ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಲೈಕ್ ಕೌಂಟ್ ಅಡಗಿಸುವ ಆಯ್ಕೆ

Last Updated 15 ಏಪ್ರಿಲ್ 2021, 3:49 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ಶೀಘ್ರದಲ್ಲೇ ಬಳಕೆದಾರರಿಗೆ ಲೈಕ್ ಕೌಂಟ್ ಅಡಗಿಸುವ ಆಯ್ಕೆಯನ್ನು ನೀಡಲಿದೆ.

ಈ ಮೊದಲು ಫೇಸ್‌ಬುಕ್ ಹೊಸ ಆಯ್ಕೆಯನ್ನು ಕೆಲಸಮಯದವರೆಗೆ ಪರಿಶೀಲನೆ ನಡೆಸಿತ್ತು. ಅದಾದ ಬಳಿಕ ಲೈಕ್ ಕೌಂಟ್ ಹೈಡ್ ಆಯ್ಕೆಯನ್ನು ಹಿಂಪಡೆದಿತ್ತು.

ಆದರೆ ಮತ್ತೆ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡುವ ಬಗ್ಗೆ ಫೇಸ್‌ಬುಕ್ ಚಿಂತನೆ ನಡೆಸಿದೆ. ಇಲ್ಲಿ ಬಳಕೆದಾರರಿಗೆ ಅವರ ಪೋಸ್ಟ್ ಲೈಕ್ಬೇರೆಯವರಿಗೆ ಕಾಣಿಸಬೇಕೆ ಅಥವಾ ಬೇಡವೇ ಎನ್ನುವ ಆಯ್ಕೆ ದೊರೆಯಲಿದೆ.

ಲೈಕ್ ಸಂಖ್ಯೆಯನ್ನು ಮಾತ್ರ ಅಡಗಿಸುವ ಆಯ್ಕೆ ದೊರೆಯಲಿದ್ದು, ಕಮೆಂಟ್ಸ್ ಮಾತ್ರ ಹಾಗೆಯೇ ಇರಲಿದೆ. ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂನ ಆಯ್ಕೆಯನ್ನು ಜನಸಾಮಾನ್ಯರು ಸ್ವಾಗತಿಸಿದರೆ, ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ತಾಣದ ಮೂಲಕ ಗುರುತಿಸಿಕೊಂಡಿರುವ ಹಲವರು ತಮ್ಮ ಜನಪ್ರಿಯತೆಗೆ ಧಕ್ಕೆಯಾಗಬಹುದು ಎಂದಿದ್ದಾರೆ.

ಅದಾಗ್ಯೂ ಲೈಕ್ ಕೌಂಟ್ ಬೇಕೇ ಬೇಡವೇ ಎಂಬ ಬಗ್ಗೆ ಬಳಕೆದಾರರ ಅಭಿಪ್ರಾಯ ಸಂಗ್ರಹಿಸಿ, ನಂತರ ಬೇಡವಾದಲ್ಲಿ ಲೈಕ್ ಸಂಖ್ಯೆಯನ್ನು ಅಡಗಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡುವ ಬಗ್ಗೆ ಫೇಸ್‌ಬುಕ್ ಕ್ರಮ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT