ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂ| ಚೀನಿ ಹೂಡಿಕೆದಾರ ಹೊರಕ್ಕೆ

Last Updated 11 ಫೆಬ್ರುವರಿ 2021, 17:08 IST
ಅಕ್ಷರ ಗಾತ್ರ

ಬೆಂಗಳೂರು: ದೇಶಿ ಸಾಮಾಜಿಕ ಜಾಲತಾಣ ‘ಕೂ’ ತನ್ನ ಮಾತೃಸಂಸ್ಥೆ ಬಾಂಬಿನೇಟ್‌ ಟೆಕ್ನಾಲಜೀಸ್ ಕಂಪನಿಯ ಇನ್ನೊಂದು ಅಂಗಸಂಸ್ಥೆಯಿಂದ ಚೀನಾ ಹೂಡಿಕೆದಾರರು ಹೊರನಡೆಯುತ್ತಿದ್ದಾರೆ ಎಂದು ತಿಳಿಸಿದೆ. ಚೀನಾ ಮೂಲದ ಶುನ್‌ವೈ ಕಂಪನಿಯು ‘ಬಾಂಬಿನೇಟ್‌’ನ ಇನ್ನೊಂದು ಕಂಪನಿಯಾದ ‘ವೋಕಲ್‌’ನಲ್ಲಿ ಹೂಡಿಕೆ ಮಾಡಿತ್ತು.

‘ಶುನ್‌ವೈ ಕಂಪನಿಯು ವೋಕಲ್‌ ಕಂಪನಿಯಲ್ಲಿ ಹೂಡಿಕೆ ಮಾಡಿತ್ತು, ಅದು ತನ್ನ ಹೂಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆದುಕೊಳ್ಳುತ್ತಿದೆ’ ಎಂದು ಕೂ ಕಂಪನಿಯ ಸಹಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ. ವೋಕಲ್‌ ಜಾಲತಾಣವು ‘ಕೋರಾ’ ಜಾಲತಾಣದ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ಜನ ತಮ್ಮ ಪ್ರಶ್ನೆಗಳನ್ನು ಕೇಳಿ, ತಜ್ಞರಿಂದ ಉತ್ತರ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

‘ಕೂ ಕಂಪನಿಯು ಭಾರತದಲ್ಲಿ ನೋಂದಾಯಿತ ಆಗಿದೆ, ಇದರ ಸಂಸ್ಥಾಪಕರು ಭಾರತದವರು’ ಎಂದು ಅಪ್ರಮೇಯ ಸ್ಪಷ್ಟನೆ ನೀಡಿದ್ದಾರೆ. ಈಚೆಗೆ ಕಂಪನಿಯು ಬಂಡವಾಳ ಸಂಗ್ರಹಿಸಿದಾಗ ಭಾರತದ ಹೂಡಿಕೆ ಸಂಸ್ಥೆಯಾದ 3ಒನ್‌4 ಕ್ಯಾಪಿಟಲ್‌ ಬಂಡವಾಳ ಹೂಡಿದೆ ಎಂದೂ ಅವರ ಟ್ವೀಟ್‌ನಲ್ಲಿ ಹೇಳಲಾಗಿದೆ. ಶುನ್‌ವೈ ಕಂಪನಿಯು ವೋಕಲ್‌ನಲ್ಲಿ ಹೊಂದಿದ್ದ ಷೇರು ಪಾಲು ಎಷ್ಟು ಎಂಬುದರ ವಿವರವನ್ನು ಅಪ್ರಮೇಯ ಅವರು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT