ಮಂಗಳವಾರ, ಜನವರಿ 25, 2022
25 °C

ಹೊಸ ಟ್ರೆಂಡ್‌: ಐಫೋನ್‌ ಲಾಕ್‌ ಸ್ಕ್ರೀನ್‌ ಚಾಲೆಂಜ್‌ನಲ್ಲಿ ಮಿಂಚುತ್ತಿರುವ ನಟಿಯರು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ 'ಐಫೋನ್‌ ಲಾಕ್‌ ಸ್ಕ್ರೀನ್‌' ಎಂಬ ನೂತನ ಟ್ರೆಂಡ್‌ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳೆಲ್ಲರೂ ಒಬ್ಬರಾದಂತೆ ಒಬ್ಬರು ಟ್ರೆಂಡ್‌ನಲ್ಲಿ ಪಾಲ್ಗೊಂಡು, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಾಲಿವುಡ್‌ ಸೆಲೆಬ್ರಿಟಿಗಳಾದ ಮಾಧುರಿ ದೀಕ್ಷಿತ್‌, ಗೌಹರ್‌ ಖಾನ್‌, ಕರೀಷ್ಮಾ ತನ್ನ ಈಗಾಗಲೇ ಐಫೋನ್‌ ಲಾಕ್‌ ಸ್ಕ್ರೀನ್‌ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್‌ ವಿಡಿಯೊ ಹಂಚಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

ಲಾಕ್‌ಸ್ಕ್ರೀನ್‌ ಚಾಲೆಂಜ್‌:
'ಐಫೋನ್‌ ಲಾಕ್‌ ಸ್ಕ್ರೀನ್‌' ಚಾಲೆಂಜ್‌ನಲ್ಲಿ ಭಾಗವಹಿಸಲು ಮಾಡಬೇಕಿರುವುದು ಇಷ್ಟೇ, ಫೋನ್‌ ಕ್ಯಾಮೆರಾದ ಮುಂದೆ ಕೆಲವು ಸೆಕೆಂಡುಗಳ ವರೆಗೆ ಸ್ಥಿರವಾಗಿ ಪೋಸ್‌ ನೀಡಬೇಕು. ನಿಮ್ಮ ಭಾವಚಿತ್ರವಿರುವ ಫೋನ್‌ನ ವಾಲ್‌ಪೇಪರ್‌ನಂತೆ ಭಾಸವಾಗುತ್ತದೆ. ಹಿನ್ನೆಲೆಯಲ್ಲಿ ಬರುವ ಗಾಯಕಿ ಚಿತ್ರಲೇಖಾ ಸೇನ್‌ ಮತ್ತು ಡಿಜೆ ಶಾಡೋ ದುಬೈ ಅವರ ಪ್ರಸಿದ್ಧ ಹಾಡು 'ಬಣ್ಣಾ ರೇ'ಗೆ ತಲೆದೂಗಬೇಕು. ಕೆಲವು ಕ್ಷಣಗಳ ನಂತರ ಕಣ್ಣು ಮಿಟುಕಿಸಬೇಕು. ಗಾಯಕಿಯ ಧ್ವನಿ ಕೇಳಿದಂತೆ ತಮಗೆ ಇಷ್ಟವಾದ ಭಂಗಿಯಲ್ಲಿ ಏನಾದರೂ ಮುಖಭಾವ ಬದಲಿಸಬೇಕು.

ದಣಿದ ಕಣ್ಣುಗಳಲ್ಲೇ ಚಾಲೆಂಜ್‌ ಸ್ವೀಕರಿಸಿದ ಸಾನಿಯಾ:
ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಕಾರ್‌ನಲ್ಲಿ ಕುಳಿತೇ ಲಾಕ್‌ಸ್ಕ್ರೀನ್‌ ಚಾಲೆಂಜ್‌ ಸ್ವೀಕರಿಸಿದ್ದಾರೆ. ಗಾಯಕಿಯ ಧ್ವನಿ ಕೇಳುವವರೆಗೆ ಸ್ಥಿರವಾಗಿ ಪೋಸ್‌ ನೀಡಿದ ಸಾನಿಯಾ, ಬಳಿಕ ಕಣ್ಣುಗಳನ್ನು ಮಿಟುಕಿಸಿದ್ದಾರೆ. ನಿದ್ರೆಯಿಲ್ಲದೆ ದಣಿದ ಕಣ್ಣುಗಳ ಬಗ್ಗೆಯೂ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ರಿಯಲ್‌ನಿಂದ ರೀಲ್‌ ಮಾಡಿದ ಮಾಧುರಿ:
ಮಾಧುರಿ ದೀಕ್ಷಿತ್‌ ಕಣ್ಣು ಮಿಟುಕಿಸಿದ್ದು ಮಾತ್ರವಲ್ಲ, ಖುರ್ಚಿಯಲ್ಲಿ ಕುಳಿತೇ ಒಂದು ಸುತ್ತು ತಿರುಗಿ ಸಂಭ್ರಮಿಸಿದ್ದಾರೆ. 'ರಿಯಲ್‌ ನಿಂದ ರೀಲ್‌' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಟಿ ಮುನ್‌ಮುನ್‌ ದತ್ತಾ ಅವರು ಗಲ್ಲದ ಮೇಲೆ ಕೈಯಿರಿಸಿಕೊಂಡು ಲಾಕ್‌ಸ್ಕ್ರೀನ್‌ ಚಾಲೆಂಜ್‌ ಸ್ವೀಕರಿಸಿದ್ದಾರೆ. ಕಣ್ಣು ಮಿಟುಕಿಸಿದ ಬಳಿಕ ಇದ್ದಕ್ಕಿದ್ದಂತೆ ನಗುವಿನ ಕಡಲಲ್ಲಿ ತೇಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು