಾಡಲಾಗಿದೆ’ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT