ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಸೇರಿದ ಜನಸ್ತೋಮ ಎಂದು ತೋರಿಸಲು ಬಳಸಿದ್ದು ಹಳೇಫೋಟೊ!

Last Updated 4 ಮೇ 2019, 16:38 IST
ಅಕ್ಷರ ಗಾತ್ರ

ನವದೆಹಲಿ: ವಾರದಹಿಂದೆಯಷ್ಟೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ಧರಣಿ ಸತ್ಯಾಗ್ರಹ ಮಾಡಿದ್ದರು. ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆ ಮಾಡಲು ಬಂದ ಸಿಬಿಐ ಅಧಿಕಾರಿಗಳನ್ನು ಕೋಲ್ಕತ್ತ ಪೊಲೀಸರ ವಶ ಪಡಿಸಿಕೊಂಡ ಘಟನೆ ಫೆಬ್ರುವರಿ 3, ಭಾನುವಾರದಂದು ನಡೆದಿತ್ತು.ಸಿಬಿಐ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಮಮತಾ ಬ್ಯಾನರ್ಜಿ ಮಧ್ಯರಾತ್ರಿ ಧರಣಿ ಕುಳಿತು ಕೇಂದ್ರ ಸರ್ಕಾರ ಮತ್ತು ಸಿಬಿಐ ವಿರುದ್ಧ ಗುಡುಗಿದ್ದರು.

ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ರ‍್ಯಾಲಿ ನಡೆಸಿ ಮಮತಾ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಜಟಾಪಟಿ ಮುಂದುವರಿಯುತ್ತಿದ್ದಂತೆ ಮೋದಿ ಬೆಂಬಲಿಗರು ಪಶ್ಚಿಮ ಬಂಗಾಳದಲ್ಲಿ ಮೋದಿ ರ‍್ಯಾಲಿಗೆ ಸೇರಿದ ಜನಸ್ತೋಮ ಎಂದು ಶೇರ್ ಮಾಡಿರುವ ಫೋಟೊಗಳು ಇತ್ತೀಚಿನ ರ‍್ಯಾಲಿಯದಲ್ಲ. ಇವು ಹಳೇ ಫೋಟೊ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

Narendra Modi for PM ಎಂಬ ಫೇಸ್‍ಬುಕ್ ಪುಟದಲ್ಲಿ ಫೆ.6ರಂದುಮೋದಿಯವರ ರ‍್ಯಾಲಿ ಫೋಟೋ ಶೇರ್ ಆಗಿದೆ.

ಕಡಿಮೆ ಜನರು ಸೇರಿದ್ದರಿಂದ ಸಭೆ ಮೊಟಕುಗೊಳಿಸಿದ್ದನ್ನು ಕೇಳಿದ್ದೇವೆ.ಆದರೆ ಹೆಚ್ಚು ಜನರು ಸೇರಿದ್ದರಿಂದ ಪ್ರಧಾನಿ ಮೋದಿಯವರಿಗೆ ಬಂಗಾಳದಲ್ಲಿ ತಮ್ಮ ಭಾಷಣವನ್ನು ಚುಟುಕುಗೊಳಿಸಬೇಕಾಗಿ ಬಂತು ಎಂಬ ಬರಹದೊಂದಿಗೆ ಈ ಫೋಟೊ ಶೇರ್ ಆಗಿದೆ.

ಇಲ್ಲಿ ನಾಲ್ಕು ಫೋಟೊಗಳಿದ್ದು ಈ ಫೋಟೊಗಳ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಮೊದಲನೇ ಫೋಟೊ

ಮೋದಿ ಭಾಷಣ ಮಾಡುತ್ತಿರುವ ಫೋಟೊ ಇದಾಗಿದ್ದು, ಕಿಕ್ಕಿರಿದು ನಿಂತಿರುವ ಸಭಿಕರನ್ನು ಇಲ್ಲಿ ಕಾಣಬಹುದು.ಆದರೆ ಈ ಫೋಟೋ ಇತ್ತೀಚೆಗೆ ಬಂಗಾಳದಲ್ಲಿ ನಡೆದ ರ‍್ಯಾಲಿಯದ್ದಲ್ಲ.

ಈ ಫೋಟೊದ ಮೂಲ ಪತ್ತೆ ಮಾಡಿದಾಗ ಇದೇ ಫೋಟೊಪ್ರಧಾನಿಯವರ ವೆಬ್‍ಸೈಟ್‍ನಲ್ಲಿದೆ.ಈ ಬಗ್ಗೆ ಮತ್ತಷ್ಟು ಹುಡುಕಿದಾಗಮಾರ್ಚ್ 30 2014ರಂದು ಎನ್‍ಡಿಎ ಪ್ರಧಾನಿ ಅಭ್ಯರ್ಥಿ ಆಗಿರುವ ನರೇಂದ್ರ ಮೋದಿ ಮಹಾರಾಷ್ಟ್ರದ ನಂದೇಡ್‍ನಲ್ಲಿ ಭಾಷಣ ಮಾಡುತ್ತಿರುವ ಫೋಟೋ ಇದು ಎಂಬುದು ತಿಳಿದು ಬಂದಿದೆ.ಅಂದರೆ 4 ವರ್ಷ ಹಿಂದಿನ ಚಿತ್ರ ಇದು!

ಇದು ಹಳೇ ಚಿತ್ರ ಎಂಬುದಕ್ಕೆ ಸಾಕ್ಷ್ಯ ಇಲ್ಲಿದೆ.

ಎರಡನೇ ಚಿತ್ರದ ಮೂಲ ಪತ್ತೆಯಾಗಿಲ್ಲ

ಮೂರನೇ ಚಿತ್ರ


ಈ ಚಿತ್ರದಮೂಲ ಹುಡುಕಿದಾಗ BJP Karnataka Online ಎಂಬ ಫೇಸ್‍ಬುಕ್ ಪುಟದಲ್ಲಿ ಏಪ್ರಿಲ್ 2014ರಂದು ಇದೇ ಫೋಟೊ ಅಪ್‍ಲೋಡ್ ಆಗಿದೆ.

ಇನ್ನಷ್ಟು ಹುಡುಕಿದಾಗ Filmibeat ವೆಬ್‍ಸೈಟ್‍ನಲ್ಲಿ ಇದೇ ಫೋಟೊ ಅಪ್‍ಲೋಡ್ ಆಗಿದ್ದು, ನವೆಂಬರ್ 2013ರಲ್ಲಿ ಕರ್ನಾಟಕದಲ್ಲಿ ನಡೆದ ಮೋದಿ ರ‍್ಯಾಲಿಯ ಫೋಟೊ ಇದಾಗಿದೆ.

ನಾಲ್ಕನೇ ಚಿತ್ರ


ಈ ಚಿತ್ರ ಪಶ್ಚಿಮ ಬಂಗಾಳದ ರ‍್ಯಾಲಿಯದ್ದೇ ಆಗಿದೆ.ಆದರೆ ಇದು ಇತ್ತೀಚಿನ ಚಿತ್ರ ಅಲ್ಲ.2014 ಫೆಬ್ರುವರಿಯಲ್ಲಿ ಇದೇ ಚಿತ್ರ DeshGujarat ನಲ್ಲಿ ಪ್ರಕಟವಾಗಿದೆ.

ಇಲ್ಲಿರುವ ಸುದ್ದಿ ಪ್ರಕಾರ ಕೋಲ್ಕತ್ತದಲ್ಲಿ ನಡೆದ ರ‍್ಯಾಲಿಯ ಚಿತ್ರವಾಗಿದೆ ಇದು.

ಇಲ್ಲಿರುವ ಫೋಟೊಗಳ ಫ್ಯಾಕ್ಟ್ ಚೆಕ್ ಮಾಡಿದ ನಂತರ ತಿಳಿದಿರುವ ವಿಷಯ ಏನೆಂದರೆ ಪಶ್ಚಿಮ ಬಂಗಾಳದಲ್ಲಿ ಮೋದಿ ರ‍್ಯಾಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‍ಲೋಡ್ ಆಗಿರುವ ಈ ಚಿತ್ರಗಳು ಮೋದಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ತೆಗೆದ ಚಿತ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT